More

    ಭದ್ರಾವತಿಗೆ ಮೃತ್ತಿಕೆ ಸಂಗ್ರಹ ರಥಯಾತ್ರೆ; ಮುಖಂಡರು, ಅಧಿಕಾರಿಗಳ ಸಾಥ್

    ಭದ್ರಾವತಿ: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣದ ಅಂಗವಾಗಿ ಮೃತ್ತಿಕೆ ಸಂಗ್ರಹಣೆ ರಥ ಶನಿವಾರ ನಗರಕ್ಕೆ ಆಗಮಿಸಿತು. ತಾಲೂಕಿನ ಕಾರೇಹಳ್ಳಿ ಗ್ರಾಮದಲ್ಲಿ ರಥವನ್ನು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.
    ತಾಲೂಕು ಆಡಳಿತ, ತಾಪಂ ಅಧಿಕಾರಿಗಳು ಸೇರಿದಂತೆ ಎಲ್ಲಾ ಸರ್ಕಾರಿ ಇಲಾಖೆ ಅಧಿಕಾರಿಗಳು, ವಿವಿಧ ಪಕ್ಷಗಳು, ಸಂಘ-ಸಂಸ್ಥೆಗಳು, ಒಕ್ಕಲಿಗರ ಸಮುದಾಯದ ಪ್ರಮುಖರು ಕಾರೇಹಳ್ಳಿಯ ಹುಚ್ಚನದಾಸಪ್ಪ ದೇವಸ್ಥಾನದ ಬಳಿ ರಥಕ್ಕೆ ಪೂಜೆ ಸಲ್ಲಿಸಿದರು.
    ಕಾರೇಹಳ್ಳಿ ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮಗಳ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯೆಯರು ಪೂರ್ಣಕುಂಭ ಮೆರವಣಿಗೆ ನಡೆಸಿದರು. ಒಕ್ಕಲಿಗರ ಸಮುದಾಯದ ಪ್ರಮುಖರಾದ ಶಾರದಾ ಅಪ್ಪಾಜಿ, ಎಸ್.ಕುಮಾರ್, ಬಾಲಕೃಷ್ಣ, ಬಿಜೆಪಿ ಮುಖಂಡ ಜಿ.ಧರ್ಮಪ್ರಸಾದ್ ರಥಕ್ಕೆ ಹಸಿರು ನಿಶಾನೆ ತೋರಿದರು. ಮೃತ್ತಿಕೆ ಸಂಗ್ರಹಣೆ ರಥವು ಕಾರೇಹಳ್ಳಿಯಿಂದ ಕೆಂಪೇಗೌಡ ನಗರ, ಬಾರಂದೂರು ಗ್ರಾಮಗಳ ಮೂಲಕ ನಗರದ ಕಡೆಗೆ ತೆರಳಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts