More

    ಭದ್ರಾವತಿ: ಹೊಸ ಸೇತುವೆ ಮೇಲಿನ ಪ್ರವಾಹ ಇಳಿಕೆ

    ಭದ್ರಾವತಿ: ಭದ್ರಾ ಜಲಾಶಯದಿಂದ ನದಿಗೆ ಬಿಡುತ್ತಿರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಿದ್ದರಿಂದ ಹೊಸ ಸೇತುವೆ ಮೇಲೆ ಹರಿಯುತ್ತಿದ್ದ ನೀರು ಇಳಿಕೆಯಾಗಿ ಯಥಾಸ್ಥಿತಿಗೆ ತಲುಪಿದೆ.
    ನೀರಿನ ರಭಸಕ್ಕೆ ಸೇತುವೆಯ ತಡೆಗೋಡೆ ಕುಸಿದಿದ್ದು, ಪಿಡಬ್ಲುೃಡಿ ಇಲಾಖೆಯಿಂದ ಸರಿಪಡಿಸಬೇಕಿದೆ. ಕುಸಿದ ತಡೆಗೋಡೆಯನ್ನು ತಾತ್ಕಾಲಿಕವಾಗಿ ಸರಿಪಡಿಸಿದರೆ ಸೇತುವೆ ಮೇಲೆ ಸಂಚಾರ ಎಂದಿನಂತೆ ಆರಂಭವಾಗಲಿದೆ.
    ಮಳೆ ಕಡಿಮೆಯಾಗಿ ನದಿ ಪ್ರವಾಹ ಇಳಿದಿದ್ದರೂ ತಾಲೂಕು ಆಡಳಿತದಿಂದ ತೆರೆಯಲಾಗಿದ್ದ ಕಾಳಜಿ ಕೇಂದ್ರಗಳನ್ನು ಮುಂದುವರಿಸಲಾಗಿದೆ. ಬಿ.ಎಚ್.ರಸ್ತೆಯ ಮಂಜುನಾಥ ಕಲ್ಯಾಣ ಮಂಟಪ, ಭದ್ರಾ ಪ್ರೌಢಶಾಲೆ ಹಾಗೂ ವಳ್ಳುವರ್ ಕಲ್ಯಾಣ ಮಂಟಪದಲ್ಲಿ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
    ಕವಲಗುಂದಿ ಹಾಗೂ ಗುಂಡಪ್ಪ ಶೆಡ್ ನಿವಾಸಿಗಳು ಮಂಗಳವಾರ ಬೆಳಗ್ಗೆ ಮನೆಗಳಿಗೆ ತೆರಳಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಆದರೆ ಮಳೆ ಹಾಗೂ ಪ್ರವಾಹದ ಸಮಸ್ಯೆ ಮತ್ತೆ ಎದುರಾಗಬಹುದೆಂಬ ಕಾರಣಕ್ಕೆ ತಾಲೂಕು ಆಡಳಿತ ನಿರಾಶ್ರಿತರನ್ನು ಅವರ ಮನೆಗಳಿಗೆ ಕಳುಹಿಸದೆ ಕಾಳಜಿ ಕೇಂದ್ರದಲ್ಲಿಯೇ ಇರಿಸಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts