More

    ಭವಿಷ್ಯ ಹಾಗೂ ಭದ್ರತೆ ಪ್ರಧಾನಿ ಮೋದಿಯಿಂದ ಸಾಧ್ಯ

    ಬಾಗಲಕೋಟೆ: ದೇಶದಲ್ಲಿ ಮಹಿಳೆಯರ ಉಜ್ವಲ್ ಭವಿಷ್ಯ ಹಾಗೂ ಭದ್ರತೆ ಪ್ರಧಾನಿ ನರೇಂದ್ರ ಮೋದಿಯಿಂದ ಸಾಧ್ಯ ಎಂದು ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಹೇಳಿದರು.

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ನವನಗರದ ೨೮ ನೇ ವಾರ್ಡಿನ ೮ ನೇ ಸೇಕ್ಟರ್‌ನಲ್ಲಿರುವ ನಗರಸಭೆ ಸದಸ್ಯೆ ಪ್ರಕಾಶ ಹಂಡಿ ಅವರ ಮನೆ ಆವರಣದಲ್ಲಿ ಹಮ್ಮಿಕೊಂಡ ಚುನಾವಣಾ ಪ್ರಚಾರದ ವಾರ್ಡ ಸಭೆಯನ್ನುದ್ದೇಶಿಸಿ ಮಾತನಾಡಿದರು.

    ರಾಜಕೀಯ ಕ್ಷೇತ್ರದಲ್ಲಿ ಮಹಿಳಿಯರಿಗೆ ಸಮಾನ ಅವಕಾಶ ಕಲ್ಪಿಸಲು ಲೋಕಸಭೆ ಮತ್ತು ರಾಜ್ಯಸಭೆಯಗಳಲ್ಲಿ ಮಹಿಳೆಯರಿಗೆ ಶೇ.೩೩ ಮೀಸಲಾತಿಗಾಗಿ ನಾರಿ ಶಕ್ತಿ ವಂದನಾ ಅಧಿನಿಯಮ ತರುವ ಮೂಲಕ ಅವರ ಉಜ್ವಲ ಭವಿಷ್ಯ ಹಾಗೂ ಭದ್ರತೆಗೆ ಪ್ರಧಾನಿ ಮೋದಿ ಕಾರಣರಾಗಿದ್ದಾರೆ, ಅಲ್ಲದೆ ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನದಡಿ ಹೆಣ್ಣುಮಕ್ಕಳ ವಿದ್ಯಾಭ್ಯಾಸ,ರಕ್ಷಣೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಅವರ ಹೆಸರಿನಲ್ಲಿ ಠೇವಣಿ ಇಡುವ ಪ್ರಧಾನಮಂತ್ರಿ ಸುಕನ್ಯಾ ಸಮೃದ್ಧಿ ಯೋಜನೆ ತಂದಿದ್ದಾರೆ, ಮುಸ್ಲಿಂ ಹೆಣ್ಣು ಮಕ್ಕಳ ವ್ಯಯುಕ್ತಿಕ ಹಕ್ಕುಗಳ ರಕ್ಷಣೆಗಾಗಿ ಮತ್ತು ಅವರ ಗೌರವಯುತ ಬದುಕಿಗಾಗಿ ತ್ರವಳಿ ತಲಾಖ ನಿಷೇಧ, ಪ್ರತಿ ತಿಂಗಳ ೯ ರಂದು ಎಲ್ಲಾ ಗರ್ಭಿಣಯರಿಗೆ ಪ್ರಧಾನ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನದಡಿ ಸಾರ್ವತ್ರಿಕವಾಗಿ ಸಮಗ್ರ ಮತ್ತು ಗುಣಮಟ್ಟದ ಪ್ರಸವ ಪೂರ್ವ ಆರೋಗ್ಯ ತಪಾಸಣೆ. ದೇಶದಲ್ಲಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿಗೆ ಮತ ನೀಡುವವಂತೆ ಮನವಿ ಮಾಡಿದರು.

    ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ ದೇಶದಲ್ಲಿ ಹೊಸ ೭ ಐಐಎಮ್, ೭ ಐಐಟಿಗಳ ಸ್ಥಾಪನೆ, ಎಮ್ಸ್ ಗಳ ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳ, ಹಾಗೂ ವಸಾಹತು ಶಾಹಿ ಮಾನಸಿಕತೆಗೆ ಅಂತ್ಯ ಹಾಡಲು, ಪ್ರಾದೇಶಿಕತೆಗೆ ಒತ್ತು ನೀಡಲು ರಾಷ್ಟ್ರೀ ಶಿಕ್ಷಣ ನೀತಿ ಜಾರಿ ಮಾಡಿದ್ದು ಅದರಿಂದ ನಮ್ಮ ಶಿಕ್ಷಣ ರಂಗದಲ್ಲಿ ಹೊಸ ಬೆಳಕು ಕಾಣಲಿದ್ದು ರಾಜ್ಯದಲ್ಲಿಯೂ ಕೂಡಾ ರಾಷ್ಟೀಯ ಶಿಕ್ಷಣ ನೀತಿ ಜಾರಿಗೆ ತರಬೇಕಿದೆ ಎಂದ ಅವರು ದೇಶ ಉಳಿಯಲು ಬಿಜೆಪಿಗೆ ಮತ ನೀಡುವುದು ಅವಶ್ಯ ಎಂದು ಜನರಿಗೆ ತಿಳಿಸಿ ಮತಯಾಚನೆ ಮಾಡಿದರು.

    ಸಭೆಯಲ್ಲಿ ಪ್ರಕಾಶ ದಾಯಪುಲೆ, ಮೇಲಪ್ಪ ಬಾದೋಡಗಿ, ಚಂಬಣ್ಣ ಹಂಡಿ, ಬ್ಯಾಗ್ಯಶ್ರೀ ಹಂಡಿ, ರೇಖಾ ಉಂಕಿ,ಅಂಬರೀಶ ಕೊಳ್ಳಿ, ಮಲ್ಲಪ್ಪ ಮಮದಾಪುರ, ಅರವಿಂದ ಕಟ್ಟಿಮನಿ, ಮಂಜು ಪತ್ತಾರ, ಸೇರಿದಂತೆ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts