More

    ಭಾರತೀಯ ಸೇನೆಯ ಹೆಸರಿನಲ್ಲಿ 33 ಸಾವಿರ ರೂ. ವಂಚನೆ

    ಕಾರವಾರ: ಭಾರತೀಯ ಸೇನೆಯ ಹೆಸರಿನಲ್ಲಿ ಮೋಸ ಮಾಡುತ್ತಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಭಾರತೀಯ ಸೇನೆಯ ಭಾವಚಿತ್ರ, ಚಿಹ್ನೆಗಳನ್ನು ಬಳಸಿಕೊಂಡು ಮೋಸ ನಡೆದಿದ್ದು, ಈ ಬಗ್ಗೆ ಸರ್ಕಾರ ಕಠಿಣ ಕ್ರಮ ವಹಿಸಬೇಕು ಎಂದು ದೂರುದಾರರ ಸಹೋದರ ಹಾಗೂ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಆರೋಪಿ ನೀಡಿದ ದೂರವಾಣಿ ಸಂಖ್ಯೆ ಪರಿಶೀಲಿಸಿದಾಗ ಆತ ಉತ್ತರ ಪ್ರದೇಶದಲ್ಲಿರುವುದು ತಿಳಿದುಬಂದಿದೆ. ಜಾಲತಾಣಗಳ ಮೂಲಕ ಪರಿಚಯಿಸಿಕೊಂಡು ಹಣ ಲಪಟಾಯಿಸುವ ದಂಧೆ ಹೆಚ್ಚಾಗಿದ್ದು, ಪೊಲೀಸರು ತನಿಖೆ ನಡೆಸಬೇಕು ಎಂದು ವಿನಂತಿಸಿದರು.

    ಆಗಿದ್ದೇನು..?: ಭಾರತೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಸದ್ಯ ಬೆಂಗಳೂರಿನಲ್ಲಿದ್ದು, ತನ್ನ ಸ್ವಿಫ್ಟ್ ಕಾರನ್ನು ತುರ್ತಾಗಿ 1.50 ಲಕ್ಷ ರೂ.ಗೆ ಮಾರಾಟ ಮಾಡುತ್ತೇನೆ ಎಂದು ಅನ್ನಪೂರ್ಣ ಎಂಬ ವ್ಯಕ್ತಿ ಫೇಸ್ ಬುಕ್​ನಲ್ಲಿ ಪೋಸ್ಟ್ ಹಾಕಿದ್ದ. ಪ್ರಧಾನಿ ನರೇಂದ್ರ ಮೋದಿ ಅವರೊಟ್ಟಿಗಿದ್ದ ಯೋಧನೊಬ್ಬನ ಫೋಟೋಗಳೂ ಫೇಸ್​ಬುಕ್ ಡಿಪಿಯಲ್ಲಿದ್ದವು. ಅದನ್ನು ನೋಡಿದ ನಗರದ ವಿನಾಯಕ ನಾಯ್ಕ ಎಂಬುವವರು ಫೇಸ್​ಬುಕ್​ನಲ್ಲಿ ತಿಳಿಸಿದ್ದ 7454062506 ಮೊಬೈಲ್ ನಂಬರ್​ಗೆ ಕರೆ ಮಾಡಿ ಕಾರ್ ಬಗ್ಗೆ ವಿಚಾರಿಸಿದ್ದರು. ‘ಕಾರು ಎರಡು ದಿನದಲ್ಲಿ ಕಾರವಾರಕ್ಕೆ ಕಳಿಸಿಕೊಡಲಾಗುವುದು ಅದಕ್ಕೆ 11,500 ರೂ.ಗಳನ್ನು ತಮ್ಮ ಬ್ಯಾಂಕ್ ಖಾತೆಗೆ ಹಾಕಿ’ ಎಂದು ಅತ್ತ ಕಡೆಯಿಂದ ಯೋಧನ ಸೋಗಿನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಬ್ಯಾಂಕ್ ಖಾತೆ ವಿವರ ನೀಡಿದ್ದ. ಬ್ಯಾಂಕ್​ಗೆ ಹಣ ಜಮಾ ಮಾಡಿದ ನಂತರ ಕಾರ್ ರವಾನೆಯಾದ ಬಗ್ಗೆ ಆರ್ವಿು ಟ್ರಾನ್ಸ್​ಪೋರ್ಟ್ ಎಂಬ ಹೆಸರಿನಲ್ಲಿ ನಕಲಿ ರಸೀದಿಯನ್ನೂ ಕಳಿಸಿದ್ದ. ನಂತರ ಇನ್ನೂ 21 ಸಾವಿರ ರೂ. ಬೇಡಿಕೆ ಇಟ್ಟಿದ್ದ. ಆ ಹಣ ಹಾಕಿದ ನಂತರ ಕಾರು ಅಂಕೋಲಾ ತಲುಪಿದೆ ಎಂದು ಸುಳ್ಳು ಹೇಳುತ್ತ ಕಾಲ ಕಳೆದಿದ್ದ. ಇನ್ನೂ 19 ಸಾವಿರ ರೂ. ಜಮಾ ಮಾಡುವಂತೆ ಹೇಳಿದ್ದ. ಆದರೆ, ಮೋಸದ ಸುಳಿವು ಸಿಕ್ಕಿದ್ದರಿಂದ ವಿನಾಯಕ ಈ ಬಗ್ಗೆ ನಕಲಿ ಯೋಧನ ಬಳಿ ಅನುಮಾನ ವ್ಯಕ್ತಪಡಿಸಿದಾಗ ಅತ್ತ ಕಡೆಯಿಂದ ಮಾತನಾಡುತ್ತಿದ್ದ ವ್ಯಕ್ತಿ ಸೇನೆಯ ಬಗ್ಗೆ ಅವಮಾನ ಮಾಡಿದ ಬಗ್ಗೆ ನಿಮ್ಮ ವಿರುದ್ಧ ದೂರು ನೀಡುವುದಾಗಿ ಧಮಕಿ ಹಾಕಿದ್ದ ಎನ್ನಲಾಗಿದೆ. ಒಟ್ಟಾರೆ 33 ಸಾವಿರ ರೂ. ಕಳೆದುಕೊಂಡ ವಿನಾಯಕ ಈಗ ಪೊಲೀಸರ ಮೊರೆ ಹೋಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts