More

    ಭಟ್ಕಳದಲ್ಲಿ ಲಾಕ್​ಡೌನ್ ಮತ್ತಷ್ಟು ಬಿಗಿ

    ಭಟ್ಕಳ: ತಾಲೂಕಾಡಳಿತ ಹಿಂದೆ ನೀಡಿದ ಪಾಸ್​ಗಳಲ್ಲಿ ದಿನಸಿ, ತರಕಾರಿ, ಔಷಧ, ಹಾಲು ಪೂರೈಕೆ ಅತಿ ಅಗತ್ಯ ವಸ್ತುಗಳೆಂದು ಪರಿಗಣಿಸಿ ಮುಂದಿನ ಮೂರ್ನಾಲ್ಕು ದಿನಗಳವರೆಗೆ ಚಾಲ್ತಿಯಲ್ಲಿರಲಿದೆ ಎಂದು ಉತ್ತರ ಕನ್ನಡ ಜಿಲ್ಲೆ ಎಸ್​ಪಿ ಶಿವಪ್ರಕಾಶ ದೇವರಾಜು ಹೇಳಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಟ್ಕಳದಲ್ಲಿ ಕರೊನಾ ಸೋಂಕಿತರು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್ ಮತ್ತಷ್ಟು ಬಿಗಿಗೊಳಿಸಲಾಗುವುದು. ಇಷ್ಟು ದಿನ ನೀಡಿದ ಎಲ್ಲ ಪಾಸ್​ಗಳು ರದ್ದಾಗಲಿವೆ. ಮುಂದಿನ ದಿನಗಳಲ್ಲಿ ಪಟ್ಟಣವನ್ನು 5 ಭಾಗಗಳಾಗಿ ವಿಂಗಡಿಸಲಾಗುವುದು. ಮದಿನಾ ಕಾಲನಿ, ನವಾಯತ್ ಕಾಲನಿ, ಜಾಲಿ ಕ್ರಾಸ್, ಸುಲ್ತಾನ್ ಸ್ಟ್ರೀಟ್, ಭಟ್ಕಳ ಸರ್ಕಲ್​ನಲ್ಲಿ ಸಹಾಯವಾಣಿ ತೆರೆಯಲಾಗುತ್ತದೆ. ಇನ್ನು ಮುಂದೆ ಪಟ್ಟಣದಲ್ಲಿ ಅಗತ್ಯ ವಸ್ತುಗಳ ಸರಬರಾಜಿಗೆ ವಾಹನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

    ಆರೋಗ್ಯ ತುರ್ತು ಪರಿಸ್ಥಿತಿ ಇದ್ದಾಗ ಈ ಹಿಂದಿನಂತೆಯೆ ಸಹಾಯವಾಣಿಯ ಸಂಪರ್ಕ, ಒಂದು ವೇಳೆ ಅಲ್ಲಿ ವಾಹನ ಇರದಿದ್ದರೆ ನೋಡಲ್ ಅಧಿಕಾರಿ, ನಂತರ ಡಿವೈಎಸ್​ಪಿ, ಎಸಿ ಅವರನ್ನು ಸಂರ್ಪಸಬೇಕು. ಅಷ್ಟು ಸಮಯ ಇಲ್ಲದಿದ್ದರೆ ಸ್ವಂತ ವಾಹನದಲ್ಲಿ ಹೆಲ್ಪ್ ಡೆಸ್ಕ್​ಗಳ ಬಳಿ ಬಂದರೆ ಅಲ್ಲಿ ತಾತ್ಕಾಲಿಕ ಪಾಸ್ ನೀಡುತ್ತಾರೆ. ಕೋವಿಡ್- 19 ಹರಡುವುದನ್ನು ತಡೆಯಲು ಎಲ್ಲರಿಂದಲೂ ಸಾಧ್ಯವಿದೆ. ಅದಕ್ಕಗಿಯೇ ಇಷ್ಟೆಲ್ಲ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

    ಆಡಳಿತದ ಮೇಲೆ ನಂಬಿಕೆ ಇಡಿ, ಸುಳ್ಳು ಸುದ್ದಿಗಳನ್ನು ಹರಡಬೇಡಿ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ ಎಂದರು. ಉಪವಿಭಾಗಾಧಿಕಾರಿ ಭರತ್ ಎಸ್., ಡಿವೈಎಸ್​ಪಿ ಗೌತಮ್ ಕೆ.ಸಿ., ಸಿಪಿಐ ರಾಮಚಂದ್ರ ನಾಯ್ಕ, ಸಾಹಿಲ್ ಬಾಗ್ಲಾ, ತಹಸೀಲ್ದಾರ್ ರವಿಚಂದ್ರ, ಪಿಎಸ್​ಐ ಎಚ್. ಕುಡಗಂಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts