More

    ‘ಭದ್ರೆ’,ಸಚಿವರ ವಿರುದ್ಧ ಅಸಮಾಧಾನ

    ಚಿತ್ರದುರ್ಗ:ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿತ ಅನುದಾನ ಬಿಡುಗಡೆಗೆ ಹಾಗೂ ಯೋಜನೆ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿ ಜಿಪಂ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ರೈತರು,ಸೋಮವಾರ ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ಡಿ.ಸುಧಾಕರ್ ಅವರಿಗೆ ೇರಾವ್ ಹಾಕಿದರು.
    ಡಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ವಿವಿಧ ಸಭೆಗಳಲ್ಲಿ ಭಾಗವಹಿಸಲು ಆಗಮಿಸಿದ ಸಚಿವರಿಗೆ ಮುತ್ತಿಗೆ ಹಾಕಿದರು. ಕಳೆದ 15 ದಿನಗಳಿಂದ ಪ್ರತಿಭಟನೆ ನಡೆಸಲಾಗುತ್ತಿದ್ದರೂ ಸಚಿವರು ಸ್ಥಳಕ್ಕೆ ಭೇಟಿ ಕೊಟ್ಟಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ರಾಜ್ಯ ರೈತ ಸಂಘದ ಕಾರ‌್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ,ಈ ಅವಧಿಯೊಳಗೆ ಜಿಪಂಕ್ಕೆ ಸಚಿವ ಸುಧಾಕರ್ ಭೇಟಿಕೊಟ್ಟಿದ್ದರೂ,ಪ್ರತಿಭಟನಾ ಸ್ಥಳಕ್ಕೆ ಬರಲಿಲ್ಲವೆಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
    ರಾಜ್ಯಸರ್ಕಾರದ ಬಜೆಟ್‌ನಲ್ಲಿ ಜಿಲ್ಲೆ ನೀರಾವರಿಗೆ 100 ರೂ.ಅನುದಾನ ಮೀಸಲಿಟ್ಟಿಲ್ಲ,ಸರ್ಕಾರ ಜಿಲ್ಲೆ ಅಭಿವೃದ್ಧಿಗೆ ನಿರಾಸಕ್ತಿ ಪ್ರದರ್ಶಿ ಸಿದೆ. ರಾಜಕಾರಣಿಗಳು ಸ್ವಹಿತಾಸಕ್ತಿಯಲ್ಲಿ ಮುಳುಗಿದ್ದಾರೆಂದು ಆರೋಪಿಸಿದ ಅವರು,ಮುಂಬರುವ ಲೋಕಸಭೆಯಲ್ಲಿ ಚುನಾವಣೆ ವೇ ಳೆ ಬಿಜೆಪಿ-ಕಾಂಗ್ರೆಸ್ಸಿಗೆ ಪಾಠ ಕಲಿಸಲಾಗುವುದು,ಈ ನಿಟ್ಟಿನಲ್ಲಿ ರೈತ ಸಂಘದಿಂದ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ ನಡೆಸಲಿದೆ ಎಂ ದರು.
    ಡಿಎಸ್‌ಹಳ್ಳಿ ಮಲ್ಲಿಕಾರ್ಜುನ,ರಾಜಣ್ಣ,ಬಸವರಾಜಪ್ಪ,ಪ್ರವೀಣ್,ಪ್ರಸನ್ನ,ಧನಂಜಯರೆಡ್ಡಿ,ವೆಂಕಟೇಶ್‌ರೆಡ್ಡಿ,ರಾಮರೆಡ್ಡಿ,ಕಾಂತರಾಜ್ ರವಿ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು. ಜಿಪಂ ಆವರಣದಲ್ಲಿರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಕಚೇರಿ ಬಳಿ ರೈತ ರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 16ನೇ ದಿನಕ್ಕೆ ಕಾಲಿಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts