More

    ಮಂಡ್ಯ ಜಿಲ್ಲೆಯಲ್ಲಿ 586 ಸೋಂಕಿತರು

    ಒಂದೇ ದಿನ 29 ಜನರಲ್ಲಿ ಪಾಸಿಟಿವ್ , 14 ಜನರು ಆಸ್ಪತ್ರೆಯಿಂದ ಬಿಡುಗಡೆ

    ಮಂಡ್ಯ: ಜಿಲ್ಲೆಯಲ್ಲಿ ಮಂಗಳವಾರ 29 ಜನರಲ್ಲಿ ಕರೊನಾ ಸೋಂಕು ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 586ಕ್ಕೇರಿದೆ. ಅಂತೆಯೇ, ಚಿಕಿತ್ಸೆ ಪಡೆದ 14 ಜನರು ಚೇತರಿಸಿಕೊಂಡಿದ್ದಾರೆ. ಆರೋಗ್ಯ ಇಲಾಖೆ ಪ್ರಕಟಿಸಿದ ಹೆಲ್ತ್ ಬುಲೆಟಿನ್‌ನಲ್ಲಿ ಇಪ್ಪತ್ತು ಜನ ಪುರುಷರು ಮತ್ತು 9 ಮಹಿಳೆಯರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಬೆಂಗಳೂರಿನಿಂದ ಮಂಡ್ಯ ಮತ್ತು ಮದ್ದೂರು ತಾಲೂಕಿಗೆ ಬಂದ ತಲಾ ಒಬ್ಬರು, ಪಿ-10142 ಸೋಂಕಿತನ ಸಂಪರ್ಕದಲ್ಲಿದ್ದ ಮಂಡ್ಯ ಮತ್ತು ಮದ್ದೂರು ತಾಲೂಕಿನ ತಲಾ ಒಬ್ಬರು, ಪಿ-15251 ಸೋಂಕಿತನ ಸಂಪರ್ಕದಲ್ಲಿದ್ದ ಮಳವಳ್ಳಿ ತಾಲೂಕಿನ ವ್ಯಕ್ತಿ, ಪಿ-15253 ಸೋಂಕಿತನ ಸಂಪರ್ಕದಲ್ಲಿದ್ದ ಮಂಡ್ಯ ತಾಲೂಕಿನ ವ್ಯಕ್ತಿ, ಪಿ-16628 ಸೋಂಕಿತನ ಸಂಪರ್ಕದಲ್ಲಿದ್ದ ಮಳವಳ್ಳಿ ತಾಲೂಕಿನ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ.
    ಅಂತೆಯೇ, ಪಿ-18042 ಸೋಂಕಿತನ ಸಂಪರ್ಕದಲ್ಲಿದ್ದ ಮಂಡ್ಯ ತಾಲೂಕಿನ ಮೂವರು, ಮೈಸೂರು ಜಿಲ್ಲೆಯ ಒಬ್ಬನಲ್ಲಿ ಕರೊನಾ ಖಚಿತವಾಗಿದೆ. ಪಿ-19907 ಸೋಂಕಿತನ ಸಂಪರ್ಕದಲ್ಲಿದ್ದ ಪಾಂಡವಪುರ ತಾಲೂಕಿನ ಇಬ್ಬರು, ಮಂಡ್ಯ ತಾಲೂಕಿನ ಒಬ್ಬನಲ್ಲಿ, ಪಿ 19908 ಸೋಂಕಿತನ ಸಂಪರ್ಕದಲ್ಲಿದ್ದ ಪಾಂಡವಪುರ ತಾಲೂಕಿನ ಇಬ್ಬರು, ಪಿ-16623 ಸೋಂಕಿತನ ಸಂಪರ್ಕದಲ್ಲಿದ್ದ ಮಂಡ್ಯ ತಾಲೂಕಿನ ವ್ಯಕ್ತಿಗೆ, ಪಿ-19907 ಸೋಂಕಿತನ ಸಂಪರ್ಕದಲ್ಲಿದ್ದ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲೂಕಿನ ತಲಾ ಒಬ್ಬರಿಗೆ, ಪಿ-25217 ಸೋಂಕಿತನ ಸಂಪರ್ಕದಲ್ಲಿದ್ದ ಶ್ರೀರಂಗಪಟ್ಟಣ ತಾಲೂಕಿನ ವ್ಯಕ್ತಿಗೆ, ಪಿ-16624 ಸೋಂಕಿತನ ಸಂಪರ್ಕದಲ್ಲಿದ್ದ ನಾಲ್ವರಲ್ಲಿ ಸೋಂಕು ದೃಢವಾಗಿದೆ. ಇನ್ನು ಶ್ರೀರಂಗಪಟ್ಟಣದ ಇಬ್ಬರು, ಮಂಡ್ಯ ತಾಲೂಕಿನ ಇಬ್ಬರು ಹಾಗೂ ಪಾಂಡವಪುರ ತಾಲೂಕಿನ ಒಬ್ಬನಲ್ಲಿ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗಂಟಲಿನ ದ್ರವ ಪರೀಕ್ಷೆಗೊಳಪಡಿಸಿದಾಗ ಸೋಂಕು ತಗುಲಿರುವುದು ಖಚಿತವಾಗಿದೆ.
    ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮದ್ದೂರು ತಾಲೂಕಿನ ಏಳು, ಪಾಂಡವಪುರದ ಮೂವರು, ಮಳವಳ್ಳಿಯ ಇಬ್ಬರು, ಕೆ.ಆರ್.ಪೇಟೆ ಹಾಗೂ ಮಂಡ್ಯ ತಾಲೂಕಿನ ತಲಾ ಒಬ್ಬೊಬ್ಬರು ಚೇತರಿಸಿಕೊಂಡಿದ್ದಾರೆ. ಈ ಮೂಲಕ ಗುಣಮುಖರಾದವರ ಸಂಖ್ಯೆ 383ಕ್ಕೇರಿದೆ. ಇನ್ನು 198 ಜನರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts