More

    ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ

    ಚಾಮರಾಜನಗರ: ವಿದ್ಯಾರ್ಥಿಗಳ ಜ್ಞಾನ ವಿಕಾಸಕ್ಕೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗಿದೆ ಎಂದು ಸಂಸದ ವಿ.ಶ್ರೀನಿವಾಸ್‌ಪ್ರಸಾದ್ ಸಲಹೆ ನೀಡಿದರು.

    ನಗರದ ಚೆನ್ನಿಪುರದಮೋಳೆ ಬಡಾವಣೆ ಸಮೀಪದಲ್ಲಿರುವ ಸೇವಾ ಭಾರತಿ ಕಾಲೇಜು ಆವರಣದಲ್ಲಿ ಸೇವಾ ಭಾರತಿ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಶಶಿ ಸೌರಭ-2023 ಹಾಗೂ 37ನೇ ವಾರ್ಷಿಕೋತ್ಸವ ಸಮಾರಂಭವನ್ನು ಭಾಗವಹಿಸಿ ಮಾತನಾಡಿದರು.

    ಪ್ರಸ್ತುತ ಖಾಸಗಿ ಶಾಲಾಸಂಸ್ಥೆಗಳು ವ್ಯಾಪಾರೀಕರಣದ ಕೇಂದ್ರಗಳಾಗಿದ್ದು, ಬಂಡವಾಳ ಹಾಕಿ ಲಾಭ ಪಡೆದುಕೊಳ್ಳುವ ಉದ್ಯಮವಾಗಿದೆ. ಇದರ ನಡುವೆ ಸೇವಾ ಮನೋಭಾವನೆಯನ್ನೇ ತನ್ನ ಧ್ಯೇಯವಾಗಿಸಿಕೊಂಡಿರುವ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಬಹಳ ವಿಶಿಷ್ಟವಾದ ರೀತಿಯಲ್ಲಿ ಬಡ ಮತ್ತು ಹಿಂದುಳಿದ ಸಮುದಾಯದ ಮಕ್ಕಳಿಗೆ ಶಿಕ್ಷಣ ಜತೆಗೆ ಸಂಸ್ಕಾರ ಕಲಿಸುತ್ತಾ ಬಂದಿದೆ. ಅದು ನಡೆದು ಬಂದ ಹಾದಿಯನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸೇವಾ ಭಾರತಿ ಶಿಕ್ಷಣ ಸಂಸ್ಥೆ ಇನ್ನು ಹೆಚ್ಚಿನ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು.

    ಶಿಕ್ಷಣ ಎಂಬುದು ಯಾರ ಸ್ವತ್ತು ಅಲ್ಲಾ. ಸರ್ಕಾರದಿಂದ ಮಾತ್ರ ಉತ್ತಮ ಶಿಕ್ಷಣ ನೀಡಲು ಸಾಧ್ಯವಿಲ್ಲ. ಇಂತಹ ಖಾಸಗಿ ಸಂಸ್ಥೆಗಳು ಶ್ರಮವಹಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ರಚನೆಯ ಸಂವಿಧಾನದಲ್ಲೂ ಕಡ್ಡಾಯ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಕೇವಲ ಪಠ್ಯ ಪುಸ್ತಕಗಳಿಂದ ಮಾತ್ರ ಮಕ್ಕಳ ಜ್ಞಾನ ವಿಕಾಸವಾಗದು. ಸಾಂಸ್ಕೃತಿಕ ಕಾರ್ಯಕ್ರಮ, ಸಾಹಿತ್ಯ ಚಟುವಟಿಕೆ, ಕ್ರೀಡೆಗಳಿಂದ ವಿದ್ಯಾರ್ಥಿಗಳು ಸಹಕಾರಿಯಾಗಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀಮುಕ್ತಿದಾನಂದ ಮಹಾರಾಜ್, ಸೇವಾ ಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮ.ವೆಂಕಟರಾಮು, ಮೈಸೂರಿನ ಖಾಸಗಿ ಆಸ್ಪತ್ರೆ ಮುಖ್ಯಸ್ಥ ಮಹೇಶ್‌ಶೆಣೈ, ಹಿರಿಯ ಆರ್ಥಿಕ ತಜ್ಞ ಶ್ರೀಶಕುಮಾರ್, ಚಾಮರಾಜನಗರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ ವಿಭಾಗ) ಉಪನಿರ್ದೇಶಕ ಮಂಜುನಾಥ ಪ್ರಸನ್ನ ಹಾಗೂ ಇತರರು ಉಪಸ್ಥಿತರಿದ್ದರು.

    ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ:
    ಸೇವಾ ಭಾರತಿ ಶಿಕ್ಷಣ ಸಂಸ್ಥೆ ಶಶಿ ಸೌರಭ-2023 ಹಾಗೂ 37 ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಎಲ್‌ಕೆಜಿ, ಯುಕೆಜಿ ಮಕ್ಕಳು ನಡೆಸಿಕೊಟ್ಟ ಕರ್ನಾಟಕ ಇತಿಹಾಸ ಸಾರುವ ನೃತ್ಯ, 9ನೇ ತರಗತಿ ವಿದ್ಯಾರ್ಥಿಗಳ ಕರ್ನಾಟಕ ವೀರ ಪರಂಪರೆ ನೃತ್ಯ ವೈಭವ, ಸೇವಾಭಾರತಿ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿಗಳ ನವಶಕ್ತಿ ವೈಭವ ಮತ್ತು ರಾಮಾಯಣ ನೃತ್ಯ ರೂಪಕ ನೋಡುಗರನ್ನು ರೋಮಾಂಚನಗೊಳಿಸಿತು. ಪಿಯುಸಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಅನುಭವ ಮಂಟಪ, ಹನೂಮಾನ್ ಚಾಲೀಸ್ ಹಾಗೂ ಚೆಲುವ ಚಾಮರಾಜನಗರ ನೃತ್ಯ ರೂಪಕಗಳು ಕಣ್ಮನ ಸೆಳೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts