More

    ಭಿಕ್ಷುಕರ ಬಗ್ಗೆ ಸಾಹಿತ್ಯ ಬರೆದ ಅಣ್ಣಾಭಾವು ಸಾಠೆ

    ಹುಲಸೂರು: ಹೇಳಿಕೊಳ್ಳುವಷ್ಟು ಅಕ್ಷರ ಜ್ಞಾನ ಇಲ್ಲದಿದ್ದರೂ ದೇಶದಲ್ಲಿ ಮೊದಲ ಸಲ ಭಿಕ್ಷುಕರ ಬಗ್ಗೆ ಸಾಹಿತ್ಯ ಬರೆದ ಕೀತರ್ಿ ಸಾಹಿತ್ಯ ಸಾಮ್ರಾಟ್ ಅಣ್ಣಾಭಾವು ಸಾಠೆ ಅವರಿಗೆ ಸಲ್ಲುತ್ತದೆ ಎಂದು ಸಾಠೆ ಅವರ ಮೊಮ್ಮಗ ಸಚಿನ್ ಸಾಠೆ ಹೇಳಿದರು.

    ಪಟ್ಟಣದ ಗಾಂಧಿ ವೃತ್ತದಲ್ಲಿ ಮಾತಂಗ ಸಮಾಜದಿಂದ ಶುಕ್ರವಾರ ಅಣ್ಣಾಭಾವು ಸಾಠೆ 102ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಧಾಮರ್ಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಠೆ ಅವರ ಸಾಹಿತ್ಯ ಕೃತಿಗಳನ್ನು ಓದಿ ತಿಳಿದುಕೊಂಡು ಸಮಾಜವನ್ನು ಒಳ್ಳೆಯ ದಾರಿಯಲ್ಲಿ ನಡೆಸಬೇಕು. ಈ ಉದ್ದೇಶದಿಂದ ಕೆಲಸ ಮಾಡಲಾಗುತ್ತಿದೆ. ಸಾಠೆ ಸಾಹಿತ್ಯ ಓದಿದರೆ ಜಯಂತಿ ಅರ್ಥಪೂರ್ಣತೆ ಬರಲಿದೆ. ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಂಡಾಗ ಇಂಥ ಕಾರ್ಯಕ್ರಮಕ್ಕೆ ಮಹತ್ವದ ಬರುತ್ತದೆ ಎಂದರು.

    ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ದುಶ್ಚಟಗಳಿಗೆ ಬಲಿಯಾಗದೆ ಸತ್ಸಂಗದಲ್ಲಿ ಭಾಗವಹಿಸಿ ನಾವೆಲ್ಲರೂ ಒಂದು ಎಂದು ಸಾಗಬೇಕು. ಸಾರ್ಥಕ ಬದುಕು ಅಳವಡಿಸಿಕೊಳ್ಳಲು ಬಸವಣ್ಣ ಹಾಗೂ ಅಣ್ಣಭಾವು ಸಾಠೆ ವಿಚಾರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಶಾಸಕ ಶರಣು ಸಲಗರ, ವಿಷ್ಣುಭಾವು ಕಸಬೆ, ರಾಜು ಕಡ್ಯಾಳ, ಗೋವಿಂದರಾವ ಸೋಮವಂಶಿ, ವೆಂಕಟರಾವ ಶಿಂದೆ, ಯು.ಡಿ.ಗಾಯಕವಾಡ, ಅಜಿತ್ ಸೂರ್ಯವಂಶಿ, ಆರ್.ಕೆ.ಜಾಧವ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಸಂಜುಕುಮಾರ ಭುಸಾರೆ, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಜಿಪಂ ಮಾಜಿ ಸದಸ್ಯ ಸುಧೀರ್ ಕಾಡಾದಿ, ಪಿಕೆಪಿಎಸ್ ಅಧ್ಯಕ್ಷ ಓಂಕಾರ ಪಟ್ನೆ, ಕಾಂಗ್ರೆಸ್ ಮುಖಂಡ ಆನಂದ ದೇವಪ್ಪ, ಪ್ರಮುಖರಾದ ದೀಪಕ್ ಮಾಲಗಾರ, ಅಶೋಕ ವಕಾರೆ, ಚಂದ್ರಕಾಂತ ದೇಟ್ನೆ, ಯುವರಾಜ ಬಿ, ರಣಜಿತ ಗಾಯಕವಾಡ, ವಿದ್ಯಾಸಾಗರ, ಧನಾಜಿ ಸೂರ್ಯವಂಶಿ, ರವಿ ಸೂರ್ಯವಂಶಿ, ವೀರಪ್ಪ ವಾಗಮಾರೆ, ಜಬ್ಬಾರ ಸೌದಾಗರ್ ಇತರರಿದ್ದರು. ಕವಿತಾ ಸೂರ್ಯವಂಶಿ ನಿರೂಪಣೆ ಮಡಿದರು.

    ಹುಲಸೂರು ಪಟ್ಟಣದಲ್ಲಿ ವೈಯಕ್ತಿಕ ಖಚರ್ಿನಲ್ಲಿ ಅಣ್ಣಾಭಾವು ಸಾಠೆ ಪುತ್ಥಳಿ ನಿಮರ್ಿಸುತ್ತೇನೆ. ತಹಸೀಲ್ದಾರ್ ಜತೆಗೆ ಮಾತನಾಡಿ ಸ್ಥಳ ಗುರುತಿಸಲು ಸೂಚಿಸಲಾಗುವುದು. ಸಮಾಜದ ಪ್ರಮುಖರು ಗಾರ್ಡನ್ ಸಹ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕು.
    | ಶರಣು ಸಲಗರ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts