More

    ಭ್ರಷ್ಟಾಚಾರ ಮುಕ್ತ ನಾಡು ಕಟ್ಟೋಣ – ಪವನ ಕತ್ತಿ

    ಕಬ್ಬೂರ: ಅಧಿಕಾರಿಗಳು ಕೇಳಿದ ಕಾಗದ ಪತ್ರಗಳನ್ನು ಪಾಮಾಣಿಕವಾಗಿ ಒದಗಿಸುವ ಮೂಲಕ ಸರ್ಕಾರಿ ಕೆಲಸ ಮಾಡಿಸಿಕೊಳ್ಳಬೇಕೇ ಹೊರತು ಯಾವುದೆ ಅಧಿಕಾರಿಗಳಿಗೂ ಲಂಚ ಕೊಡಬಾರದು ಎಂದು ಜಿಪಂ ಮಾಜಿ ಸದಸ್ಯ ಪವನ ಕತ್ತಿ ಹೇಳಿದರು.

    ಸಮೀಪದ ಜಾಗನೂರ ಗ್ರಾಮದ ಹನುಮಾನ ಮಂದಿರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂದ ಹಾಗೂ ಬೆಳಗಾವಿಯ ಕ್ರಿಬ್ಕೋ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ತಡೆ ಜಾಗೃತಿ ಸಪ್ತಾಹ ಮತ್ತು ಸಹಕಾರ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಹೋರಾಟದ ಮೂಲಕವೇ ಪಡೆದುಕೊಳ್ಳುವಂತಹ ಕೆಟ್ಟ ಪರಿಸ್ಥಿತಿ ಬಂದೊದಗಿರುವುದು ವಿಷಾದನೀಯ ಸಂಗತಿ.

    ಇಂದು ಪ್ರತಿಯೊಂದು ೇತ್ರದಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅದರ ವಿರುದ್ಧ ಹೋರಾಟ ನಡೆಸುವ ಮೂಲಕ ಭ್ರಷ್ಟಾಚಾರ ಮುಕ್ತ ನಾಡನ್ನು ಕಟ್ಟಲು ನಾವೆಲ್ಲರೂ ಮುಂದಾಗಬೇಕಾಗಿದೆ ಎಂದು ಹೇಳಿದರು. ಜಾಗನೂರ ಪಿಕೆಪಿಎಸ್​ ರೈತರಿಗೆ ಬಡ್ಡಿ ರಹಿತ ಸಾಲದ ಜತೆಗೆ ಟ್ರ್ಯಾಕ್ಟರ್​ ಖರೀದಿ, ಪೈಪ್​ಲೈನ್​, ಎಮ್ಮೆ ಹಾಗೂ ಹಸು ಖರೀದಿಗೆ ಮತ್ತು ಬಿತ್ತನೆ&ಬೀಜ ಗೊಬ್ಬರವನ್ನು ರೈತರಿಗೆ ಒದಗಿಸುವ ಮೂಲಕ ರೈತರ ಮನ ಗೆದ್ದಿದೆ. ಜತೆಗೆ ಸಂವು ಜಿಲ್ಲೆಯಲ್ಲಿಯೇ ಮೂರನೇ ಸ್ಥಾನಗಳಿಸುವ ಮೂಲಕ 1.13 ಕೋಟಿ ರೂ. ಲಾಭಗಳಿಸುವ ಮೂಲಕ ಒಂದು ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.

    ರಾಜ್ಯೋತ್ಸವ ಪ್ರಶಸ್ತಿ ಪುರಸತ ಶಿಲ್ಪ ಕಲಾವಿದ ಹನುಮಂತ ಹುಕ್ಕೇರಿ ಹಾಗೂ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ವಿರೂಪಾಕ್ಷಿ ಕವಟಗಿ ಅವರನ್ನು ಸತ್ಕರಿಸಲಾಯಿತು. ವಕೀಲ ಎಸ್​.ಡಿ.ಚೌಗಲಾ, ಕ್ರಿಬ್ಕೋ ಸಂಸ್ಥೆಯ ರಾಜ್ಯ ಮಾರಾಟ ವ್ಯವಸ್ಥಾಪಕ ಎಸ್​.ಅರುಣಾಚಲಂ, ಕೆ.ಮುತ್ತುರಾಮಲಿಂಗಂ ಮಾತನಾಡಿದರು. ಪಿಕೆಪಿಎಸ್​ ಅಧ್ಯಕ್ಷ ಹನುಮಂತ ರಬಕವಿ ಅಧ್ಯಕ್ಷತೆ ವಹಿಸಿದ್ದರು.

    ರವೀಂದ್ರ ಆಲಗೂರೆ, ವಕೀಲ ಎಂ.ಬಿ.ಪಾಟೀಲ, ಶಿವರಾಯಿ ಸನದಿ, ರಾಮಪ್ಪ ಪುಕಾಟೆ, ಗ್ರಾಪಂ ಉಪಾಧ್ಯಕ್ಷ ಲಕ್ಷ$್ಮಣ ಹಣಮನ್ನವರ, ಪರಸಪ್ಪ ಹಣಮನ್ನವರ, ಮುತ್ತೆಪ್ಪ ಹಣಮನ್ನವರ, ಲಕ್ಷ$್ಮಣ ಮಂಗಿ, ಉದ್ದಪ್ಪ ಹಣಮನ್ನವರ, ಪರಸಪ್ಪ ಕರಿಕಟ್ಟಿ, ಸಿದ್ದಪ್ಪ ಹಣಜಾನಟ್ಟಿ, ವಿ.ಎಸ್​.ಮಾಳಿಂಗೆ, ಬಸವರಾಜ ಉತ್ತೂರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts