More

    ಭೂಗರ್ಭ ಜಲವಿದ್ಯುತ್ ಸ್ಥಾವರ ಕೈಬಿಡಿ

    ಸಾಗರ: ಶರಾವತಿ ನದಿ ಕಣಿವೆಯ ಗೇರುಸೊಪ್ಪ ಜಲಾಶಯದಿಂದ ನೀರನ್ನು ಮೇಲೆತ್ತಿ ಭೂಗರ್ಭ ಜಲ ವಿದ್ಯುತ್ ಉತ್ಪಾದಿಸುವ ಕರ್ನಾಟಕ ವಿದ್ಯುತ್ ನಿಗಮದ ಪ್ರಸ್ತಾವಿತ ಯೋಜನೆ ಹಾಗೂ ಭೂರಂದ್ರ ಮಾಡಿ ಸರ್ವೆ ಮಾಡುವುದನ್ನು ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿ ವೃಕ್ಷಲಕ್ಷ ಆಂದೋಲನ ಸದಸ್ಯರು ಉಪವಿಭಾಗಾಧಿಕಾರಿ ಡಾ. ಎಲ್.ನಾಗರಾಜ್​ಗೆ ಮನವಿ ಸಲ್ಲಿಸಿದರು.

    ಉದ್ದೇಶಿತ ಯೋಜನೆಗಾಗಿ ಅಭಯಾರಣ್ಯದಲ್ಲಿ ರಸ್ತೆ ನಿರ್ವಿುಸಿ, ಭಾರಿ ವಾಹನಗಳನ್ನು ಒಯ್ದು ಭೂರಂದ್ರ ಸರ್ವೆ ಮಾಡಲಾಗುತ್ತಿದೆ. ದಟ್ಟ ಕಾಡಿನ ಇಳಿಜಾರು ಪ್ರದೇಶದಲ್ಲಿ ಮಳೆಗಾಲದಲ್ಲಿ ನಡೆಸುತ್ತಿರುವ ಕಾಮಗಾರಿ ದೊಡ್ಡ ಮಟ್ಟದ ಭೂಕುಸಿತ, ಅರಣ್ಯ ನಾಶ ಹಾಗೂ ವನ್ಯಜೀವಿಗಳ ಮಾರಣಹೋಮಕ್ಕೂ ಕಾರಣವಾಗಬಹುದು ಎಂದು ಹಲವು ವಿಜ್ಞಾನಿಗಳು ಈಗಾಗಲೆ ಸರ್ಕಾರವನ್ನು ಎಚ್ಚರಿಸಿದ್ದಾರೆ.

    ಅರಣ್ಯ ಪ್ರದೇಶದಲ್ಲಿ ಸರ್ವೆ ಮತ್ತಿತರೆ ಕಾರ್ಯಕ್ಕೆ ಹೊರರಾಜ್ಯಗಳಿಂದ ಬಂದಿರುವವರಿಂದ ಅರಣ್ಯ ಪ್ರದೇಶಕ್ಕೂ ಕರೊನಾ ವೈರಸ್ ಹರಡುವ ಸಾಧ್ಯತೆ ಇದೆ. ಶರಾವತಿ ನದಿಯ ಜಲಮೂಲವನ್ನೇ ಅವಲಂಬಿಸಿರುವ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಲಕ್ಷಾಂತರ ಕುಟುಂಬಗಳ ಬದುಕಿಗೆ ಯೋಜನೆ ಕೊಡಲಿ ಪೆಟ್ಟು ನೀಡುವ ಸಾಧ್ಯತೆ ಇದೆ ದೂರಿದರು.

    ಶರಾವತಿ ಭೂಗರ್ಭ ವಿದ್ಯುತ್ ಯೋಜನೆ ಅವೈಜ್ಞಾನಿಕವಾಗಿದ್ದು ಅರಣ್ಯ ಹಾಗೂ ವನ್ಯಜೀವಿಗಳ ಪಾಲಿಗೆ ಅಪಾಯಕಾರಿ. ಹೀಗಾಗಿ ಯೋಜನೆಯನ್ನು ತಕ್ಷಣ ನಿಲ್ಲಿಸಬೇಕು. ಜಲಮೂಲ ಹಾಗೂ ಅರಣ್ಯ ಸಂರಕ್ಷಣೆಗೆ ಸರ್ಕಾರ ಗಮನ ಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.

    ವೃಕ್ಷಲಕ್ಷ ಆಂದೋಲನದ ತಾಲೂಕು ಅಧ್ಯಕ್ಷ ಬಿ.ಎಚ್.ರಾಘವೇಂದ್ರ, ಪ್ರಮುಖರಾದ ಆನೆಗುಳಿ ಸುಬ್ರಾವ್, ನಾರಾಯಣಮೂರ್ತಿ ಕಾನುಗೋಡು, ನಾಗೇಂದ್ರ ಸಾಗರ್, ಐ.ವಿ.ಹೆಗಡೆ, ಸುಬ್ರಹ್ಮಣ್ಯ ನೀಚಡಿ, ಕೆ.ವಿ.ಪ್ರವೀಣ್​ಕುಮಾರ್, ತಾರಾಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts