More

    ಮಕ್ಕಳಿಗೆ ವಿದ್ಯೆಯೊಂದಿಗೆ ಸಂಸ್ಕಾರ ಕಲಿಸಬೇಕು

    ಅಥಣಿ ಗ್ರಾಮೀಣ: ಶಿಕ್ಷಣ ಅಮೂಲ್ಯ ಸಂಪತ್ತಾಗಿದ್ದು, ಮಕ್ಕಳಿಗೆ ವಿದ್ಯೆ ಜತೆಗೆ ಸಂಸ್ಕಾರ ಕಲಿಸಲು ಶಿಕ್ಷಕರು ಪಯತ್ನ ಮಾಡಬೇಕು ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

    ಅಥಣಿ ತಾಲೂಕಿನ ದೇವರಡ್ಡೇರಹಟ್ಟಿ, ಹೊಸಟ್ಟಿ, ಮಸರಗುಪ್ಪಿ, ಸಿನಾಳ, ಹುಲಗಬಾಳಿ, ಹಲ್ಯಾಳ ಹಾಗೂ ನಂದಗಾಂವ ಗ್ರಾಮದಲ್ಲಿ 13.23 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಿ, ಬಳಿಕ ಮಸರಗುಪ್ಪಿ ಗ್ರಾಮದಲ್ಲಿ ಶಿಕ್ಷಣ ಇಲಾಖೆ ಮತ್ತು ಗ್ರಾಮಸ್ಥರಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸ್ವೀಕರಿಸಿ ಮಾತನಾಡಿ, ನಬಾರ್ಡ್ ಐಆರ್‌ಡಿಎ್ ಅಡಿ 169 ಶಾಲಾ ಕೊಠಡಿ ಸೇರಿ 35 ಹೆಚ್ಚುವರಿ ಕೊಠಡಿ ಮಂಜೂರು ಮಾಡಿಸಿ ಅಥಣಿ ಮತಕ್ಷೇತ್ರದಲ್ಲಿ 204 ಕೋಣೆಗಳನ್ನು ನಿರ್ಮಿಸಲಾಗಿದೆ. ಭೌತಿಕ ಮೂಲಸೌಕರ್ಯ ಒದಗಿಸುವುದು ಜನಪ್ರತಿನಿಧಿಯ ಕೆಲಸವಾದರೆ, ಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ಜಿಎಲ್‌ಬಿಸಿಯಿಂದ ಕೃಷ್ಣಾ ನದಿಗೆ 0.8 ಟಿಎಂಸಿ ನೀರು ಹರಿಸಿದ ಪರಿಣಾಮ, ಬುಧವಾರದಿಂದ ಕರಿಮಸೂತಿ ಕಾಲುವೆಗೆ ನೀರು ಹರಿದಿದ್ದು ತಾಲೂಕಿನ ಪೂರ್ವ ಭಾಗದ ರೈತರಿಗೆ ಜೀವಕಳೆ ಬಂದಂತಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ತೊಂದರೆಯಾಗದಂತೆ ಕಾಲುವೆಗೆ ನೀರು ಹರಿಸಲಾಗುವುದು. ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮತ್ತು ನಾನು ಸೇರಿ ಕ್ಷೇತ್ರದ ಜನರ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದು, ಹೆಚ್ಚಿನ ಅನುದಾನ ತಂದಿದ್ದೇವೆ. ಶಾಲಾ ಮಕ್ಕಳ ವಿವಿಧ ಸಮಸ್ಯೆ ಮಕ್ಕಳೊಂದಿಗೆ ಚರ್ಚಿಸಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿ, ಅಥಣಿ ತಾಲೂಕಿನಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಶಾಸಕ ಮಹೇಶ ಕುಮಠಳ್ಳಿ ಅವರು 2 ಕೋಟಿ ರೂ.ಅನುದಾನದಿಂದ 50 ಸ್ಮಾರ್ಟ್‌ಕ್ಲಾಸ್ ನಿರ್ಮಿಸಲಾಗುತ್ತಿದೆ. ಈ ವಿಷಯದಲ್ಲಿ ರಾಜ್ಯದಲ್ಲಿ ಮೈಸೂರು ಬಿಟ್ಟರೆ ಅಥಣಿ ದ್ವಿತೀಯ ಸ್ಥಾನದಲ್ಲಿದೆ. ಶಾಲಾ ಮಕ್ಕಳು ಸದುಪಯೋಗ ಪಡೆದುಕೊಂಡು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುವಂತಾಗಬೇಕು ಎಂದರು.

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ರವಿ ಮುರಗಾಲಿ, ಸಾರ್ವಜನಿಕ ಲೋಕೋಪಯೋಗಿ ಎಇಇ ಜಯಾನಂದ ಹಿರೇಮಠ, ಅಭಿಯಂತ ಆರ್.ಪಿ.ಅವತಾಡೆ, ಪ್ರವೀಣ ಸೂರ್ಯವಂಶಿ, ಮುಖಂಡರಾದ ಶೇಖರ ಕನಕರೆಡ್ಡಿ, ಸುರೇಶ ಗುಳಪ್ಪನವರ, ಶಿವಪುತ್ರ ನಾಯಿಕ, ಸಂತೋಷ ಕಕಮರಿ, ಗುರುಪಾದ ಇಂಗಳಗಾಂವ, ಮಲ್ಲಿಕಾರ್ಜುನ ದರೂರ, ಬಸಪ್ಪ ಪಾಟೀಲ, ಶ್ರೀಶೈಲ ನಾಯಿಕ, ಲಕ್ಷ್ಮಣ ಮೆಟಗುಡ್ಡ, ರಮೇಶ ಬೆಳ್ಳಂಕಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts