More

    ಭಿನ್ನಾಭಿಪ್ರಾಯ ರ್ಚಚಿಸಿ ಬಗೆಹರಿಸೋಣ

    ಕಾರವಾರ: ವಾಣಿಜ್ಯ ಬಂದರಿನ ಅಭಿವೃದ್ಧಿ ವಿಚಾರದಲ್ಲಿ ಮೀನುಗಾರರಿಗಿರುವ ಭಿನ್ನಾಭಿಪ್ರಾಯ ಸಂಬಂಧ ರ್ಚಚಿಸಿ ಬಗೆಹರಿಸೋಣ ಎಂದು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

    ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಕಚೇರಿಯ ಪಕ್ಕ ನೂತನ ಸಮುದಾಯ ಭವನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಕೇಂದ್ರ ಸರ್ಕಾರ ಮೀನುಗಾರಿಕೆ ಅಭಿವೃದ್ಧಿಗೆ ಸಾಕಷ್ಟು ಹಣ ಮಂಜೂರು ಮಾಡುತ್ತಿದೆ. ಅದರ ಹೆಚ್ಚಿನ ಪ್ರಯೋಜನವನ್ನು ನಮ್ಮ ಜಿಲ್ಲೆ ಪಡೆದುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಕುಳಿತು ಚರ್ಚೆ ಮಾಡಿದಲ್ಲಿ ನ್ಯಾಯಾಲಯದ ಹೊರಗೆ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಶೀಘ್ರದಲ್ಲಿ ಮೀನುಗಾರರ ಮುಖಂಡರ, ಜನಪ್ರತಿನಿಧಿಗಳ ಸಭೆ ಕರೆಯಲಿದ್ದೇನೆ, ಸಿಆರ್​ರೆಡ್ ಸಮಸ್ಯೆ, ಸಾಂಪ್ರದಾಯಿಕ ಮೀನುಗಾರರ ಸಮಸ್ಯೆಗಳು, ಮೀನುಗಾರರ ಇತರ ಸಮಸ್ಯೆಗಳ ಬಗ್ಗೆ ಪರಾಮರ್ಶೆ ನಡೆಸೋಣ ಎಂದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಬಿಜೆಪಿ ಸರ್ಕಾರ ಮೀನುಗಾರರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆ ಜಾರಿಗೆ ತಂದಿದೆ ಎಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಗಣಪತಿ ಮಾಂಗ್ರೆ, ಮೀನುಗಾರರ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು. ರೈತರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಮೀನುಗಾರರಿಗೂ ಒದಗಿಸಬೇಕು ಎಂದು ಆಗ್ರಹಿಸಿದರು.

    ಮೀನುಗಾರರ ಮುಖಂಡರಾದ ಗಣಪತಿ ಉಳ್ವೇಕರ್, ರಮಾಕಾಂತ ಗಾಂವಕರ್, ವಾಮನ ಹರಿಕಂತ್ರ, ಮೋಹನ ಬೋಳಶೆಟ್ಟಿಕರ್, ಸುರೇಶ ತಾಂಡೇಲ, ರೇಷ್ಮಾ ಮಾಳ್ಸೇಕರ್ ಇದ್ದರು. ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಿ.ನಾಗರಾಜ್ ಸ್ವಾಗತಿಸಿದರು.

    60 ಲಕ್ಷ ರೂ. ಕಟ್ಟಡ
    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 25 ಲಕ್ಷ ರೂ. ಮಂಜೂರಾಗಿದ್ದು, ಫೆಡರೇಷನ್ 25 ಲಕ್ಷ ರೂ. ವಿನಿಯೋಗಿಸಿದೆ. ಶಾಸಕಿ ರೂಪಾಲಿ ನಾಯ್ಕ ಅವರ ಪ್ರದೇಶಾಭಿವೃದ್ಧಿ ನಿಧಿಯ 10 ಲಕ್ಷ ರೂ. ಅನುದಾನ ಬಳಸಿ ಒಟ್ಟು 60 ಲಕ್ಷ ರೂ. ವೆಚ್ಚದಲ್ಲಿ ಮೀನುಗಾರರ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts