More

    ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರಿ


    ಯಾದಗಿರಿ: ಮಾನವೀಯ ಮೌಲ್ಯಗಳುಳ್ಳ ಸಮಾಜ ನಿರ್ಮಾಣ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸುವುದರ ಜತೆಗೆ ಸರ್ವಧರ್ಮಗಳ ಕುರಿತು ಸೌಹಾರ್ದತೆ ಮೂಡಿಸುವ ಅವಶ್ಯಕತೆ ಇದೆ ಎಂದು ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಎಸ್.ಘಂಟಿ ಕರೆ ನೀಡಿದರು.
    ಶನಿವಾರ ತಾಲೂಕಿನ ಭೀಮರಾಯನ ಗುಡಿಯ ಕೃಷಿ ಮಹಾವಿದ್ಯಾಲಯದಲ್ಲಿ ಕಸಾಪದಿಂದ ಆಯೋಜಿಸಿದ್ದ ಕನ್ನಡ ವಿದ್ಯಾಸ್ಪೂರ್ತಿ ಪ್ರಶಸ್ತಿ ವಿತರಣಾ ಸಮಾರಂಭ ಹಾಗೂ ಭವಿಷ್ಯತ್ತಿನ ಭಾರತದಲ್ಲಿ ವಿದ್ಯಾಥರ್ಿಗಳ ಪಾತ್ರ ವಿಚಾರ ಸಂಕಿರಣದಲ್ಲಿ ಮಾತನಾಡಿ, ವಿದ್ಯಾರ್ಥಿ ಶಿಸ್ತು, ಬದ್ಧತೆ, ಪ್ರಾಮಾಣಿಕತೆ ಜತೆಗೆ ಸಹಬಾಳ್ವೆ ಪರಂಪರೆಯ ತತ್ತ್ವಗಳನ್ನು ಬಿತ್ತಬೇಕಿದೆ. ಭವಿಷ್ಯತ್ತಿನ ಭಾರತದ ಕಲ್ಪನೆಯ ಕನಸಿನ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು ಅವಶ್ಯವಾಗಿದೆ ಎಂದರು.
    ಪ್ರತಿ ಧರ್ಮವೂ ತನ್ನದೇ ವಿಶೇಷತೆ ಹೊಂದಿದ್ದು, ಮಾನವೀಯ ಮೌಲ್ಯಗಳನ್ನೇ ಸಾರುತ್ತವೆ. ಹೀಗಾಗಿ ಮಕ್ಕಳಲ್ಲಿ ಸೂಕ್ತಪ್ರಜ್ಞೆ ಮೂಡಿಸುವ ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರಬೇಕಿದೆ. ಸೂಕ್ಷ್ಮವಾದ ಮನಸ್ಸುಳ್ಳ ಮಕ್ಕಳಲ್ಲಿ ಪರಿಶುದ್ಧವಾದ ಚರಿತ್ರೆ, ಈ ನಾಡು-ನುಡಿಗೆ ಸೇವೆ ಸಲ್ಲಿಸಿದ ಮಹನೀಯರ, ಸ್ವಾತಂತ್ರ್ಯ ಹೋರಾಟಗಾರರ ಕೋಮು ಸೌಹಾರ್ದತೆ ಸಾರುವ ಸಾಧು-ಸಂತರ ಜೀವನ ಚರಿತ್ರೆಗಳನ್ನು ತಿಳಿಸಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು.
    ಶಾಸಕ ಶರಣಬಸಪ್ಪ ದರ್ಶನಾಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾಥರ್ಿಗಳ ಜೀವನದಲ್ಲಿ ನೈತಿಕ ಸದ್ಗುಣಗಳಾದ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ಸಹನೆ, ಅನುಕಂಪ, ಸತ್ಯ, ನ್ಯಾಯ, ಸಚ್ಚಾರಿತ್ರ್ಯ, ಮೊದಲಾದ ಗುಣಗಳನ್ನು ಬೆಳೆಸುವ ಅಗತ್ಯವಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts