More

    ಬ್ಯಾಂಕ್‌ಗೆ ಬರುವ ರೈತರನ್ನು ಅನಗತ್ಯವಾಗಿ ಅಲೆಸದಿರಿ

    ಕೆ.ಆರ್.ನಗರ: ಬ್ಯಾಂಕ್‌ಗೆ ಬರುವ ರೈತರನ್ನು ಅನಗತ್ಯವಾಗಿ ಅಲೆದಾಡಿಸದೆ ಸಕಾಲದಲ್ಲಿ ಸಾಲ ಸೌಲಭ್ಯ ನೀಡಲು ಆಡಳಿತ ಮಂಡಳಿ ಕ್ರಮ ವಹಿಸಬೇಕು ಎಂದು ಶಾಸಕ ಡಿ.ರವಿಶಂಕರ್ ಸಲಹೆ ನೀಡಿದರು.

    • ಪಟ್ಟಣದ ಪಿಕಾರ್ಡ್ ಬ್ಯಾಂಕ್‌ನ ರೈತ ಸಮುದಾಯ ಭವನದಲ್ಲಿ ಭಾನುವಾರ ಆಡಳಿತ ಮಂಡಳಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ರೈತರ ಬದುಕು ಹಸನಾದಾಗ ದೇಶ ಅಭಿವೃದ್ಧಿ ಕಾಣಲು ಸಾಧ್ಯ. ಇದನ್ನು ನಿರ್ದೇಶಕರು ಅರ್ಥ ಮಾಡಿಕೊಳ್ಳಬೇಕು. ಸಾಲ ಪಡೆದವರು ವದಂತಿಗಳಿಗೆ ಕಿವಿಗೊಡದೆ ಸಕಾಲದಲ್ಲಿ ಮರುಪಾವತಿ ಮಾಡಬೇಕು. ಇದರಿಂದ ಬ್ಯಾಂಕ್ ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದರ ಜತೆಗೆ ಇತರರಿಗೆ ಸಾಲ ವಿತರಿಸಲು ಅನುಕೂಲವಾಗಲಿದೆ. ಇದನ್ನು ರೈತರು ಮನಗಾಣಬೇಕು ಎಂದು ಮನವಿ ಮಾಡಿದರು.
    • ಬ್ಯಾಂಕ್‌ನ ಆಡಳಿತ ಕಚೇರಿಯನ್ನು ನಿರ್ಮಿಸಲು 43 ಲಕ್ಷ ರೂ.ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ಮುಂದುವರಿದ ಕಾಮಗಾರಿಗೆ ಹೆಚ್ಚಿನ ಅನುದಾನದ ಅವಶ್ಯಕತೆಯಿದ್ದಲ್ಲಿ ಸರ್ಕಾರದಿಂದ ಬಿಡುಗಡೆ ಮಾಡಿಸಿ ನೂತನ ಕಟ್ಟಡ ನಿರ್ಮಾಣ ಮಾಡಲು ಆಡಳಿತ ಮಂಡಳಿ ಸದಸ್ಯರು ಸಹಕಾರ ನೀಡಬೇಕು ಎಂದು ತಿಳಿಸಿದರು.
    • ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕೆಲಸ ಮಾಡಲು ಬದ್ಧನಾಗಿದ್ದು, ಸರ್ಕಾರ ಮತ್ತು ಜಿಲ್ಲಾ ಬ್ಯಾಂಕ್‌ಗಳಿಂದ ಹೆಚ್ಚು ಸಾಲನಿಧಿ ಬಿಡುಗಡೆ ಮಾಡಿಸಿ ಎರಡೂ ತಾಲೂಕುಗಳ ರೈತರಿಗೆ ವಿತರಿಸಲು ಆಡಳಿತ ಮಂಡಳಿ ಮುಂದಾಗಬೇಕು ಎಂದು ಸಲಹೆ ನೀಡಿದರು.
    • ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಜಿಲ್ಲಾ ಬ್ಯಾಂಕ್‌ನ ನಿರ್ದೇಶಕರಾದ ತಿಮ್ಮರಾಯಿಗೌಡ, ಮಹದೇವ್ ಮಾತನಾಡಿದರು. ಶಾಸಕ ಡಿ.ರವಿಶಂಕರ್ ಅವರನ್ನು ಬ್ಯಾಂಕ್‌ನ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.
    • ಜಿಲ್ಲಾ ಬ್ಯಾಂಕ್‌ನ ವ್ಯವಸ್ಥಾಪಕಿ ಬಿ.ಜೆ.ರಶ್ಮಿತಾ, ನಿರ್ದೇಶಕರಾದ ಎಚ್.ಟಿ.ಪರಮೇಶ್, ಹೊಲದಪ್ಪ, ರಾಜೇಗೌಡ, ತಾಲೂಕು ಬ್ಯಾಂಕ್‌ನ ಅಧ್ಯಕ್ಷ ಕೆ.ಸಿ.ಚಂದ್ರೇಗೌಡ, ನಿರ್ದೇಶಕರಾದ ಎನ್.ಸಿ.ಪ್ರಸಾದ್, ಪರಶುರಾಮಯ್ಯ, ಬಿ.ಎಸ್.ಚಂದ್ರಹಾಸ, ಎಂ.ಎಸ್.ಹರಿಚಿದಂಬರ, ಮಲ್ಲಿಕಾರ್ಜುನ, ಪ್ರೇಮಾ ಕುಳ್ಳಬೋರೇಗೌಡ, ಪುಷ್ಪಾ ರೇವಣ್ಣ, ಕಲಾವತಿ ಮೂರ್ತಿ, ಚಂದ್ರಶೇಖರ್, ಬಿ.ಸಿದ್ದೇಗೌಡ, ರಮೇಶ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬ್ಯಾಂಕ್ ವ್ಯವಸ್ಥಾಪಕಿ ಗಾಯತ್ರಮ್ಮ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts