More

    ಭದ್ರತೆಯೊಂದಿಗೆ ಇವಿಎಂ ರವಾನೆ

    ಬೆಳಗಾವಿ: ಪ್ರಥಮ ರ‌್ಯಾಂಡಮೈಜೇಷನ್ (ಯಾದೃಚ್ಛೀಕರಣ) ನಡೆಸಿದ ಬಳಿಕ ವಿಧಾನಸಭಾ ಕ್ಷೇತ್ರವಾರು ಹಂಚಿಕೆಯಾಗಿರುವ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) 18 ಕ್ಷೇತ್ರಗಳಿಗೆ ಬಿಗಿ ಭದ್ರತೆಯೊಂದಿಗೆ ರವಾನೆ ಮಾಡಲಾಗಿದೆ ಎಂದು ಜಿಲ್ಲಾ ಚುನಾ ವಣಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

    ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಚುನಾವಣಾ ಆಯೋಗದ ಇವಿಎಂ ಉಗ್ರಾಣದಲ್ಲಿದ್ದ ಇವಿಎಂ ಗಳನ್ನು ರ‌್ಯಾಂಡ ಮೈಜೇಷನ್ ಪ್ರಕಾರ ಆಯಾ ಕ್ಷೇತ್ರಗಳಿಗೆ ರವಾನಿಸುವ ಪ್ರಕ್ರಿಯೆ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

    ಕಂಟೇನರ್ ವಾಹನಗಳಲ್ಲಿ ಇವಿಎಂ

    ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆಯಾಗಿರುವ 5321 ಬ್ಯಾಲೆಟ್ ಯುನಿಟ್, 5321 ಕಂಟ್ರೋಲ್ ಯುನಿಟ್ ಹಾಗೂ 5,765 ವಿವಿಪ್ಯಾಟ್‌ಗಳನ್ನು ಆಯಾ ಮತಕ್ಷೇತ್ರದ ಸಂಖ್ಯೆ ಮತ್ತು ಹೆಸರು ಹೊಂದಿರುವ ಸ್ಟಿಕ್ಕರ್ ಅಂಟಿಸಿ ದೊಡ್ಟ ಟ್ರಂಕ್‌ಗಳಲ್ಲಿ ಭದ್ರಪಡಿಸಿ ಸೀಲ್ ಮಾಡಲಾಗಿದೆ. ಅಲ್ಲದೆ, ಪೊಲೀಸ್ ಬಿಗಿಭದ್ರತೆಯೊಂದಿಗೆ ಜಿಪಿಎಸ್ ಅಳವಡಿಸಿದ ಕಂಟೇನರ್ ವಾಹನಗಳಲ್ಲಿ ಇವಿಎಂ ಸಾಗಿಸಲಾಗಿದೆ ಎಂದರು.

    ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ನೇತೃತ್ವದ ತಂಡಗಳ ಸಮ್ಮುಖದಲ್ಲಿಯೇ ರ‌್ಯಾಂಡಮೈಜೇಷನ್ ಪ್ರಕಾರ ಇವಿಎಂ ಹಂಚಿಕೆ ಮಾಡಲಾಗಿದೆ. ಜತೆಗೆ ಇವಿಎಂ ಸಾಗಣೆ ಪ್ರಕ್ರಿಯೆಯನ್ನು ವೀಕ್ಷಿಸಲು ಅವಕಾಶ ನೀಡಲಾಗಿತ್ತು. ಪ್ರತಿಯೊಂದು ಮತಕ್ಷೇತ್ರದ ಪ್ರತ್ಯೇಕ ಕೌಂಟರ್‌ಗಳಲ್ಲಿ ಖುದ್ದಾಗಿ ಪರಿಶೀಲನೆ ನಡೆಸಲಾಗಿದೆ. ಯಾವುದೇ ರೀತಿ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಚುನಾವಣಾಧಿಕಾರಿಗಳಾದ ಗೀತಾ ಕೌಲಗಿ, ಡಾ. ರಾಜೀವ ಕೂಲೇರ, ಡಾ.ರುದ್ರೇಶ ಘಾಳಿ, ಬಲರಾಮಚವಾಣ, ರಾಜಶೇಖರ ಡಂಬಳ, ನೋಡಲ್ ಅಧಿಕಾರಿ ಪ್ರೀತಂ ನಸಲಾಪುರೆ ಇತರರಿದ್ದರು.

    ಬೆಳಗಾವಿ ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಚುನಾವಣಾ ಆಯೋಗದ ಇವಿಎಂ ಉಗ್ರಾಣದಲ್ಲಿದ್ದ ಇವಿಎಂಗಳನ್ನು ಜಿಲ್ಲಾ ಚುನಾವಣಾಧಿಕಾರಿ ನಿತೇಶ ಪಾಟೀಲ ಪರಿಶೀಲಿಸಿದರು. ಡಾ.ರುದ್ರೇಶ ಘಾಳಿ, ಗೀತಾ ಕೌಲಗಿ, ಡಾ.ರಾಜೀವ ಕೊಲೇರ, ಪ್ರೀತಂ ನಸಲಾಪುರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts