More

    ಭೂಮಿ ಪ್ರಕರಣ ಕಾಲಮಿತಿಯಲ್ಲಿ ವಿಲೇವಾರಿ; ತಾಲೂಕು ಕಚೇರಿಯಲ್ಲಿ ಪ್ರತ್ಯೇಕ ವಿಭಾಗ: ಶಾಸಕ ಹರತಾಳು ಹಾಲಪ್ಪ

    ಸಾಗರ: ತಾಲೂಕಿನ ಭೂಮಿ ಕುರಿತ ಪ್ರಕರಣಗಳನ್ನು ಪರಿಶೀಲಿಸಿ ಬಗರ್‌ಹುಕುಂ ಹಾಗೂ ಇತರ ಯೋಜನೆಯಲ್ಲಿ ಭೂಮಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.
    ತಾಲೂಕು ಕಚೇರಿಯಲ್ಲಿ ಸೋಮವಾರ ಬಗರ್‌ಹುಕುಂ ಪ್ರಕರಣಗಳ ಪರಿಶೀಲನೆ ನಡೆಸಿ 94ಸಿ ಮತ್ತು ಬಗರ್‌ಹುಕುಂ ಜಮೀನು ಮಂಜೂರಾತಿ ಪ್ರಕರಣಗಳು ಎಷ್ಟಿವೆ ಎನ್ನುವ ವಿವರ ಪಡೆಯಲಾಗಿದೆ. ಸಮಿತಿಯ ಸದಸ್ಯರನ್ನು ಒಳಗೊಂಡಂತೆ ತಾಲೂಕು ಕಚೇರಿಯಲ್ಲಿ ಪ್ರತ್ಯೇಕ ವಿಭಾಗ ತೆರೆಯಲಾಗುತ್ತಿದ್ದು ಸಂಬಂಧಪಟ್ಟವರು ಇಲ್ಲಿ ತಮ್ಮ ವಿವರಗಳನ್ನು ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದರು.
    ವಿಧಾನಸಭೆ ಕಲಾಪದ ನಂತರ ಪ್ರತಿ ಶುಕ್ರವಾರ ಸಮಿತಿಯ ಸಭೆ ನಡೆಸಿ ಎಲ್ಲ ಕಡತಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಲಾಗುವುದು. ಅಲ್ಲದೇ ಸಾಗರದ ಅಭಿವೃದ್ಧಿಗೂ ವಿಶೇಷ ಯೋಜನೆಗಳನ್ನು ರೂಪಿಸಲಾಗಿದ್ದು ಒಟ್ಟು 100 ಕೋಟಿ ರೂ. ವೆಚ್ಚದಲ್ಲಿ ಸಾಗರದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸಂಬಂಧಿಸಿದಂತೆ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದರು.
    ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ಮಾತನಾಡಿ, 94ಸಿ ಯೋಜನೆಯಲ್ಲಿ 150 ಹಕ್ಕುಪತ್ರಗಳು ಸಿದ್ಧವಾಗಿವೆ. ಬಗರ್‌ಹುಕುಂನಲ್ಲಿ ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ 100 ಹಕ್ಕುಪತ್ರಗಳು ಸಿದ್ಧವಾಗಿದ್ದು, ಉಳಿದಿರುವ ಪ್ರಕರಣಗಳನ್ನು ಜನವರಿ 26ರ ಒಳಗಾಗಿ ಸಂಪೂರ್ಣ ವಿಲೇವಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸಂಬಂಧಿಸಿದಂತೆ ಹಾಗೂ ಭೂಮಿ ಕುರಿತ ಎಲ್ಲ ಪ್ರಕರಣಗಳಿಗೆ ನಮ್ಮ ಕಚೇರಿಯಲ್ಲಿ ಅಗತ್ಯ ಇರುವ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗುತ್ತದೆ ಎಂದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts