More

    ಭವಿಷ್ಯ ಹೇಳ್ಬೇಡಿ, ನಿಖರ ಮಾಹಿತಿ ಕೊಡಿ

    ಆಳಂದ: ಭವಿಷ್ಯ ಹೇಳುವುದು ಬಿಟ್ಟು, ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಅಂಕಿ- ಅಂಶಗಳಲ್ಲಿ ನಿಖರವಾಗಿ ನೀಡಿ ಎಂದು ಸಂಸದ ಭಗವಂತ ಖೂಬಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
    ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕರೊನಾ ಜಾಗೃತಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಹಾರ ಇಲಾಖೆ ಅಧಿಕಾರಿಗಳಿಗೆ ತಾಲೂಕಿನಲ್ಲಿ 19 ಸಾವಿರ ಪಡಿತರ ಚೀಟಿದಾರರಿದ್ದಾರೆ ಎಂದು ಹೇಳುತ್ತಾರೆ. ಅವರಿಗೆ ಸರಿಯಾದ ಸಂಖ್ಯೆಯೇ ಗೊತ್ತಿಲ್ಲ. ಹೀಗಾದ್ದಲ್ಲಿ ಸಕರ್ಾರದ ಯೋಜನೆಗಳು ಜನತೆಗೆ ಹೇಗೆ ತಲುಪಿಸುತ್ತೀರಿ? ಕ್ಷೇತ್ರದಲ್ಲಿ 81,530 ರೇಶನ್ ಕಾಡರ್್ ಹಾಗೂ 150 ನ್ಯಾಯಬೆಲೆ ಅಂಗಡಿಗಳಿವೆ. ಕೇವಲ ಕಚೇರಿಯಲ್ಲಿ ಕುಳಿತರೆ ಯಾವ ಕೆಲಸವೂ ಆಗುವುದಿಲ್ಲ. ಸಂಜೆ 4ಗಂಟೆಯೊಳಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಎಷ್ಟು ಆಹಾರ ವಿತರಣೆ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.
    ಶಾಸಕ ಸುಭಾಷ ಗುತ್ತೇದಾರ್ ಮಾತನಾಡಿ, ಪಟ್ಟಣದಲ್ಲಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಹಣ್ಣು ಮಾರಾಟ ನಡೆಯುತ್ತಿದೆ. ಇದರಿಂದ ಕರೊನಾ ಹರಡುವ ಸಾಧ್ಯತೆ ಇದೆ. ಹೀಗಾಗಿ ಕೂಡಲೇ ಬಂಡಿಗಳನ್ನು ವಶಕ್ಕೆ ಪಡೆದು, ವಾರ್ಡವಾರು ತರಕಾರಿ, ಹಣ್ಣು ಮಾರಾಟಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಬಾಬುರಾವ ವಿಭೂತೆ ಅವರಿಗೆ ತಾಕೀತು ಮಾಡಿದರು.
    ಮಾತನಾಡಿ ಪ್ರತಿ ಒಂದು ಕೆಲಸವು ಪೊಲೀಸರಿಂದ ಸಾಧ್ಯ ಇರುವುದಿಲ್ಲ. ಪುರಸಭೆ ಅಧಿಕಾರಿಗಳು ಸ್ಥಳದಲ್ಲಿಯೇ ಬಂದು ನಿಂತರೆ ನಾವು ಕ್ರಮಕೈಗೊಳ್ಳುತ್ತವೆಂದು ಸಭೆಯಲ್ಲಿ ತಿಳಿಸಿದಾಗ ನೀಮ್ಮ ಅಧಿಕಾರಿಗಳು ಏನು ಮಾಡುತ್ತಿದ್ದಾರೆಂದು ಮುಖ್ಯಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
    ತಾಲೂಕು ಆರೋಗ್ಯ ಅಧಿಕಾರಿ ಡಾ. ಅಭಯಕುಮಾರ ಮಾತನಾಡಿ, ವಿದೇಶದಿಂದ 125 ಜನ, ಬೇರೆ ರಾಜ್ಯ, ಜಿಲ್ಲೆಗಳಿಂದ 12,705 ಜನರು ಆಗಮಿಸಿದ್ದಾರೆ. ಅದರಲ್ಲಿ 6198 ಜನರನ್ನು ಹೋಮ್ ಕ್ವಾರಂಟೈನ್ನಲ್ಲಿ ಇರಿಸಿ ನಿಗಾ ವಹಿಸಲಾಗಿದೆ. ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ತಾಪಂ ಅಧ್ಯಕ್ಷೆ ನಾಗಮ್ಮ ಗುತ್ತೇದಾರ್, ತಹಸೀಲ್ದಾರ್ ದಯಾನಂದ ಪಾಟೀಲ್, ಡಿವೈಎಸ್ಪಿ ಮಲ್ಲಿಕಾಜರ್ುನ, ತಾಪಂ ಇಒ ಡಾ. ಸಂಜಯ ರೆಡ್ಡಿ, ಉಪ ತಹಸೀಲ್ದಾರ್ ಬಿ.ಜಿ. ಕುದುರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿಜಯಕುಮಾರ ಪುಲಾರೆ, ಕೃಷಿ ಅಧಿಕಾರಿ ಶರಣಗೌಡ ಪಾಟೀಲ್, ಸಿಪಿಐ ಶಿವಾನಂದ ಗಾಣಗೇರ, ಪ್ರಮುಖರಾದ ಅಶೋಕ ಗುತ್ತೇದಾರ್, ಮಲ್ಲಣ್ಣ ನಾಗೂರೆ ಇದ್ದರು.

    ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಎಷ್ಟು ರೈತರ ನೋಂದಣಿ ಮಾಡಲಾಗಿದೆ. ಕ್ಷೇತ್ರದಲ್ಲಿ ಸುಮಾರು 3-4 ರೈತರು ಯೋಜನೆಯಿಂದ ವಂಚಿತರಾಗಿದ್ದಾರೆ. ಹಾಗಿದ್ದರೆ ನೀವೆಲ್ಲ ಏನು ಮಾಡುತ್ತಿದ್ದೀರಿ. ಕೃಷಿ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆ ಆಲಿಸಿ, ಸಮರ್ಪಕ ಸೌಲಭ್ಯ ಕಲ್ಪಿಸಬೇಕು.
    | ಭಗವಂತ ಖೂಬಾ, ಸಂಸದ
    ಎಂದು ಅವರಿಗೆ ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts