More

    ಸಮಾಜ ಸೇವೆ, ದಾನಗಳಲ್ಲಿ ಆತ್ಮ ಸಂತೃಪ್ತಿ ಕಾಣಿ

    ಅಳವಂಡಿ: ದಾನಿಗಳಿಂದಲೆ ಧರ್ಮದ ಕಾರ್ಯಗಳು ಹೆಚ್ಚಾಗಿವೆ. ಸಾಮಾಜಿಕ, ಧಾರ್ಮಿಕ ಸೇವೆ ಹಾಗೂ ದಾನಗಳಲ್ಲಿ ಆತ್ಮ ಸಂತೃಪ್ತಿಯನ್ನು ಕಾಣಿ ಎಂದು ಅಳವಂಡಿಯ ಶ್ರೀಸಿದ್ದೇಶ್ವರ ಮಠದ ಶ್ರೀಮರುಳಾರಾದ್ಯ ಶಿವಾಚಾರ್ಯರು ತಿಳಿಸಿದರು.

    ಇದನ್ನೂ ಓದಿ: ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ

    ಸಮೀಪದ ಹಲವಾಗಲಿ ಗ್ರಾಮದಲ್ಲಿ ನಡೆದ ಶ್ರೀಆದಿಶಕ್ತಿ ದೇವಸ್ಥಾನದ ರಾಜಗೋಪುರ ಲೋಕಾರ್ಪಣೆ, ಮತ್ತು ಕಳಸಾರೋಹಣ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

    ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ನಿಷ್ಕಲ್ಮಷ ಸೇವೆ ಸಲ್ಲಿಸಬೇಕು. ಶ್ರೀದೇವಿಯ ಭವ್ಯ ಗೋಪುರ ನಿರ್ಮಾಣವಾಗಿ ಕಳಸಾರೋಹಣ ನೆರವೇರಿಸಲಾಗಿದೆ. ಇದು ದೇವಿಗೆ ಸಲ್ಲಿಸಿದ ಭಕ್ತಿಯಾಗಿದೆ ಎಂದರು.

    ಹೂಗಳಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ಕಳಸವನ್ನು ಇರಿಸಿಕೊಂಡು ಮಹಿಳೆಯರ ಕಳಸ, ಕುಂಭ ಹಾಗೂ ವಾದ್ಯ ಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

    ನಂತರ ಕಳಸಕ್ಕೆ ವಿಶೇಷ ಪೂಜೆ ಸಲ್ಲಿಸಿ ಗೋಪುರಕ್ಕೆ ಕಳಸಾರೋಹಣ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

    ಅಬ್ಬಿಗೇರಿಯ ಶ್ರೀಮಂಜುನಾಥಯ್ಯ ಶಾಸ್ತ್ರೀಗಳಿಂದ ಪ್ರವಚನ, ಸಂಗೀತ ಹನುಮಂತ ಕುಮಾರ ಮೇಟಿ, ತಬಲಾ ಶಂತವೀರಯ್ಯ ಹಿರೇಮಠ ಅವರಿಂದ ಪುರಾಣ ಪ್ರವಚನ ನಡೆಯಿತು.

    ಮುಂಡರಗಿಯ ನಾಡೋಜ.ಡಾ.ಅನ್ನದಾನೇಶ್ವರ ಮಹಾಸ್ವಾಮಿಗಳು, ಪ್ರಮುಖರಾದ ರಾಜಶೇಖರ ಹಿಟ್ನಾಳ, ಶರಣಬಸಪ್ಪ ಇಂಜನೀಯರ ಕೊಪ್ಪಳ, ರಾಜೇಂದ್ರಗೌಡ, ಸುರೇಶಗೌಡ, ಶಿವನಗೌಡ, ಭರಮಪ್ಪ, ನಗರ, ಬೀಮೇಶಪ್ಪ, ಸೋಮನಗೌಡ, ಸಿದ್ದಣ್ಣ, ಚನ್ನಪ್ಪ, ಸಾರೆಪ್ಪ, ಸಂತೋಷ,

    ರಾಜೇಂದ್ರಗೌಡ, ಚಂದ್ರಗೌಡ, ಹನುಮಂತ, ದೊಡ್ಡ ಮೈಲಾರಪ್ಪ, ದೊಡ್ಡನಿಂಗಪ್ಪ, ಪರಮೇಶ, ಶಿವಕುಮಾರಗೌಡ, ನಿಜಲಿಂಗಪ್ಪ, ಶಿವಾನಂದಯ್ಯ, ಗುರಯ್ಯ, ಮಹೇಶ, ಸುರೇಶ, ಮಂಜುನಾಥಗೌಡ, ಪ್ರದೀಪ, ನಾಗಪ್ಪ, ಯಮನೂರಪ್ಪ, ಶರಣಪ್ಪ, ದೇವಪ್ಪ, ಹನುಮಂತಗೌಡ್ರ, ಹನುಮಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts