More

    ಭಕ್ತಿ, ಶ್ರದ್ಧೆಯಿಂದ ಕಾರ್ಯನಿರ್ವಹಿಸಿ

    ಕಲಘಟಗಿ: ಸಮಾಜದಲ್ಲಿ ಪ್ರತಿ ಕೆಲಸ ಕಾರ್ಯಗಳನ್ನು ಭಕ್ತಿ, ಶ್ರದ್ಧೆ, ಸೇವಾ ಮನೊಭಾವದಿಂದ ಮಾಡ ದಿರುವುರಿಂದ ಎಲ್ಲೆಡೆ ಇಂದು ಅವ್ಯವಸ್ಥೆ, ಅಶಾಂತಿ ವಾತಾವರಣ ಕಾಣುತ್ತಿದ್ದೇವೆ ಎಂದು ಕೂಡಲಿ ಶ್ರೀ ಶೃಂಗೇರಿ ಜಗದ್ಗುರು ವಿದ್ಯಾಭಿನವ ಭಾರತಿ ಸ್ವಾಮೀಜಿ ಹೇಳಿದರು.

    ತಾಲೂಕಿನ ಇನಾಮ ಗ್ರಾಮ ಸೂಳಿಕಟ್ಟಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಧಾರ್ವಿುಕ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

    ಜನಗತ್ತಿನಲ್ಲಿ ಕಂಡು ಬರುವ ಅವ್ಯವಸ್ಥೆ, ಅಶಾಂತಿ ಹೋಗಲಾಡಿಸಲು ಶ್ರೀ ಶಂಕರಾ ಚಾರ್ಯರು ಬೋಧಿಸಿದ ಧಾರ್ವಿುಕ, ಸಾಂಸ್ಕೃತಿಕ, ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ಶಾಂತಿ ಯುತ, ಸಮೃದ್ಧ ಸಮಾಜ ನಿರ್ವಿುಸಲು ಸಾಧ್ಯ. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಧಾರ್ವಿುಕ, ಸಾಂಸ್ಕೃತಿಕ, ಶಿಕ್ಷಣ ನೀಡುವ ಅಗತ್ಯವಿದೆ ಎಂದರು. ತಾಲೂಕಿನ ಸೂಳ್ಳಿಕಟ್ಟಿ, ಸಂಗಮೇಶ್ವರ ಗ್ರಾಮ ಸೇರಿ ಉತ್ತರ ಕರ್ನಾಟಕದ ವಿವಿಧ ಗ್ರಾಮಗಳಲ್ಲಿ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾ ಸಂಸ್ಥಾನಪೀಠದ ಇನಾಮಿ ಅಂದಾಜು 1,800 ಎಕರೆ ಜಮೀನಿದೆ ಎಂದು ಗುರತಿಸಲಾಗಿದೆ. ಆಯಾ ಭಾಗದಲ್ಲಿ ಭಕ್ತರು ಉಳುಮೆ ಮಾಡುತ್ತಿದ್ದು, ಅವರೆಲ್ಲ ಸಮೃದ್ಧಿಯಿಂದ ಇರಬೇಕು ಎಂದು ಶ್ರೀಗಳು ಹೇಳಿದರು. ರಮೇಶ ಭಟ್ಟ ಜೋಶಿ, ಪಾಂಡರಂಗ ಭಟ್ಟ, ಜಿಪಂ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಎಂ. ಎನ್. ಹರಿಶಂಕ, ಶಂಕರಗಿರಿ ಬಾವನವರ, ಯಲ್ಲಾರಿ ಶಿಂಧೆ, ಫಕೀರೇಶ ನೇಸರೇಕರ್, ಪರಶುರಾಮ ಎತ್ತಿನಗುಡ್ಡ, ಹನುಂಮತ ಶಿಂಧೆ, ಸೋಮಶೇಖರ ಬೆನ್ನೂರ, ಸುಧೀರ ಬೋಳಾರ, ವೇಂಕಟೇಶ ಬಂಡಿವಡ್ಡರ, ಪಿಡಿಒ ಎಸ್.ಜಿ. ಬಡಿಗೇರ, ಗ್ರಾಮ ಲೆಕ್ಕಾಧಿಕಾರಿ ರಂಜಿತಾ ಹಿರೇಮಠ, ನ್ಯಾಯವಾದಿ ಪ್ರಕಾಶ ದೇಸಾಯಿ, ಭಕ್ತರು ಪಾಲ್ಗೊಂಡಿದ್ದರು. ಮಾತನಾಡಿದರು. ಉಮೇಶ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts