More

    ಮಕ್ಕಳಲ್ಲಿ ಮಾನವೀಯ ಮೌಲ್ಯ ತುಂಬಿ

    ಯಾದಗಿರಿ: ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವನ್ನು ನೀಡುವುದು ಅಗತ್ಯವಾಗಿದೆ ಎಂದು ದೇವಾಪುರದ ಶ್ರೀ
    ಶಿವಮೂತರ್ಿ ಶಿವಾಚಾರ್ಯರು ಸಲಹೆ ನೀಡಿದರು.

    ಜಿಲ್ಲೆಯ ಹುಣಸಗಿ ಪಟ್ಟಣದ ಯುಕೆಪಿ ಕ್ಯಾಂಪ್ನಲ್ಲಿ ಆಯೋಜಿಸಿದ್ದ ಆಶಿವರ್ಾದ ಗ್ಲೋಬಲ್ ಶಾಲೆಯ 4ನೇ ವಾಷರ್ಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯ ಎಷ್ಟೇ ಶಿಕ್ಷಣ ಪಡೆದರೂ ಸಂಸ್ಕಾರವಿಲ್ಲದಿದ್ದರೆ ಪ್ರಯೋಜನವಾಗದು. ಹೀಗಾಗಿ ಶಿಕ್ಷಕರು ಮತ್ತು ಪಾಲಕರು ಮಕ್ಕಳಲ್ಲಿ ಮಾನವೀಯ ಮೌಲ್ಯಗಳ ಬಗ್ಗೆ ತಿಳಿಸಲು ಪ್ರಯತ್ನಿಸಬೇಕು ಎಂದು ನುಡಿದರು.
    ಈ ಭಾಗದ ಪ್ರತಿ ಮಗುವಿಗೂ ಒಳ್ಳೆಯ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಆಶರ್ಿವಾದ ಗ್ಲೋಬಲ್ ಶಾಲೆ ಪ್ರಾರಂಭಿಸಲಾಗಿದೆ. ಶಾಲೆಯ ಕಾರ್ಯ ಚಟುವಟಿಕೆಗಳು ಉತ್ತಮವಾಗಿ ನಡೆದುಕೊಂಡು ಬರುತ್ತಿವೆ ಎಂದು ಶ್ಲಾಘಿಸಿದರು.

    ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಗಿರೀಶ್ ಹೆಬ್ಬಾರ್, ಸಂಸ್ಥೆಯ ಅಧ್ಯಕ್ಷ ಡಾ.ವೀರಭದ್ರಗೌಡ ಹೊಸಮನಿ, ಜಿ.ಪಂ.ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್, ಮಾಜಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಶರಣು ದಂಡಿನ್, ವೀರೇಶ.ಬಿ.ಚಿಂಚೋಳಿ, ಶರಣಯ್ಯ ಹೀರೆಮಠ, ಸೌದಗಾರ್ ಪವಾರ್, ಪರಮಾನಂದ ಚೆಟ್ಟಿ, ವಿಜಯಕುಮಾರ ಗುಡಗುಂಟಿ, ಪ್ರಕಾಶ.ಎಂ.ಪಿ, ಲಿಂಗರಾಜ ಪಾಟೀಲ, ಸಂಸ್ಥೆಯ ಉಪಾಧ್ಯಕ್ಷ ಡಾ.ಚನ್ನಬಸವನಗೌಡ, ಪಿಎಸ್ಐ ಚಿದಾನಂದ ಸೌದಿ ಇದ್ದರು.

    ಶಿಕ್ಷಕಿ ಚೈತ್ರಾ ಮಹಲೆ ಸ್ವಾಗತಿಸಿದರು. ಬಾಪುಗೌಡ ವಂದಾಲಿ ಪ್ರಾಥರ್ಿಸಿದರು. ಎಸ್.ಎಸ್.ಮಾರನಾಳ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts