More

    ಬ್ಯಾಂಕ್ ಕಾಲನಿ ದರೋಡೆ,ಕಿಡ್ನಾಪ್ ಪ್ರಕರಣ,ಮೂವರ ಬಂಧನ

    ಚಿತ್ರದುರ್ಗ: ನಗರದ ಮನೆಯೊಂದಕ್ಕೆ ನುಗ್ಗಿ, ಅಲ್ಲಿದ್ದವರನ್ನು ಕೂಡಿಹಾಕಿ ಚಿನ್ನಾಭರಣ ದೋಚಿದ್ದಲ್ಲದೆ, ಅವರಲ್ಲಿಬ್ಬರನ್ನು ಹಣಕ್ಕಾಗಿ ಕಿಡ್ನಾಪ್ ಮಾಡಿದ್ದ ಪ್ರಕರಣದ ಮೂವರು ಖತರ್‌ನಾಕ್ ಆರೋಪಿಗಳೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಹಾಡಹಗಲೇ ನಡೆದಿದ್ದ ಈ ಘಟನೆ ನಗರವನ್ನು ಬೆಚ್ಚಿಬೀಳಿಸಿತ್ತು.


    ಹೆಚ್ಚೂ ಕಡಿಮೆ ಸಿನಿಮಾಶೈಲಿ ಕೃತ್ಯದ ಆರೋಪಿಗಳಾದ ಸಮ್ಮು ಅಲಿಯಾಸ್ ಬಷೀರ್‌ಸಾಬ್, ಮಹಮ್ಮದ್ ಸಾಕೀಬ್ ಹಾಗೂ ಪ್ರಸನ್ನ ಕು ಮಾರ್‌ರನ್ನು ಬಂಧಿಸಿ ಅವರಿಂದ ಸುಲಿಗೆ ಮೊತ್ತ 50 ಲಕ್ಷ ರೂ. ಪೈಕಿ 48.57 ಲಕ್ಷ ರೂ. ಹಾಗೂ ಪ್ರತ್ಯೇಕ ಪ್ರಕರಣಗಳಡಿ, ದರೋಡೆ, ಕಳವಿನ ಅಂದಾಜು 76.41 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 7.30 ಲಕ್ಷ ರೂ. ಮೌಲ್ಯದ ಕಾರನ್ನು ವಶಕ್ಕೆ ಪಡೆದಿದ್ದಾರೆ. ಕಂಟ್ರಿ ಪಿಸ್ತೂಲ್ ಹೊರತು ಪಡಿಸಿ ಕೃತ್ಯಕ್ಕೆ ಬಳಸಿದ್ದ ಮಾರಾಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

    ಜು.8ರ ಬೆಳಗ್ಗೆ 9ರ ಸಮಯದಲ್ಲಿ ನಗರದ ಬ್ಯಾಂಕ್ ಕಾಲನಿ ನಿವಾಸಿ ನಜೀರ್‌ಅಹಮದ್‌ಇಬ್ರಾಹಿಂ ಸಾಬ್ ಅವರ ಮನೆಗೆ ನುಗ್ಗಿ ದ ದುಷ್ಕರ್ಮಿಗಳು,ಜೀವ ಬೆದರಿಕೆವೊಡ್ಡಿ,ಮಗು ಸೇರಿ ಏಳು ಮಂದಿಯನ್ನು ಸಂಜೆಯವರೆಗೂ ಮನೆಯಲ್ಲೇ ಕೂಡಿ ಹಾಕಿ ಒಂದು ಕೋ ಟಿ ರೂ.ಗೆ ಡಿಮಾಂಡ್ ಮಾಡಿದ್ದರು.

    ಕೊನೆಗೆ 50 ಲಕ್ಷ ರೂ.ಗೆ ಒಪ್ಪಿ,ಮನೆಯಲ್ಲಿದ್ದ ಒಂದು ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ,ಮನೆಯವರ ಬಳಿ ಇದ್ದ 6 ಮೊಬೈಲ್‌ಗಳು,ಸಿಸಿ ಕ್ಯಾಮೆರಾದ ಡಿವಿಆರ್‌ನೊಂದಿಗೆ ಸಮೀರ್‌ಅಹಮದ್ ಮತ್ತು ಅವರ ಸಂಬಂಧಿ ಷಾಹಜಾನ್‌ನನ್ನು ಅಪಹರಿಸಿ ಕೊಂ ಡು ಕಾರಿನಲ್ಲಿ ಪರಾರಿಯಾಗಿದ್ದರು. 6 ಮೊಬೈಲ್‌ಗಳಲ್ಲಿ ಒಂದು ಸ್ವಿಚ್‌ಆಫ್ ಆಗದೇ ಇದ್ದದ್ದು ಹಾಗೂ ಸಮೀರ್‌ಗೆ ಗೊತ್ತಿದ್ದ ಕೆಲವರು ಅ ಪಹರಣಕಾರರಿಗೆ ಗೊತ್ತಿಲ್ಲದಂತೆ ಹಿಂಬಾಲಿಸಿದ್ದು ಪ್ರಕರಣ ಭೇದಿಸಲು ಪೊಲೀಸರಿಗೆ ನೆರವಾಗಿತ್ತು.
    ಪ್ರಕರಣ ವಿವರ ನೀಡಿದ ಎಸ್‌ಪಿ
    ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಎಸ್‌ಪಿ ಕೆ.ಪರಶುರಾಮ ಪ್ರಕರಣದ ಮಾಹಿತಿ ನೀಡಿದರು. ಅಪರಹಣಕ್ಕೆ ಒಳಗಾಗಿದ್ದವರ ಸಂ ಬಂಧಿಕರಿಂದ,ಸಮೀರ್‌ಅಹಮದ್ ಪಾಲುದಾರಿಕೆಯ ಕ್ಯಾದಿಗೆರೆ ಸರ್ವೋದಯ ಹೋಟೆಲ್ ಬಳಿ 25 ಲಕ್ಷ ರೂ.ಹಾಗೂ ದಾವಣಗೆರೆ ಬಳಿ 25 ಲಕ್ಷ ರೂ.ಗಳನ್ನು ಪ್ರತ್ಯೇಕ ಪಡೆದರೂ ಕಿಡ್ನಾಪ್ ಆದವರನ್ನು ಬಿಡದಿದ್ದಾಗ ದಾವಣಗೆರೆ ಪೊಲೀಸರ ನೆರವಿನೊಂದಿಗೆ ಬೆನ್ನಟ್ಟಿ ಕೃತ್ಯ ಚಿಕ್ಕಕಬ್ಬಿಗೆರೆಯ ಬಳಿ ಮಹಮ್ಮದ್‌ಸಾಕೀಬ್‌ನನ್ನು ಬಂಧಿಸಲಾಯಿತು.

    ಕಾರು,ಅಪಹರಿಸಿದ್ದವರನ್ನು ಬಿಟ್ಟು ಹಣ ಮತ್ತು ಒಡವೆಗಳೊಂದಿಗೆ ಪರಾರಿಯಾಗಿದ್ದ ಸಮ್ಮು ಮತ್ತು ಪ್ರಸನ್ನಕುಮಾರ್‌ನನ್ನು ನಂತರದಲ್ಲಿ ಬಂಧಿಸಲಾಯಿತು ಎಂದು ಎಸ್ಪಿ ವಿವರಿಸಿದರು.

    ಪರಿಶೀಲಿಸಿ ಕೃತ್ಯ ಎಸಗುವುದನ್ನು ರೂಢಿಸಿಕೊಂಡಿದ್ದ ಆರೋಪಿಗಳ ಪೈಕಿ,ಬೆಂಗಳೂರು ಆರ್‌ಟಿ ನಗರದ ಕುಖ್ಯಾತ ಸಮ್ಮು ಪ್ರಕರಣದ ಮಾಸ್ಟರ್ ಮೈಂಡ್. ಈತನ ವಿರುದ್ಧ ದರೋಡೆ,ಸುಲಿಗೆ,ಕಳ್ಳತನ,ಕೊಲೆ ಇತ್ಯಾದಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈತನಿಗೆ ಬಿಹಾರ ಮೂಲದ ಮಹಮದ್‌ಸಾಕೀಬ್ ಹಾಗೂ ಬೆಂಗಳೂರು ಕೆಆರ್‌ಪುರಂನ ಪ್ರಸನ್ನಕುಮಾರ್ ಸಾಥ್ ನೀಡಿದ್ದಾರೆ.

    ಆರೋಪಿಗಳು ಜು.5ರಂದು ಹಿರಿಯೂರಿನ 2 ಮನೆಗಳಲ್ಲಿ ಕಳವು ಮಾಡಿದ್ದರು. ಒಂದು ಮನೆಯಲ್ಲಿ 66.39 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಮತ್ತೊಂದರಲ್ಲಿ ದಾಖಲೆಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ದುರ್ಗದ ಕೆಎಸ್‌ಆರ್‌ಟಿಸಿ ಡಿಪೊ ಬಳಿ ಬೈಕ್ ಕದ್ದಿದ್ದರು.
    ನಕಲಿ ನಂ.ಫ್ಲೇಟ್‌ನೊಂದಿಗೆ ಕೃತ್ಯಕ್ಕೆ ಬಳಸಿದ್ದ ಕಾರನ್ನು ಕಳೆದ ಫೆಬ್ರವರಿಯಲ್ಲಿ ಪುಟ್ಟೇನಹಳ್ಳಿಠಾಣೆ ವ್ಯಾಪ್ತಿಯಲ್ಲಿ ಕಳವು ಮಾಡಿದ್ದರು.

    ಹಿ ರಿಯೂರು ಘಟನೆ ನಡೆದಿದ್ದ ರಾತ್ರಿಯೇ ರಸ್ತೆ ಬದಿ ಇದ್ದ ವಿಚಾರಿಸಿದ್ದ ಪೊಲೀಸರನ್ನು ಆರೋಪಿಗಳು ಯಾಮಾರಿಸಿದ್ದರು. ಸಮೀರ್‌ಅಹಮದ್ ಮನೆಯಲ್ಲಿದ್ದ ಹೊಸ ಕಿಯಾ ಕಾರನ್ನೂ ತೆಗೆದುಕೊಂಡು ಹೋಗಬೇಕೆಂಬ ಕಾರಣಕ್ಕೆ ಆರೋಪಿಗಳು ದುರ್ಗಕ್ಕೆ ಮತ್ತೆ ಮರಳುತ್ತಿದ್ದರು. ಜೀವನದಲ್ಲಿ ಸೆಟ್ಲ್ ಆಗಬೇಕೆಂಬ ಕಾರಣಕ್ಕೆ ಕೃತ್ಯ ಎಸಗಿದ್ದಾರೆ.

    ಮೊದಲ ಬಂಧಿತರಿಬ್ಬರು ಗಾಂಜಾ ಮತ್ತಿನಲ್ಲಿದ್ದ ಕಾರಣ ದಿ ಂದಾಗಿ ತನಿಖೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದರೆ ಜೀವ ತೆಗೆಯುವುದಾಗಿ ಬೆದರಿಸಿದ್ದು ದೂರು ದಾಖಲು ವಿಳಂಬಕ್ಕೆ ಕಾರಣ.ಬ್ಯಾಂಕ್‌ಕಾಲನಿ ಪ್ರಕರಣದ ತನಿಖೆಗೆ ಡಿವೈಎಸ್ ಅನಿಲ್‌ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

    ಆರೋಪಿಗಳ ಬಂಧನಕ್ಕೆ ಹಾವೇರಿ ಮತ್ತು ದಾವಣಗೆರೆ ಪೊಲೀಸರು ಸಹಕರಿಸಿದ್ದಾರೆ ಎಂದು ಎಸ್‌ಪಿ ಹೇಳಿದರು. ಎಎಸ್‌ಪಿ ಎಸ್.ಜೆ. ಕುಮಾರ ಸ್ವಾಮಿ,ಬಡಾವಣೆ ಠಾಣೆ ಪಿಐ ನಯಿಂಅಹಮದ್,ಪಿಎಸ್‌ಐ ರಘು ಮತ್ತಿತರ ಅಧಿಕಾರಿ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts