More

    ಭಾರತೀಯ ರೈಲ್ವೆಯಲ್ಲಿ ಹುಬ್ಬಳ್ಳಿಗೆ ಉನ್ನತ ಸ್ಥಾನ

    ಹುಬ್ಬಳ್ಳಿ: ಹುಬ್ಬಳ್ಳಿ ವಿಭಾಗದಿಂದ 65ನೇ ರೈಲ್ವೆ ಸಪ್ತಾಹವನ್ನು ನಗರದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ಬುಧವಾರ ಆಚರಿಸಲಾಯಿತು.

    ಅತಿಥಿಯಾಗಿದ್ದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ ಅವರು ಉತ್ತಮ ಸಾಧನೆ ತೋರಿದ ಸಿಬ್ಬಂದಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿದರು. ಒಟ್ಟು 133 ವೈಯಕ್ತಿಕ ಬಹುಮಾನ, 5 ಗುಂಪು ಬಹುಮಾನ ಮತ್ತು ವಿವಿಧ ಕಚೇರಿ, ನಿಲ್ದಾಣ, ಘಟಕಗಳಿಗೆ 15 ವಿಭಾಗಗಳಲ್ಲಿ ಬಹುಮಾನ ವಿತರಿಸಲಾಯಿತು.

    ಮುಂಬೈನಿಂದ ಥಾಣೆವರೆಗೆ 1853ರ ಏ. 16ರಂದು ರೈಲು ಸಂಚಾರ ಪ್ರಾರಂಭಗೊಂಡ ನೆನಪಿಗಾಗಿ ಪ್ರತಿ ವರ್ಷ ಏಪ್ರಿಲ್​ನಲ್ಲಿ ರೈಲ್ವೆ ಸಪ್ತಾಹ ಆಚರಿಸಲಾಗುತ್ತದೆ. ಆದರೆ, ಈ ಬಾರಿ ಕೋವಿಂಡ್​ನಿಂದಾಗಿ ಸಮಾರಂಭ ಆಯೋಜಿಸಲು ಸಾಧ್ಯವಾಗಿರಲಿಲ್ಲ.

    ಈ ಸಂದರ್ಭದಲ್ಲಿ ಮಾತನಾಡಿದ ಅರವಿಂದ ಮಾಲಖೇಡೆ, ಕಳೆದ ಆರ್ಥಿಕ ವರ್ಷದಲ್ಲಿ ಹುಬ್ಬಳ್ಳಿ ರೈಲ್ವೆ ವಿಭಾಗ ಉತ್ತಮ ಕಾರ್ಯ ನಿರ್ವಹಿಸಿದೆ. ಲೆಕ್ಕ, ಯಂತ್ರ, ಸುರಕ್ಷತೆ, ಸಂಗ್ರಹ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ವಲಯ ಮಟ್ಟದಲ್ಲಿ ಉತ್ತಮ ಮೆಂಟೇನ್ಡ್ ರನ್ನಿಂಗ್ ರೂಂ ಪ್ರಶಸ್ತಿ ಬೆಳಗಾವಿಗೆ ಹಾಗೂ ಉತ್ತಮ ಮೆಂಟೇನ್ಡ್ ಡೀಸೆಲ್ ಶೆಡ್ ಪ್ರಶಸ್ತಿ ಹುಬ್ಬಳ್ಳಿಗೆ ಲಭಿಸಿದೆ ಎಂದು ತಿಳಿಸಿದರು.

    ಭಾರತೀಯ ರೈಲ್ವೆಯಲ್ಲಿ ಉತ್ತಮ ಆದಾಯ ತರುವ ವಿಭಾಗಗಳ ಸಾಲಿನಲ್ಲಿ ಹುಬ್ಬಳ್ಳಿ ವಿಭಾಗ ಉನ್ನತ ಸ್ಥಾನದಲ್ಲಿದೆ. 2019-20ರಲ್ಲಿ ಹುಬ್ಬಳ್ಳಿ ವಿಭಾಗ 27.38 ಮಿಲಿಯನ್ ಟನ್ ಸರಕು ಸಾಗಿಸಿದೆ. ರೈಲ್ವೆ ಸಿಬ್ಬಂದಿ ಹಾಗೂ ಅವರ ಕುಟುಂಬಕ್ಕಾಗಿ ಹಲವಾರು ಕಲ್ಯಾಣಕಾರಿ ಯೋಜನೆಗಳನ್ನು ಜಾರಿಗೊಳಿಸಿದೆ. 2019-20ರಲ್ಲಿ 1,435 ಸಿಬ್ಬಂದಿಗೆ ಬಡ್ತಿ ನೀಡಲಾಗಿದ್ದು, 1,268 ಸಿಬ್ಬಂದಿಯನ್ನು ನೇಮಕಗೊಳಿಸಲಾಗಿದೆ ಎಂದು ಹೇಳಿದರು.

    ಲಾಕ್​ಡೌನ್ ಅವಧಿಯಲ್ಲಿ ಶ್ರಮಿಕ ಎಕ್ಸ್​ಪ್ರೆಸ್ ರೈಲುಗಳ ಸಂಚಾರ ಪ್ರಾರಂಭಿಸುವ ಮೂಲಕ ರಾಷ್ಟ್ರದ ಆರ್ಥಿಕ ಬೆಳವಣಿಗೆಯಲ್ಲಿ ಹುಬ್ಬಳ್ಳಿ ವಿಭಾಗ ಪ್ರಮುಖ ಪಾತ್ರ ವಹಿಸಿದೆ ಎಂದರು.

    ಅಪರ ವಿಭಾಗೀಯ ವ್ಯವಸ್ಥಾಪಕರಾದ ಜೋಗೇಂದ್ರ ಯದುವೆಂದು ಮತ್ತು ವಿಶ್ವಾಸ ಕುಮಾರ ಮಾತನಾಡಿದರು. ನೈಋತ್ಯ ರೈಲ್ವೆ ವಲಯ ಮಹಿಳಾ ಕಲ್ಯಾಣ ಸಂಘ ಹುಬ್ಬಳ್ಳಿ ವಿಭಾಗದ ಅಧ್ಯಕ್ಷೆ ಮೀನಲ್ ಗಾಂಧೆ, ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಕ್ರಿಸ್ಟಿನ್ ಬೊರಗೊನ್, ವಿಭಾಗೀಯ ಸಿಬ್ಬಂದಿ ಅಧಿಕಾರಿ ಪುರಂದರ ನಾಯ್್ಕ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts