More

    ಭದ್ರಾ ಹೋರಾಟ ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ

    ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿರುವ 5,300 ಕೋಟಿ ರೂ. ಬಿಡುಗಡೆಗೆ ಒತ್ತಾಯಿಸಿ, ಸತತ 32 ದಿನಗಳಿಂದ ಜಿಪಂನ ಸಂಸದರ ಕಚೇರಿ ಮುಂದೆ ನಡೆಸುತ್ತಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ತಿಳಿಸಿದರು.

    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1974ರಲ್ಲಿದ್ದ ಬರಗಾಲ ಈಗ ಮತ್ತೆ ಎದುರಾಗಿದೆ. ನೀರಾವರಿ ಬಿಟ್ಟರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ. ಹೀಗಾಗಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರಿಗೆ ಮನವಿ ಮಾಡಿದ್ದೇವೆ. ಆಡಳಿತಾತ್ಮಕ, ಕಾನೂನು ಸಮಸ್ಯೆ ಬಗೆಹರಿಸಿ ಮಳೆಗಾಲ ಮುಗಿಯುವುದರೊಳಗೆ ಭದ್ರಾ ಮೇಲ್ದಂಡೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

    ಚುನಾವಣೆ ಘೋಷಣೆಯಾದ ನಂತರ 1 ವಾರ ಕಾದು ನೋಡುತ್ತೇವೆ. ಕಾಮಗಾರಿಗೆ ವೇಗ ಸೇರಿ ನಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸದಂತೆ ಜನರಲ್ಲೂ ಜಾಗೃತಿ ಮೂಡಿಸಲಿದ್ದೇವೆ ಎಂದು ಎಚ್ಚರಿಸಿದರು.

    ಧರಣಿಗೆ ಈವರೆಗೂ 2.19 ಲಕ್ಷ ಸಂಗ್ರಹವಾಗಿದೆ. ಅದರಲ್ಲಿ 1.84 ಲಕ್ಷ ಖರ್ಚಾಗಿದೆ. ಉಳಿದ ಹಣವನ್ನು ಮುಂದಿನ ಹೋರಾಟಕ್ಕೆ ಕಾಯ್ದಿರಿಸಲಾಗಿದೆ. ದವಸ, ಧಾನ್ಯ ಕೂಡ ಉಳಿದಿದೆ. ಚಳವಳಿ, ಧರಣಿಗೆ ಜನರ ಬೆಂಬಲ ತುಂಬಾ ಅಗತ್ಯ ಎಂದು ಕೋರಿದರು.

    ಹಸಿರುಸೇನೆ ಅಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಮುಖಂಡರಾದ ಮಂಜುನಾಥ್, ರಾಜಶೇಖರ್, ಸತೀಶ್, ಆರ್.ಬಿ.ನಿಜಲಿಂಗಪ್ಪ, ಅಪ್ಪರಸನಹಳ್ಳಿ ಬಸವರಾಜಪ್ಪ, ಮಲ್ಲೇಶಿ, ತಿಪ್ಪೇಸ್ವಾಮಿ, ನಿರಂಜನಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts