More

    ಬ್ಯಾಂಕ್, ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ -ಸತೀಶ್ ಜಿ. ಮೆಹರವಾಡೆ ಸಲಹೆ – ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವ

    ದಾವಣಗೆರೆ: ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವರು ಶೈಕ್ಷಣಿಕ ಸಂಸ್ಥೆ ಹಾಗೂ ಬ್ಯಾಂಕ್‌ಗಳನ್ನು ತೆರೆಯಲು ಆಸಕ್ತಿ ವಹಿಸಬೇಕೆಂದು ಕರ್ನಾಟಕ ಎಸ್‌ಎಸ್‌ಕೆ ಸಮಾಜದ ಉಪಾಧ್ಯಕ್ಷ ಸತೀಶ್ ಜಿ. ಮೆಹರವಾಡೆ ಹೇಳಿದರು.
    ಇಲ್ಲಿನ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣಮಂಟಪದಲ್ಲಿ ಭಾನುವಾರ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ಸ್ಥಳೀಯ ಘಟಕದಿಂದ ಹಮ್ಮಿಕೊಂಡಿದ್ದ ಶ್ರೀ ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಸಮಾಜದವರು ಮಕ್ಕಳ ಶಿಕ್ಷಣಕ್ಕೆ ಗಮನ ನೀಡಬೇಕು. ಅದರ ಮೂಲಕ ಸಮಾಜದ ಬೆಳವಣಿಗೆ ನಿರೀಕ್ಷಿಸಬಹುದು ಎಂದು ಹೇಳಿದರು.
    ದಾವಣಗೆರೆಯಲ್ಲಿ ಎಸ್‌ಎಸ್‌ಕೆ ಸಮಾಜದ ಕುಟುಂಬಗಳು ಒಗ್ಗಟ್ಟು ಕಾಯ್ದುಕೊಂಡಿವೆ. ದಾವಣಗೆರೆಯ ಈ ಸಮಾಜ ಚಿಕ್ಕದಾದರೂ ಚೊಕ್ಕದಾಗಿದೆ. ಸಮಾಜದ ಮೇಲೆ ಯಾರ ವಕ್ರದೃಷ್ಟಿ ಬೀಳದಿರಲಿ ಎಂದು ಹೇಳಿದರು.
    ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಶಶಿಕುಮಾರ್ ಮೆಹರವಾಡೆ ಮಾತನಾಡಿ ಕುಲಗುರು ಸಹಸ್ರಾರ್ಜುನ ಮಹಾರಾಜರ ಜಯಂತ್ಯುತ್ಸವವು ಮದುವೆ ಕಾರ್ಯಕ್ರಮದಷ್ಟು ಅದ್ದೂರಿಯಾಗಿ ನಡೆಯುತ್ತಿರುವುದು ಹರ್ಷದಾಯಕ ಎಂದು ತಿಳಿಸಿದರು.
    ಸಮಾಜದ ದಾವಣಗೆರೆ ಘಟಕದ ಕಾರ್ಯದರ್ಶಿ ಮಹೇಶ್ ಸೋಳಂಕಿ ಪ್ರಾಸ್ತಾವಿಕ ಮಾತನಾಡಿ ಸಹಸ್ರಾರ್ಜುನ ಮಹರಾಜರ ಬಗ್ಗೆ 11 ಪುರಾಣಗಳಲ್ಲಿ ಉಲ್ಲೇಖವಿದೆ. ಅವರು ವಿಷ್ಣುವಿನ 24ನೇ ಅವತಾರ ತಾಳಿದ್ದರು ಎಂದು ಹೇಳಿದರು.
    ಸಮಾಜದ ದಾವಣಗೆರೆ ಘಟಕದ ಅಧ್ಯಕ್ಷ ಮಲ್ಲಾರಸಾ ಆರ್. ಕಾಟ್ವೆ, ಮಹಿಳಾ ಮಂಡಳಿ ಅಧ್ಯಕ್ಷೆ ಗಾಯತ್ರಿ ಮಂಜುನಾಥಸಾ ಹಬೀಬ, ಗೌರವಾಧ್ಯಕ್ಷೆ ಶುಭಾಂಜಲಿ ಆರ್. ಕಠಾರೆ, ತರುಣ ಮಂಡಳಿಯ ಅಧ್ಯಕ್ಷ ಪ್ರವೀಣ್ ಕಾಟ್ವೆ, ಆದಾಯ ತೆರಿಗೆ ಇಲಾಖೆ ಇನ್ಸ್‌ಪೆಕ್ಟರ್ ಮಣಿಕಂಠ ಬಾರಡಿ, ಸುಭಾಷ್ ಇತರರಿದ್ದರು. ರಮೇಶ್ ಕಾಟ್ವೆ ಸ್ವಾಗತಿಸಿದರು. ಓಂಪ್ರಕಾಶ್ ಮೆಹರವಾಡೆ ಕಾರ್ಯಕ್ರಮ ನಿರೂಪಿಸಿದರು. ಅಶೋಕ ರಾಯಭಾಗಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts