More

    ಭಟ್ಕಳ ಪುರಸಭೆಯ ಅಧ್ಯಕ್ಷ ಪರ್ವೆಜ್

    ಭಟ್ಕಳ: ಇಲ್ಲಿನ ಪುರಸಭೆಯ ಅಧ್ಯಕ್ಷರಾಗಿ ಪರ್ವೆಜ್ ಕಾಸಿಂಜಿ ಮತ್ತು ಉಪಾಧ್ಯಕ್ಷರಾಗಿ ಕೈಸರ್ ಮೊಹತೆಶಮ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು. 23 ಸದಸ್ಯ ಬಲದ ಪುರಸಭೆಯಲ್ಲಿ ಭಟ್ಕಳದ ಪ್ರಮುಖ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆ ಮಜ್ಲಿಸೆ ಇಸ್ಲಾಹ್-ವ-ತಂಜಿಂ ಬೆಂಬಲಿತ ಸದಸ್ಯರೆ ಅಧಿಕವಾಗಿದ್ದು, ಆ ಸಂಸ್ಥೆಯ ಬೆಂಬಲಿತರೇ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟವೇರುವುದು ದಶಕಗಳಿಂದ ನಡೆದುಬಂದಿದೆ. ಈ ಬಾರಿಯೂ ಯಾವುದೆ ಗೊಂದಲವಿಲ್ಲದೆ, ತಂಜಿಂ ನಿರ್ಣಯದಂತೆ ಅವಿರೋಧ ಆಯ್ಕೆ ನಡೆದಿದೆ. ತಹಸೀಲ್ದಾರ್ ರವಿಚಂದ್ರ ಅವರ ಸಮ್ಮುಖದಲ್ಲಿ ಚುನಾವಣೆ ಪ್ರಕ್ರಿಯೆಗಳು ನಡೆದವು. 22 ಸದಸ್ಯರು ಹಾಜರಿದ್ದರು. ಪರ್ವೆಜ್ ಕಾಸಿಂಜಿ ಈ ಹಿಂದೆಯೂ ಪುರಸಭೆ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts