More

    ಭಾರತದ ಆತ್ಮ ಹಳ್ಳಿಗಳಲ್ಲಿದೆ

    ಯಾದಗಿರಿ: ಸತ್ಯ, ಅಹಿಂಸೆ, ಶಾಂತಿ ಮೂಲಕ ದೇಶಕ್ಕೆ ಸ್ವಾತಂತ್ರೃ ದೊರಕಿಸಿ, ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ರಾಷ್ಟ್ರಪಿತ ಮಹತ್ಮ ಗಾಂಧಿ ಪ್ರತಿಪಾದಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ವಾತರ್ಾ ಇಲಾಖೆಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧಿ 154ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಳ್ಳಿಗಳ ಉದ್ಧಾರವೇ ದೇಶದ ಅಭಿವೃದ್ಧಿ ಎಂಬ ತತ್ವವನ್ನು ಸಾರಿ ಭಾರತ ಉನ್ನತಿಗೆ ಕಾರಣೀಕರ್ತರಾದ ದೇಶದ ಹೆಮ್ಮೆಯ, ಮೇರು ವ್ಯಕ್ತಿತ್ವದ ಶ್ರೇಷ್ಠ ವ್ಯಕ್ತಿ ಬಾಪೂಜಿ ಆಗಿದ್ದಾರೆ ಎಂದು ಬಣ್ಣಿಸಿದರು.

    ಸ್ವಾತಂತ್ರೃ ಪೂರ್ವ ಮತ್ತು ನಂತರ ಗಾಂಧಿಜೀ ಅವರು ಅನುಸರಿಸಿದ ಆದರ್ಶತತ್ವಗಳು ಹಾಗೂ ಅವರು ನಡೆದು ಬಂದ ದಾರಿ ನಮಗೆ ಪ್ರೇರಣೆಯಾಗಿದೆ. ಜವಾಹರಲಾಲ್ ನೆಹರು ಅವರ ಕಾಳಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದೂರ್ ಶಾಸ್ತ್ರೀ ಅವರು ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳ ಗಂಭೀರ ಸ್ಥಿತಿ ಅರಿತು, ಜೈ ಜವಾನ್, ಜೈ ಕಿಸಾನ್ ಎಂಬ ವಾಕ್ಯದೊಂದಿಗೆ ಕೃಷಿ ಮತ್ತು ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಿ ದೇಶದ ಮುನ್ನಡಿಗೆ ಹೆಸರಾದರು ಎಂದು ವಿವರಿಸಿದರು.

    ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮಾತನಾಡಿ, ಅನಕ್ಷರತೆ, ಬಡತನ, ಜಾತಿ ಧರ್ಮಗಳ ಕಲಹ ಮತ್ತು ನೂರಾರು ಸಂಸ್ಥಾನಗಳಾಗಿ ವಿಂಗಡಣೆಯಾಗಿದ್ದ ಭಾರತವನ್ನು ಗಾಂಧಿಜೀ ಮತ್ತು ನೂರಾರು ಹೋರಾಟಗಾರರ ಪರಿಶ್ರಮದಿಂದ ನಮಗೆ ಸ್ವಾತಂತ್ರ್ಯ ಬಂದು ಇಂದು ನಾವು ನೆಮ್ಮದಿಯ ಜತೆಗೆ ಹೆಮ್ಮೆಯಿಂದ ಜೀವನ ನಡೆಸಲು ಅವಕಾಶ ಸಿಕ್ಕಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts