More

    ಮಕ್ಕಳಿಗೆ ಆಚಾರ-ವಿಚಾರ ಕಲಿಸಿ


    ಎಚ್.ಡಿ.ಕೋಟೆ: ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಕಲಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಸಲಹೆ ನೀಡಿದರು.

    ಪಟ್ಟಣದ ಜೆಎಸ್‌ಎಸ್ ಮಂಗಳ ಮಂಟಪದಲ್ಲಿ ಕೈರಳಿ ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ್ದ ಓಣಂ ಹಬ್ಬ ಉದ್ಘಾಟಿಸಿ ಮಾತನಾಡಿ, ಕೇರಳದಲ್ಲಿ ಓಣಂ ಹಬ್ಬವನ್ನು ಧರ್ಮಾತೀತ, ಜಾತ್ಯತೀತವಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಎಲ್ಲರೂ ಸೇರಿ ತಾಲೂಕಿನಲ್ಲಿ ಆಚರಣೆ ಮಾಡುತ್ತಿರುವುದು ವಿಶೇಷ ಎಂದರು.

    ಜೆಡಿಎಸ್ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ ಮಾತನಾಡಿದರು. ಕಾರ್ಯಕ್ರಮಕ್ಕೂ ಮೊದಲು ತಾಲೂಕು ಆಡಳಿತ ಸೌಧದಿಂದ ಚಂಡೆ ಮತ್ತು ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಮಹಿಳೆಯರು ದೀಪದ ಮೆರವಣಿಗೆ ನಡೆಸಿದರು.

    ಕಾರ್ಯಕ್ರಮದಲ್ಲಿ ಕೈರಳಿ ಸಾಂಸ್ಕೃತಿಕ ಅಧ್ಯಕ್ಷೆ ಮಣಿ, ಉಪಾಧ್ಯಕ್ಷ ಎನ್.ವಿ.ಮಂಜುನಾಥ್, ಕಾರ್ಯಾಧ್ಯಕ್ಷ ಆರ್.ಮಧು, ಕಾರ್ಯದರ್ಶಿ ಕೆ.ಮನೋಜ್, ಖಜಾಂಚಿ ಪುರುಷೋತ್ತಮನ್, ಜೆಡಿಎಸ್ ಮುಖಂಡ ಕೃಷ್ಣನಾಯಕ, ಪುರಸಭೆ ಸದಸ್ಯ ಪ್ರೇಮ್‌ಸಾಗರ್, ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕನ್, ಈಶ್ವರನ್, ಸತ್ಯನ್, ಮುಖಂಡರಾದ ಪ್ರಸಾದ್, ಲಕ್ಷಿತೀರ್ಥ ನರಸಿಂಹ, ಕನ್ನಡ ಪ್ರಮೋದ್ ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts