More

    ಭಾರತದಲ್ಲಿದೆ ಅಪಾರ ಜ್ಞಾನ ಸಂಪತ್ತು

    ಸಿದ್ದಾಪುರ: ಭಾರತದಲ್ಲಿ ಶ್ರೀಮಂತರು ಹೆಚ್ಚಿಗೆ ಇಲ್ಲದಿರಬಹುದು, ದೊಡ್ಡ ತಂತ್ರಜ್ಞಾನ ಇಲ್ಲದಿರಬಹುದು. ಆದರೆ, ಇಲ್ಲಿ ಅಪಾರವಾದ ಜ್ಞಾನ ಸಂಪತ್ತು ಇದೆ. ಇದು ಪುಣ್ಯಭೂಮಿ. ಇಲ್ಲಿ ಸಾವಿರಾರು ಸಂತರು ಆಗಿ ಹೋಗಿದ್ದಾರೆ. ಅಧ್ಯಾತ್ಮ ಮತ್ತು ಲೌಕಿಕ ಎರಡನ್ನೂ ಜಗತ್ತಿಗೆ ಪರಿಚಯಿಸಿದ ರಾಮಾಯಣ ಮತ್ತು ಮಹಾಭಾರತದಂತಹ ಗ್ರಂಥಗಳು ಇಲ್ಲಿವೆ. ಇವೆಲ್ಲವನ್ನು ನೋಡಿಯೇ ಜಗತ್ತಿನ ಇತರ ದೇಶಗಳು ನಮ್ಮನ್ನು ಗೌರವದಿಂದ ಕಾಣುತ್ತಿವೆ ಎಂದು ಶಿರಳಗಿ ಶ್ರೀ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹೇಳಿದರು.

    ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಅಯೋಧ್ಯೆ ಶ್ರೀ ರಾಮಮಂದಿರ ನಿರ್ವಣದ ನಿಧಿ ಸಂಗ್ರಹ ಅಭಿಯಾನ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

    ಭಗವನ್ನಾಮ ಸ್ಮರಣೆ ಮಾಡುವುದು ನಮಗೆ ಅವಶ್ಯಕತೆ ಇದೆ. ಅದರಲ್ಲೂ ರಾಮ ನಾಮಸ್ಮರಣೆ ಅತ್ಯಂತ ಶಕ್ತಿಯುತವಾದದ್ದು.. ಕೇವಲ ರಾಮ ನಾಮ ಸ್ಮರಣೆಯಿಂದಲೇ ಮೋಕ್ಷ ಪಡೆದವರಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ರಾಮ ನಾಮ ಸ್ಮರಣೆ ಮಾಡಬೇಕು. ಅಯೋದ್ಯೆ ರಾಮಮಂದಿರ ನಮ್ಮ ದೇಶದ ಹೆಮ್ಮೆಯ ಸಂಕೇತ. ಪ್ರತಿಯೊಬ್ಬ ಭಾರತೀಯರ ಬೆವರಿನ ಫಲದಿಂದ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ ನಿಧಿ ಸಂಗ್ರಹ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ನಿಧಿಗೆ ತಮ್ಮ ಕಾಣಿಕೆ ನೀಡಬೇಕು ಎಂದು ಹೇಳಿದರು.

    ನಿಧಿ ಸಮರ್ಪಣಾ ಅಭಿಯಾನದ ತಾಲೂಕು ಅಧ್ಯಕ್ಷ ಡಾ.ಕೆ. ಶ್ರೀಧರ ವೈದ್ಯ ಮಾತನಾಡಿದರು.

    ಇದೇ ಸಂದರ್ಭದಲ್ಲಿ ಸ್ವಾಮೀಜಿ ಅುವರು ಸ್ಥಳೀಯ ಅಯ್ಯಪ್ಪ ಸ್ವಾಮಿ ದೇವಾಲಯದ ವೆಬ್​ಸೈಟ್​ಗೆ ಚಾಲನೆ ನೀಡಿದರು.

    ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ, ಭಾನ್ಕುಳಿಮಠದ ಗೋ ಸ್ವರ್ಗದ ವತಿಯಿಂದ ಆರ್.ಎಸ್.ಹ ೆಗಡೆ ಹರಗಿ ಹಾಗೂ ಸಂಗಡಿಗರು ಮಂದಿರ ನಿರ್ವಣಕ್ಕೆ ನಿಧಿ ಸಮರ್ಪಿಸಿದರು.

    ಆರ್​ಎಸ್​ಎಸ್ ಮುಖಂಡ ಸೋಮಶೇಖರ ಗೌಡ, ಅಯ್ಯಪ್ಪಸ್ವಾಮಿ ದೇವಾಲಯದ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ ಉಪಸ್ಥಿತರಿದ್ದರು.

    ವಿನಾಯಕ ಮಹಾಲೆ,. ರಮೇಶ ಆಚಾರಿ, ಸುಮಿತ್ರಾ ಶೇಟ್, ಈಶ್ವರ ರಾಗಿಹೊಸಳ್ಳಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts