More

    ಭತ್ತ ವ್ಯಾಪಾರಸ್ಥರ ಸಭೆ ಕರೆಯಲು ಆಗ್ರಹ -ಜಿಲ್ಲಾಧಿಕಾರಿಗೆ ರೈತರ ಒಕ್ಕೂಟದ ಮನವಿ 

    ದಾವಣಗೆರೆ: ಭತ್ತ ಮಾರಾಟ ವಿಚಾರದಲ್ಲಿ ರೈತರಿಗೆ ಆಗುತ್ತಿರುವ ತೊಂದರೆಗಳ ನಿವಾರಣೆ ಸಂಬಂಧ ಭತ್ತ ವ್ಯಾಪಾರಸ್ಥರ ಸಭೆ ಕರೆಯುವಂತೆ ಆಗ್ರಹಿಸಿ ರೈತರ ಒಕ್ಕೂಟದ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಮನವಿಪತ್ರ ಸಲ್ಲಿಸಿದರು.
    ಭದ್ರಾ ನೀರಿನ ತಾಪತ್ರಯದ ನಡುವೆಯೂ ರೈತರು ಕಷ್ಟಪಟ್ಟು ಭತ್ತ ಬೆಳೆದಿದ್ದಾರೆ. ಆದರೆ ಭತ್ತದ ಖರೀದಿದಾರರ ಬೆಲೆ ನಿಯಂತ್ರಣ, ಕುತಂತ್ರಗಳಿಂದ ರೈತರು ರೋಸಿ ಹೋಗಿದ್ದಾರೆ. ಆದ್ದರಿಂದ ವ್ಯಾಪಾರಸ್ಥರು, ಖರೀದಿದಾರರು, ದಲಾಲರು ಹಾಗೂ ಮತ್ತು ರೈತರ ಸಭೆ ಕೆಯಬೇಕು. ಪಾರದರ್ಶಕ ಮತ್ತು ನ್ಯಾಯಯುತ ವಹಿವಾಟಿಗೆ ಕ್ರಮ ವಹಿಸಬೇಕು ಎಂದು ಎಪಿಎಂಸಿ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅವರಲ್ಲಿ ಆಗ್ರಹಿಸಿದರು.
    ತೂಕದ ನಂತರವೇ ಹಣ ಪಾವತಿಸಬೇಕೆಂದು ನಿಬಂಧನೆ ಹಾಕಿದ್ದರೂ ವಾರಗಟ್ಟಲೆ ಹಣ ನೀಡದೆ ಸತಾಯಿಸಲಾಗುತ್ತಿದೆ, ಇದು ಅಕ್ಷಮ್ಯ ಅಪರಾಧ. ಖರೀದಿದಾರರು ನಡೆಸುತ್ತಿದ್ದಾರೆ ಎಂದು ಆರೋಪಿಸಲಾದ ವ್ಯತ್ಯಾಸದ ಧೋರಣೆ ನಿಲ್ಲಬೇಕು. ಲೋಡಿಂಗ್ ನಂತರ ಅಥವಾ ಸ್ಥಳದಲ್ಲೇ ಹಣ ಪಾವತಿಸಬೇಕು.
    ಖರೀದಿಸಿದ ಭತ್ತ ಲೋಡ್ ಮಾಡಿದ ತಕ್ಷಣ ಚೀಲ ಒಂದಕ್ಕೆ 2 ಸಾವಿರ ರೂ.ನಂತೆ ಸ್ಥಳದಲ್ಲೇ ಲೆಕ್ಕ ಹಾಕಿ ಅಲ್ಲಿಯೇ ಹಣ ನೀಡಬೇಕು. ನಂತರ ಲೋಡ್ ಲಾರಿ ಮುಂದೆ ಹೋಗಲು ಬಿಡಬೇಕು. ಇನ್ನುಳಿದ ಹಣವನ್ನು ತೂಕವಾದ ನಂತರ ಲೆಕ್ಕ ಹಾಕಿ ಕೊಡಬೇಕು.
    ಖಾಲಿ ಚೀಲ ತೂಕಕ್ಕೆ 1 ಕೆ ಜಿ ಶ್ಯೂಟ್ ಜತೆಗೆ ಇನ್ನೊಂದು ಕೆ ಜಿ ಹೆಚ್ಚುವರಿಯಾಗಿ ಪಡೆಯುತ್ತಿದ್ದಾರೆ. ಇದು ಸರಿಯಲ್ಲ. ಚೀಲದ ತೂಕಕ್ಕೆ ಮಾತ್ರ ಒಟ್ಟು ತೂಕದಲ್ಲಿ ಕಡಿತಗೊಳಿಸಿ ಲೆಕ್ಕ ಹಾಕಿ ಹಣ ನೀಡಬೇಕು. ಹಮಾಲರ ಕೂಲಿಯನ್ನು ಸಂಪೂರ್ಣ ಖರೀದಿದಾರರೇ ನೀಡಬೇಕು. ರೈತರ ಹಣದಲ್ಲಿ ಕಡಿತಗೊಳಿಸಬಾರದು.
    ಸ್ಯಾಂಪಲ್ ಕಾಳು ಕೊಡುವಂತೆ ಹಮಾಲರು ರೈತರನ್ನು ಒತ್ತಾಯಿಸಿ ಪೀಡಿಸಬಾರದು. ರೈತರು ಸಹ ಅವರ ಒತ್ತಾಯಕ್ಕೆ ಮಣಿದು ಒಂದು ಕಾಳನ್ನೂ ಸಹ ಕೊಡಬಾರದು. ರಿಯಾಯಿತಿ ಪದ್ದತಿ ಕಡ್ಡಾಯವಾಗಿ ರದ್ದಾಗಬೇಕು ಎಂದು ಆಗ್ರಹಿಸಿದರು.
    ಈ ಸಂದರ್ಭದಲ್ಲಿ ರೈತ ಒಕ್ಕೂಟದ ಮುಖಂಡರಾದ ಬಿ.ಎಂ. ಸತೀಶ್, ಮಾಜಿ ಮೇಯರ್ ಎಚ್.ಎನ್. ಗುರುನಾಥ್, ವಾಸನ ಬಸವರಾಜು, ಅಣಬೇರು ಶಿವಪ್ರಕಾಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts