More

    ಭಾವತರಂಗಿಣಿ ಭಕ್ತ ಸಮಾಗಮ 29ರಿಂದ

    ಕಲಬುರಗಿ: ರಾಜಾಪುರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮವು ತನ್ನ 20 ಸಾರ್ಥಕ ಸಂವತ್ಸರ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ 29ರಿಂದ ಎರಡು ದಿನ ಭಾವತರಂಗಿಣಿ ಭಕ್ತ ಸಮಾಗಮ ಆಯೋಜಿಸಿದೆ ಎಂದು ಆಶ್ರಮದ ಸ್ವಾಮಿ ಮಹೇಶ್ವರಾನಂದಜಿ, ಪ್ರೊ.ನರೇಂದ್ರ ಬಡಶೇಷಿ ತಿಳಿಸಿದರು.
    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದು ಇಷ್ಟು. 29ರಂದು ಬೆಳಗ್ಗೆ 9ಕ್ಕೆ ಹಲಸೂರ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ತತ್ವರೂಪಾನಂದಜಿ ಸಾನ್ನಿಧ್ಯದಲ್ಲಿ ಮಂಗಳೂರು ಮತ್ತು ಗದಗದ ಸ್ವಾಮಿ ಜಿತಕಾಮಾನಂದಜಿ, ಸ್ವಾಮಿ ನಿರ್ಭಯಾನಂದಜಿ ಉದ್ಘಾಟಿಸುವರು. ರಾಮೋಹಳ್ಳಿಯ ಸ್ವಾಮಿ ಯೋಗೇಶ್ವರಾನಂದಜಿ, ಸ್ವಾಮಿ ಶಾರದೇಶಾನಂದಜಿ, ವಿಟಿಯು ಪ್ರಾದೇಶಿಕ ನಿರ್ದೇಶಕ ಡಾ.ಬಸವರಾಜ ಗಾದಗೆ ಉಪಸ್ಥಿತರಿರುವರು.
    11.45ಕ್ಕೆ ಚಿಂತನ ಗೋಷ್ಠಿ ಇದ್ದು, ನಿತ್ಯ ಜೀವನದಲ್ಲಿ ರಾಮಕೃಷ್ಣರ ಉಪದೇಶಗಳು ಕುರಿತು ಸ್ವಾಮಿ ಜಿತಕಾಮಾನಂದಜಿ ಮಾತನಾಡುವರು. ರಾಮಕೃಷ್ಣರು ಕಲಿಸಿದ ಉಪನಿಷತ್ತಿನ ತತ್ವಗಳು ಕುರಿತು ಚಿಂತಕ ಶಿಕಾರಿಪುರ ಕೃಷ್ಣಮೂರ್ತಿ , ಆಧ್ಯಾತ್ಮಿಕ ಪ್ರಖರ ಶಕ್ತಿ ಮತ್ತು ನವದೃಷ್ಟಿಯಾಗಿ ರಾಮಕೃಷ್ಣರು ಕುರಿತು ವಿಜಯವಾಣಿ ಅಂಕಣಕಾರ ರವೀಂದ್ರ ದೇಶಮುಖ, ಮಾತಾ ಮಹೋತ್ಸವ ಕುರಿತು ಯುವ ವಾಗ್ಮಿ ಹಾರಿಕಾ ಮಂಜುನಾಥ ಮಾತನಾಡುವರು.
    ಮಧ್ಯಾಹ್ನ 1.30ಕ್ಕೆ 2ನೇ ಗೋಷ್ಠಿ. ಸಾಧನಾ ಪಥಕ್ಕೆ ಶ್ರೀಮಾತೆಯರ ಜೀವನದ ಬೆಳಕು ಕುರಿತು ವಿವೇಕಮಯಿ ಮಾತಾಜಿ, ಶ್ರೀಮಾತೆಯರ ವೈಭವದ ಸರಳತೆ ಕುರಿತು ಪ್ರಭೋದಮಯಿ ಮಾತಾಜಿ, ಮಹಾಯೋಗಿನಿ ಶ್ರೀಮಾತೆ ಕುರಿತು ಚೈತನ್ಯಮಯಿ ಮಾತಾಜಿ, ಸಂಜೆ 4.30ಕ್ಕೆ ಮೌಲ್ಯ ಶಿಕ್ಷಣ ಮತ್ತು ಸ್ವಾಮಿ ವಿವೇಕಾನಂದ ಕುರಿತು ನಿತ್ಯಾನಂದ ವಿವೇಕವಂಶಿ, ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಸಾರ್ಥಕ ಜೀವನ ಕುರಿತು ತೇಜೋಮಯಿ ಮಾತಾಜಿ, ಸ್ವಾಮಿ ವಿವೇಕಾನಂದ ಮತ್ತು ವಿಶ್ವಮಾನವ ಕುರಿತು ಪ್ರೊ.ನರೇಂದ್ರ ಬಡಶೇಷಿ, ತನ್ನ ಭವಿಷ್ಯಕ್ಕೆ ತಾನೇ ಹೊಣೆ ಕುರಿತು ಪುನೀತ ಮಹಾರಾಜ್ ಮಾತನಾಡುವರು. ಸಂಜೆ 6ಕ್ಕೆ ಸಂಧ್ಯಾರತಿ, 6.30ಕ್ಕೆ ಡಾ.ಶುಭಾಂಗಿ ಓಂಕಾರ ಸಾಧನಾ ಬಳಗದಿಂದ ನೃತ್ಯರೂಪಕ ನಡೆಯಲಿದೆ.
    ಮಾಚರ್್ 1ರಂದು ಬೆಳಗ್ಗೆ 5ರಿಂದ 7ರವರಗೆ ಯೋಗ, ಪ್ರಾಣಾಯಾಮ, ಸಂಕೀರ್ತನೆ, ಜಪ-ಧ್ಯಾನವನ್ನು ಸ್ವಾಮಿ ಯೋಗೇಶ್ವರಾನಂದಜಿ ನಡೆಸಿಕೊಡುವರು. 8.30ಕ್ಕೆ ಮಹಾನ್ ಭಾರತೀಯ ಸಂಸ್ಕೃತಿ ಕುರಿತು ಸ್ವಾಮಿ ನಿರ್ಭಯಾನಂದಜಿ, ವಿವೇಕ ವೈಭವ ಬಗ್ಗೆ ಹಾರಿಕಾ ಮಂಜುನಾಥ ಮಾತನಾಡುವರು. 9.30ಕ್ಕೆ 4ನೇ ಗೋಷ್ಠಿಯಲ್ಲಿ ರಾಮಕೃಷ್ಣರ ದೃಷ್ಟಾಂತ ಅದು ವೇದಾಂತ ಕುರಿತು ಸ್ವಾಮಿ ಶಾರದೇಶಾನಂದಜಿ, ರಾಮಕೃಷ್ಣರ ಸಂದೇಶಗಳು ವರ್ತಮಾನಕ್ಕೆ ದಾರಿದೀಪ ಕುರಿತು ರವೀಂದ್ರ ದೇಶಮುಖ, 10.10ಕ್ಕೆ ನಡೆಯುವ ಗೋಷ್ಠಿಯಲ್ಲಿ ಮಹಾತ್ಮರು ಮನಗಂಡ ಶ್ರೀರಾಮಕೃಷ್ಣ ಕುರಿತು ಚೈತನ್ಯಮಯಿ ಮಾತಾಜಿ, ಶಿಷ್ಯ ಅದ್ಭುತ ಗುರು ಪರಮಾದ್ಭುತ ಕುರಿತು ನಿತ್ಯಾನಂದ ವಿವೇಕವಂಶಿ ಮಾತನಾಡುವರು.
    11.10ಕ್ಕೆ 6ನೇ ಗೋಷ್ಠಿಯಲ್ಲಿ ವೇದಾಂತ ಕೇಸರಿಯ ದಿವ್ಯ ಗರ್ಜನೆ ಕುರಿತು ವಿವೇಕಮಯಿ ಮಾತಾಜಿ, ವಿವೇಕಾನಂದರ ನುಡಿಯ ಕಡೆ ನಮ್ಮ ನಡೆ ಕುರಿತು ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ, ಸ್ವಾಮಿ ವಿವೇಕಾನಂದ ಮತ್ತು ಸೇವಾ ಮನೋಭಾವ ಕುರಿತು ನರೇಂದ್ರ ಬಡಶೇಷಿ, ಮಧ್ಯಾಹ್ನ 12.20ಕ್ಕೆ ಸಂಘಜನನಿ ಶ್ರೀಮಾತೆ ಶಾರದಾದೇವಿ ಕುರಿತು ಸ್ವಾಮಿ ಜಿತಕಾಮಾನಂದಜಿ, ತತ್ವರೂಪಿಣಿ ಶ್ರೀಮಾತೆ ಕುರಿತು ಸ್ವಾಮಿ ಜ್ಯೋತಿರ್ಮಯಾನಂದಜಿ, 1.10ಕ್ಕೆ ಭಾರತೀಯ ಸ್ತ್ರೀ ಆದರ್ಶ ಶ್ರೀಮಾತೆ ಕುರಿತು ಕೈವಲ್ಯಮಯಿ ಮಾತಾಜಿ, 2.30ಕ್ಕೆ ಬದುಕಿನಲ್ಲಿ ಹಾಸ್ಯ ಕುರಿತು ಗಂಗಾವತಿ ಪ್ರಾಣೇಶ, 3.15ಕ್ಕೆ ಬುದ್ಧ-ಶಂಕರ-ವಿವೇಕಾನಂದ ಒಂದು ವಿಶ್ಲೇಷಣೆ ಕುರಿತು ಸ್ವಾಮಿ ನಿರ್ಭಯಾನಂದಜಿ ಮಾತನಾಡುವರು. ಸಂಜೆ 4.30ಕ್ಕೆ ಶಶಿಕಲಾ ಕುಲಹಳ್ಳಿ ಸಂಗೀತ, 5.20ಕ್ಕೆ ಯತಿವೃಂದವರಿಂದ ಸಂನ್ಯಾಸಿ ಗೀತೆ ನಡೆಯಲಿದೆ.
    ಸ್ವಾಮಿ ಜಿತಕಾಮಾನಂದಜಿ ಮತ್ತು ಸ್ವಾಮಿ ನಿರ್ಭಯಾನಂದಜಿ ಸಾನ್ನಿಧ್ಯದಲ್ಲಿ 6ಕ್ಕೆ ಸಮಾರೋಪ ನಡೆಯಲಿದ್ದು, ಸ್ವಾಮಿ ಯೋಗೇಶ್ವರಾನಂದಜಿ, ಸ್ವಾಮಿ ಜ್ಯೋತಿರ್ಮಯಾನಂದಜಿ, ಸ್ವಾಮಿ ಶಾರದೇಶಾನಂದಜಿ, ಸ್ವಾಮಿ ಸುಮೇಧಾನಂದಜಿ ನೇತೃತ್ವ ವಹಿಸುವರು. ಉದ್ಯಮಿ ರಾಘವೇಂದ್ರ ಮೈಲಾಪುರ ಉಪಸ್ಥಿತರಿರುವರು.
    ಮನುಕುಲದ ಉದ್ಧಾರಕ್ಕಾಗಿ ಇಂತಹ ಸಮಾವೇಶಗಳು ಅಗತ್ಯ. ಆಧ್ಯಾತ್ಮಿಕ ಹಸಿವು ನೀಗಿಸಲು ವಿವೇಕಾನಂದ ಆಶ್ರಮಗಳು ನಿರಂತರ ಕೆಲಸ ಮಾಡುತ್ತಿವೆ. ಈ ವಿಶೇಷ ಸಂಗಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು.
    | ಸ್ವಾಮಿ ಮಹೇಶ್ವರಾನಂದಜಿ
    ರಾಮಕೃಷ್ಣ-ವಿವೇಕಾನಂದ ಆಶ್ರಮ ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts