More

    ಭ್ರಷ್ಟಾಚಾರಕ್ಕೆ ಪ್ರಯತ್ನಿಸಿದರೆ ಕ್ರಮ ನಿಶ್ಚಿತ

    ಧಾರವಾಡ: ಇಲಾಖೆಯಲ್ಲಿ ಯಾವುದೇ ಹಂತದಲ್ಲಿ ಭ್ರಷ್ಟಾಚಾರಕ್ಕೆ ಪ್ರಯತ್ನಿಸಿದರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಕ್ರಮ ಕೈಕೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.

    ಇಲಾಖೆ ಸೇವೆಯಲ್ಲಿರುವಾಗ ನಿಧನರಾದ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದಲ್ಲಿ ಏಕಕಾಲಕ್ಕೆ 11 ಎಸ್​ಡಿಎ ಹಾಗೂ 21ಡಿ-ದರ್ಜೆ ಹುದ್ದೆ ಸೇರಿ ಒಟ್ಟು 32 ಜನರಿಗೆ ನೇರ ನೇಮಕಾತಿ ಆದೇಶಗಳನ್ನು ಮಂಗಳವಾರ ನಗರದ ಕಚೇರಿಯಲ್ಲಿ ವಿತರಿಸಿ ಮಾತನಾಡಿದರು.

    ತಮ್ಮ ಕಚೇರಿ ಸೇರಿ ಇಲಾಖೆಯ ಬೆಳಗಾವಿ ವಿಭಾಗದ 9 ಜಿಲ್ಲೆಗಳ ಡಿಡಿಪಿಐ ಕಚೇರಿ, ಡಯಟ್ ಹಾಗೂ ತಾಲೂಕು ಹಂತದ ಬಿಇಒ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಪ್ರಯತ್ನಿಸಿ ಸುಮ್ಮನೆ ಕಿರುಕುಳ ನೀಡಿದರೆ, ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಹಿಂಜರಿಯುವುದಿಲ್ಲ. ಇಲಾಖೆಯ ಕೆಲಸಗಳಿಗೆ ಹಣ ಕೇಳಿದರೆ ತಮಗೆ ನೇರವಾಗಿ ದೂರು ಸಲ್ಲಿಸಬಹುದು ಎಂದರು.

    2018ರಲ್ಲಿ ಶಿಕ್ಷಣ ಇಲಾಖೆ ಆಯುಕ್ತರ ಹುದ್ದೆ ವಹಿಸಿಕೊಂಡ ಬಳಿಕ ಭ್ರಷ್ಟಾಚಾರಕ್ಕೆ ಅವಕಾಶ ನೀಡಿದೆ ಪಾರದರ್ಶಕ ನೆಲೆಯಲ್ಲಿ ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ಡಿ-ಗ್ರುಪ್ ಸೇರಿ 424 ಜನರಿಗೆ ಅನುಕಂಪದ ಆಧಾರದಲ್ಲಿ ಮೃತ ನೌಕರರ ಅವಲಂಬಿತರಿಗೆ ನೇರ ನೇಮಕಾತಿ ಆದೇಶ ನೀಡಲಾಗಿದೆ ಎಂದರು.

    ಸಮಯ ಪ್ರಜ್ಞೆ, ಪಾರದರ್ಶಕ ನೀತಿ, ಕ್ರಿಯಾಶೀಲತೆ ಸೇರಿ ವೃತ್ತಿ ಮೌಲ್ಯಗಳನ್ನು ರೂಢಿಸಿಕೊಂಡು ತಮಗೆ ಪ್ರಾಪ್ತವಾದ ಹುದ್ದೆಯ ಸರ್ಕಾರಿ ಸೇವೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ, ಸಮರ್ಪಣಾ ಭಾವದಿಂದ ಕೆಲಸ ಮಾಡಬೇಕು ಎಂದರು.

    ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿರ್ದೇಶಕಿ ಮಮತಾ ನಾಯಕ, ಜಂಟಿ ನಿರ್ದೇಶಕ ಮೃತ್ಯುಂಜಯ ಕುಂದಗೋಳ, ಉಪನಿರ್ದೇಶಕ ಆರ್.ಎಸ್. ಮುಳ್ಳೂರ, ಹಿರಿಯ ಸಹಾಯಕ ನಿರ್ದೇಶಕ ಕೇಶವ ಪೆಟ್ಲೂರ, ಅನುಕಂಪ ನೇಮಕಾತಿ ವಿಭಾಗದ ಲಿಪಿಕ ನೌಕರರಾದ ವೈ.ಎ. ಹಳೆಮನಿ, ವೀರಣ್ಣ ನಂದಿಹಳ್ಳಿ, ಶರಣಪ್ಪ ಬೂದಿಹಾಳ, ಮಹಾಂತೇಶ ದೇವರಾಯಣ್ಣವರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts