More

    ಭಿನ್ನಾಭಿಪ್ರಾಯ ಬಿಟ್ಟು ಕುರುಬರ ಹೋರಾಟ ಬೆಂಬಲಿಸಿ

    ಕೋಲಾರ: ಕುರುಬ ಸವಾಜಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗಿರುವುದರಿಂದ ಎಸ್‌ಟಿ ಪಟ್ಟಿಗೆ ಸೇರಿಸಲು ಆಗ್ರಹಿಸಿ ಫೆ.7ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಐತಿಹಾಸಿಕ ಹೋರಾಟಕ್ಕೆ ಭಿನ್ನಮತ ಬದಿಗೊತ್ತಿ ಬೆಂಬಲ ನೀಡಬೇಕು ಎಂದು ಶ್ರೀ ಕಾಗಿನೆಲೆ ಮಹಾಸಂಸ್ಥಾನದ ಹೊಸದುರ್ಗ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಕರೆ ನೀಡಿದರು.

    ನಗರದ ಕೆಇಬಿ ಸಮುದಾಯ ಭವನದಲ್ಲಿ ಮಂಗಳವಾರ ಕುರುಬರ ಎಸ್‌ಟಿ ಹೋರಾಟ ಸಮಿತಿ, ಜಿಲ್ಲಾ ಕುರುಬರ ಸಂ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ವಾತನಾಡಿ, ನಮ್ಮ ಹಕ್ಕಿಗಾಗಿ ಈಗ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಲು ಸಂಟನೆ ವಾಡಲಾಗುತ್ತಿದೆ. ಕುರುಬರನ್ನು ಎಸ್‌ಟಿಗೆ ಸೇರಿಸುವುದು ಶ್ರೀ ಕಾಗಿನೆಲೆ ಮಠದ ಕರ್ತವ್ಯವಾಗಿದೆ, ನಮ್ಮ ಹೋರಾಟಕ್ಕೆ ಅಹಿಂದ ಸಹಕಾರ ನೀಡಿದಲ್ಲಿ ಮುಂದೆ ಇದರ ವ್ಯಾಪ್ತಿಯ ಎಲ್ಲ ಬಡವರನ್ನು ಎಸ್‌ಟಿಗೆ ಸೇರಿಸಲು ಮಠ ಜವಾಬ್ದಾರಿ ಹೊರಲಿದೆ ಎಂದರು.

    ರಾಜ್ಯದಲ್ಲಿ ಕುರುಬರು 70 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿ ಎಂದು ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ಆದರೆ ನಮ್ಮವರೇ ಕಾಲು ಎಳೆಯುತ್ತಿರುವುದು ಬೇಸರದ ಸಂಗತಿ. ಫೆ.7ರ ಹೋರಾಟದಲ್ಲಿ ಕಾಗಿನೆಲೆ ಮಹಾಸಂಸ್ಥಾನಕ್ಕೆ ಸೇರಿದ ಎಲ್ಲ ಸ್ವಾಮಿಗಳು ಭಾಗವಹಿಸಲಿದ್ದಾರೆ ಎಂದರು.

    ಸಿದ್ದರಾಮಯ್ಯ ಸಲಹೆ ಪಾಲಿಸುತ್ತೇವೆ: ಸಿದ್ದರಾಮಯ್ಯ ಎಸ್‌ಟಿ ಹೋರಾಟಕ್ಕೆ ಸಮ್ಮತಿಸಿದ್ದಾರಲ್ಲದೆ ಕೆಲ ಉಪಯುಕ್ತ ಸಲಹೆ ನೀಡಿದ್ದು ಅವುಗಳನ್ನು ಪಾಲಿಸುವುದಾಗಿ ವಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು. ರಾಜ್ಯದ ನಾಲ್ಕು ದಿಕ್ಕುಗಳಿಂದ ಪಾದಯಾತ್ರೆ ಪ್ರಾರಂಭವಾಗಲಿದೆ. ಜ.30ಕ್ಕೆ ತುಮಕೂರು ಜಿಲ್ಲೆಯ ಕಳ್ಳಂಬಳ್ಳದಿಂದ ಶ್ರೀ ಈಶ್ವರಾನಂದಪುರಿ ಸ್ವಾಮಿಗಳ ಪಾದಯಾತ್ರೆ ಪ್ರಾರಂಭವಾಗಲಿದ್ದು, ಅಲ್ಲಿ ಕೋಲಾರ ಜಿಲ್ಲೆಯಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಪಾಲ್ಗೊಳ್ಳಬೇಕು, ಫೆ.7ರಂದು ಬೆಂಗಳೂರಿಗೆ ಆಗಮಿಸಿ ದೊಡ್ಡ ಮಟ್ಟದಲ್ಲಿ ಶಕ್ತಿ ಪ್ರದರ್ಶನ ನಡೆಸಬೇಕು ಎಂದು ಮನವಿ ವಾಡಿದರು.

    ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಮುಕುಟಪ್ಪ, ತಾಲೂಕು ಕುರುಬರ ಸಂದ ಅಧ್ಯಕ್ಷ ಕೋಡಿರಾಮಸಂದ್ರ ಮುನಿಸ್ವಾಮಿ, ಶಫರ್ಡ್ ಇಂಟರ್ ನ್ಯಾಷನಲ್ ಸಂಸ್ಥೆ ರಾಜ್ಯ ಪ್ರಧಾನ ಕಾರ್ಯದರ್ಶಿ ಐಟಿಐ ನಾಗರಾಜು, ಮುಖಂಡರಾದ ರುನಾಥ್, ಜಿಲ್ಲಾಧ್ಯಕ್ಷ ಸೋಮಶೇಖರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts