More

    ಭಾವೈಕ್ಯ, ಸ್ವಾಮರಸ್ಯ ಭಾವನೆ ಬೆಳೆಯಲಿ

    ಬ್ಯಾಡಗಿ; ಹಬ್ಬ-ಹರಿದಿನಗಳಿಂದ ನಾವು ಸಾಕಷ್ಟು ಸಂದೇಶಗಳನ್ನು ಕಲಿಯಬೇಕಿದ್ದು, ಭಾವೈಕ್ಯ ಹಾಗೂ ಸ್ವಾಮರಸ್ಯ ಭಾವನೆಗಳನ್ನು ಬೆಳೆಸಿಕೊಂಡು ಜೀವನ ಸಾರ್ಥಪಡಿಸಿಕೊಳ್ಳಬೇಕಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

    ಪಟ್ಟಣದ ಗ್ರಾಮದೇವತೆ ಜಾತ್ರಾ ಮಹೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಾಚೀನ ಕಾಲದಿಂದಲೂ ಎಲ್ಲ ಸಮಾಜಗಳ ಬಾಂಧವರು ಒಂದೆಡೆ ಸೇರಿ ಹಬ್ಬ, ಹರಿದಿನ, ಉತ್ಸವ ಆಚರಿಸುತ್ತಿದ್ದೇವೆ. ಇದರಿಂದ ಎಲ್ಲರಲ್ಲಿ ನಾವೆಲ್ಲ ಒಂದು ಎಂಬ ಭಾವನೆ ಮೂಡಲಿದೆ. ದೇವಿ ಹಬ್ಬ ಆಚರಣೆಯಿಂದ ಗ್ರಾಮದಲ್ಲಿ ಶಾಂತಿ ನೆಲೆಸಲಿದೆ. ಹಿರಿಯರ ಸಂಪ್ರದಾಯವನ್ನು ಪ್ರಾಚೀನ ಕಾಲದಿಂದ ನಾವು ರೂಢಿಸಿಕೊಂಡು ಬಂದಿದ್ದು, ಭಾರತೀಯ ಸಂಪ್ರದಾಯದಲ್ಲಿ ಇಂದಿಗೂ ಮುಂದುವರಿದಿದೆ ಎಂದರು.

    ದೇವಸ್ಥಾನ ಜಾತ್ರಾ ಸಮಿತಿ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ಮಾತನಾಡಿ, 1996ರಿಂದಲೂ ದೇವಿಯ ಜಾತ್ರೆ ಮುಂದುವರಿದಿದೆ. ಇಲ್ಲಿಯ ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಹಾಗೂ ಉತ್ಸವವನ್ನು ನಾವೆಲ್ಲ ಒಗ್ಗಟ್ಟಿನಿಂದ ಮುಂದುವರಿಸಬೇಕಿದೆ. ಆಚರಣೆ ನಿಯಮವನ್ನು ನಾವೆಲ್ಲ ಪಾಲಿಸುವ ಮೂಲಕ ಸಂಪ್ರದಾಯಕ್ಕೆ ಧಕ್ಕೆ ಬಾರದಂತೆ ಕಾಪಾಡಬೇಕಿದೆ. ಗ್ರಾಮದೇವತೆ ಜಾತ್ರಾ ಮಹೋತ್ಸವ ಫೆ. 29ರಿಂದ ಮಾ. 6ರವರೆಗೆ ಜರುಗಲಿದೆ. ಭಕ್ತರು ಒಂದು ವಾರ ಎಲ್ಲ ಧಾರ್ವಿುಕ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

    ಇದಕ್ಕೂ ಮುನ್ನ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಧ್ವಜಾರೋಹಣ ನೆರವೇರಿಸಿದರು. ಮುಪ್ಪಿನಸ್ವಾಮಿ ವಿರಕ್ತ ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಶಾಸಕರಾದ ನೆಹರು ಓಲೇಕಾರ, ಅರುಣಕುಮಾರ ಪೂಜಾರ, ಮಾಜಿ ಶಾಸಕರಾದ ಶಿವರಾಜ ಸಜ್ಜನ, ಬಸವರಾಜ ಶಿವಣ್ಣನವರ, ಎಸ್.ಆರ್. ಪಾಟೀಲ, ಶಂಭಣ್ಣ ಶಿರೂರು, ಎಸ್.ಆರ್. ಪಾಟೀಲ, ಗ್ರಾಮದೇವತಾ ಜಾತ್ರಾ ಸಮಿತಿ ಸದಸ್ಯರಾದ ಪುಟ್ಟಪ್ಪ ಛತ್ರದ, ಚಿಕ್ಕಪ್ಪ ಛತ್ರದ, ಗಂಗಣ್ಣ ಎಲಿ, ಮಲ್ಲನಗೌಡ್ರ ಭದ್ರಗೌಡ್ರ, ಈರಣ್ಣ ಬಣಕಾರ, ಶಂಭು ಮಠದ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts