More

    ಮಂತ್ರಿಗಳು, ಅಧಿಕಾರಿಗಳ ಭೇಟಿ

    ಹುಕ್ಕೇರಿ: ಹುಕ್ಕೇರಿ ಮತಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳು ರಾಜ್ಯದ ಜನರು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿವೆ. ಇದೇ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ಅವುಗಳನ್ನು ಪರಿಶೀಲಿಸಲು ಮಂತ್ರಿ ಮಹೋದಯರು ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಆಗಮಿಸಲಿದ್ದಾರೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ತಿಳಿಸಿದರು.
    ಇಲ್ಲಿನ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಸೋಮವಾರ ಜನರ ಕುಂದು ಕೊರತೆ ಆಲಿಸಿ ಅವರು ಮಾತನಾಡಿದರು.

    ನಮ್ಮಣ್ಣ ಮಾಜಿ ಸಚಿವ ದಿ.ಉಮೇಶ ಕತ್ತಿ ಜಿಲ್ಲಾಡಳಿತ ಮತ್ತು ತಾಲೂಕಾಡಳಿತದ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗುವಂತೆ ಶಾಲಾ ಆವರಣದಲ್ಲಿ ಸುಂದರ ಆಟೋಟದ ಮೈದಾನ, ಪೇವರ್ಸ್‌ ಅಳವಡಿಕೆ, ರೈತರಿಗೆ ನೀರಾವರಿ ಕೊರತೆಯಾಗದಂತೆ ಕೆರೆಗಳಿಗೆ ನೀರು ತುಂಬಿಸುವ ಕಾಯಕ, ಸಮರ್ಪಕ ರಸ್ತೆ ನಿರ್ಮಿಸಲು ಆದೇಶಿಸಿದ್ದರು. ಅದರ ಪ್ರಕಾರ ಅಧಿಕಾರಿಗಳು ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳುತ್ತವೆ ಎಂದು ತಿಳಿಸಿದರು.

    ಕೊಟಬಾಗಿ ಏತ ನೀರಾವರಿಯಿಂದ ಹುಲ್ಲೋಳಿ, ಬೆಳವಿ ರೈತರ ಕೆಲ ಜಮೀನುಗಳಲ್ಲಿ ಜವುಗು ಉಂಟಾಗಿ ಕಬ್ಬು ಕಳುಹಿಸಲು ತೊಂದರೆಯಾಗುತ್ತಿದೆ ಎಂಬ ಅಹವಾಲಿಗೆ ಸ್ಪಂದಿಸಿದ ರಮೇಶ ಕತ್ತಿ, ನೀರಾವರಿ ನಿಗಮದ ಅಧಿಕಾರಿಗಳಿಗೆ ೆನ್ ಮೂಲಕ ಸಂಪರ್ಕಿಸಿ ಕಾಲುವೆಗೆ ಕಡಿಮೆ ಪ್ರಮಾಣದಲ್ಲಿ ನೀರು ಹರಿಸುವಂತೆ ಸೂಚಿಸುವ ಜತೆಗೆ ಬೇಸಿಗೆಯಲ್ಲಿ ಬಿರುಕು ಬಿಟ್ಟ ಕಾಲುವೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
    ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸುಭಾಸ ಪಾಟೀಲ, ನಿರ್ದೇಶಕ ಪರಗೌಡ ಪಾಟೀಲ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಪ್ಪ ನಾಯಿಕ, ತಾಪಂ ಮಾಜಿ ಸದಸ್ಯ ಬಾಳಾಸಾಹೇಬ ನಾಯಿಕ, ಹಿರಾ ಶುಗರ್ಸ್‌ ನಿರ್ದೇಶಕರಾದ ಅಶೋಕ ಪಟ್ಟಣಶೆಟ್ಟಿ, ಬಸವರಾಜ ಮರಡಿ, ಸುರೇಶ ದೊಡ್ಡಲಿಂಗನವರ, ಗುರುರಾಜ ಕುಲಕರ್ಣಿ, ಜಯಗೌಡ ಪಾಟೀಲ, ಸುನೀಲ ನೇರಲಿ, ಶಶಿಕಾಂತ ದೊಡ್ಡಲಿಂಗನವರ, ಕೆಂಪಣ್ಣ ಉರಬಿನಟ್ಟಿ, ರಾಮಚಂದ್ರ ಜೋಶಿ, ಮಹಾನಿಂಗ ಸನದಿ, ರಾಜು ಮುನ್ನೋಳಿ, ಚನ್ನಪ್ಪ ಗಜಬರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts