More

    ಮಕ್ಕಳಲ್ಲಿ ಸಾಹಿತ್ಯ,ಪರಂಪರೆ ಅರಿವು ಮೂಡಿಸಲು ಪಾಲಕರಿಗೆ ಸಲಹೆ

    ಚಿತ್ರದುರ್ಗ: ಕನ್ನಡ ಸಾಹಿತ್ಯ ಮತ್ತು ಪರಂಪರೆ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇ ಶಕ ಎಸ್.ಕೆ.ಮಲ್ಲಿಕಾರ್ಜುನ್ ಹೇಳಿದರು.
    ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ ತಾಲೂಕು ಇಂಗಳದಾಳ್ ತಳವಾರ ಸಂಚಲಪ್ಪ ಪ್ರೌಢ ಶಾಲೆಯಲ್ಲಿ ಬುಧವಾರ ‘ಸಂಭ್ರಮ-50,ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಧ್ಯೇಯ ವಾಕ್ಯದೊಂದಿಗೆ ಏರ್ಪಡಿಸಿದ್ದ ಕನ್ನಡ ಗೀತೆಗಳ ಗಾಯನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ಮಕ್ಕಳಲ್ಲಿ ಸಾಹಿತ್ಯ,ಪರಂಪರೆ ಕುರಿತು ಅರಿವು ಮೂಡಿಸ ಬೇಕೆಂದರು.
    ಸಾಹಿತಿ ಹುರುಳಿ ಬಸವರಾಜ್ ಕನ್ನಡ ನಾಡಿನ ಸಾಹಿತ್ಯ ಸಂಪತ್ತು ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಜಿ.ಪಿ.ಆನಂದಕುಮಾರ್, ಕನ್ನಡ ಪಂಡಿತ ಜಿ.ವಿ.ತೇಜಸ್ವಿ, ಶಿಕ್ಷಕರಾದ ಆರ್.ರುದ್ರಸ್ವಾಮಿ, ಎಚ್.ಧನಂಜಯ, ಎಂ.ರಂಗನಾಥ್, ನಿವೃತ್ತ ಶಿಕ್ಷಕರಾದ ಡಿ.ಆರ್.ಚಕ್ರಪಾಣಿ ಮತ್ತು ಕೆ.ಆದಪ್ಪಸ್ವಾಮಿ, ಸ.ಹಿ.ಪ್ರಾ.ಶಾಲೆ ಮುಖ್ಯಶಿಕ್ಷಕಿ ವಸಂತಮ್ಮ, ಪ್ರಕಾಶ್‌ಬಾದರದಿನ್ನಿ, ಯೋಗಶಿಕ್ಷಕ ಎಂ.ಬಿ.ಮುರುಳಿ ಮಾತನಾಡಿದರು.
    ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಗಾಯನ ತರಬೇತಿ ನೀಡಿದರು. ಹುಯಿಲುಗೋಳ ನಾರಾಯಣರಾಯರ ಉದಯವಾ ಗಲಿ ನಮ್ಮ ಚೆಲುವ ಕನ್ನಡನಾಡು, ಕುವೆಂಪು ವಿರಚಿತ ಎಲ್ಲಾದರು ಇರು ಎಂತಾದರು ಇರು, ದ.ರಾ.ಬೇಂದ್ರೆ ಅವರ ಒಂದೇ ಒಂದೇ ಕರ್ನಾಟಕ ಒಂದೇ, ಸಿದ್ಧಯ್ಯ ಪುರಾಣಿಕರ ಹೊತ್ತಿತೊ ಹೊತ್ತಿತೋ ಕನ್ನಡದ ದೀಪ, ಚನ್ನವೀರ ಕಣವಿಯವರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಗೀತೆಗಳ ಗಾಯನದ ತರಬೇತಿ ನೀಡಲಾಯಿತು. ಎ.ಪಂಕಜ ಮತ್ತು ಎಸ್.ವೇದಾ ಪ್ರಾರ್ಥಿಸಿದರು. ಆರ್.ಲಕ್ಷ್ಮೀ ಸ್ವಾಗತಿಸಿ,ಬಿ. ಲಾವಿಕ ನಿರೂಪಿಸಿದರು. ಎಂ.ಅನುಷಾ ವಂದಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts