More

    ಬೈಗುಳ ತಪ್ಪಿಸಿಕೊಳ್ಳಲು ಅಪಹರಣದ ಕಥೆ

    ಯಲ್ಲಾಪುರ: ತೀವ್ರ ಆತಂಕ ಮೂಡಿಸಿದ್ದ ನಂದೊಳ್ಳಿಯ ವಿದ್ಯಾರ್ಥಿನಿ ಕಾಣೆಯಾಗಿ, ಕಾಡಿನಲ್ಲಿ ಪತ್ತೆಯಾದ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಹೋಮ್ರ್ಕ್ ಮಾಡದಿರುವ ವಿಚಾರವಾಗಿ ಮನೆಯಲ್ಲಿ ಬೈಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ತಾನೇ ಅಪಹರಣದ ಕಥೆ ಕಟ್ಟಿರುವುದಾಗಿ ಬಾಲಕಿ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾಳೆ.

    ಬಾಲಕಿ ಶಾಲೆಯಲ್ಲಿ ನೀಡಿದ ಹೋಂ ವರ್ಕ್ ಮಾಡಿಕೊಂಡು ಹೋಗಿರಲಿಲ್ಲ ಈ ವಿಷಯ ಶಿಕ್ಷಕರಿಂದ ಮನೆಗೆ ತಿಳಿದಿತ್ತು. ಇದರಿಂದ ಮನೆಯಲ್ಲಿ ಬೈಸಿಕೊಳ್ಳಬೇಕಾಗುತ್ತದೆ ಎಂದು, ಬಸ್ ಇಳಿದವಳು ಮನೆಯ ಸಮೀಪದ ಕಾಡಿನಲ್ಲಿಯೇ ಕುಳಿತಿದ್ದಳು. ರಾತ್ರಿ ಒಂದು ಗಂಟೆಯ ಸಮಯಕ್ಕೆ ಮನೆಗೆ ಹೋಗಬೇಕೆನ್ನಿಸಿದಾಗ, ಲೆಗ್ಗಿಂಗ್ಸ್ ಪ್ಯಾಂಟ್ ಮೂಲಕ ಕಾಲು ಕಟ್ಟಿಕೊಂಡು, ವೇಲನ್ನು ಬಾಯಿಗೆ ಹಾಕಿಕೊಂಡು, ಕೈಯ್ಯನ್ನೂ ಕಟ್ಟಿಕೊಂಡಿದ್ದಳು. ಅದೇ ವೇಳೆ ಮನೆಯ ಕಡೆಗೆ ಬೈಕ್ ಹೋಗುವ ಶಬ್ದ ಕೇಳಿ ಕಿರುಚಿಕೊಂಡಿದ್ದಾಳೆ. ಅದನ್ನು ಕೇಳಿ ಬೈಕ್ ಸವಾರರು ಬಾಲಕಿಯ ಮನೆಗೆ ವಿಷಯ ತಿಳಿಸಿದ್ದು, ಮನೆಯವರೆಲ್ಲ ಬಂದು ಬಾಲಕಿಯನ್ನು ಕರೆದೊಯ್ದಿದ್ದಾರೆ.

    ಮನೆಗೆ ಬಂದು ತಾಯಿಯಲ್ಲಿ ಯಾರೋ ಎರಡು ಬೈಕ್ ಮೇಲೆ ನನ್ನನ್ನು ಅಪಹರಿಸಿ, ರಾತ್ರಿ ವೇಳೆ ತಂದು ಕಾಡಿನಲ್ಲಿ ಬಿಟ್ಟು ಹೋಗಿದ್ದಾರೆ. ವಿಷಯ ಯಾರಲ್ಲಾದರೂ ತಿಳಿಸಿದರೆ ಮನೆಯವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ ಎಂದೂ ಹೇಳಿರುವುದಾಗಿ ವಿಚಾರಣೆ ವೇಳೆ ಬಾಲಕಿ ತಿಳಿಸಿದ್ದಾಳೆ.

    ಅಪಹರಣವಾಗಿರುವುದು ಸತ್ಯ ಎಂದು ತಿಳಿದು ಪೊಲೀಸರು ಹಲವರ ವಿಚಾರಣೆ ಮಾಡಿದ್ದರು. ನಂದೊಳ್ಳಿ ಭಾಗದ ಜನತೆ ವಿದ್ಯಾರ್ಥಿಗಳ ರಕ್ಷಣೆಯ ಬಗೆಗೆ ತೀವ್ರ ಆತಂಕಪಡುವಂತಾಗಿತ್ತು. ಡಿ.ವೈ.ಎಸ್.ಪಿ ರವಿ ನಾಯ್ಕ, ಪಿಐ ಸುರೇಶ ಯಳ್ಳೂರ ತನಿಖೆ ಕೈಗೊಂಡು ಪ್ರಕರಣಕ್ಕೆ ರ್ತಾಕ ಅಂತ್ಯ ಹಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts