More

    ಬೇಡರ ವೇಷ ಪ್ರದರ್ಶನಕ್ಕೆ ತಡೆ

    ಶಿರಸಿ: ಕೋವಿಡ್ 19 ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹೊರಡಿಸಿರುವ ಆದೇಶವು ಶಿರಸಿ ಮಣ್ಣಿನ ಸಾಂಪ್ರದಾಯಿಕ ಕಲೆಯಾದ ಬೇಡರ ವೇಷ ಪ್ರದರ್ಶನಕ್ಕೆ ದೊಡ್ಡ ಆಘಾತ ನೀಡಿದೆ.

    ಸಾರ್ವಜನಿಕವಾಗಿ ಹಬ್ಬದ ಆಚರಣೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಆಚರಣೆಗಳನ್ನು ಮಾಡದಂತೆ ಸರ್ಕಾರವು ಶುಕ್ರವಾರ ಆದೇಶಿಸಿದ್ದು, ತಕ್ಷಣದಿಂದಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಈ ಕಾರಣ ಬೇಡರ ವೇಷಕ್ಕೆ ಕರೊನಾಘಾತವಾಗಿದೆ. ನಗರದಲ್ಲಿ 2 ವರ್ಷಗಳಿಗೊಮ್ಮೆ 70ಕ್ಕೂ ಹೆಚ್ಚು ಬೇಡರ ವೇಷಧಾರಿಗಳು ತಂಡ ಕಟ್ಟಿಕೊಂಡು 4 ದಿನಗಳ ಕಾಲ ವಿಶೇಷ ಆಚರಣೆಯಲ್ಲಿ ತೊಡಗುತ್ತಿದ್ದರು. ಈ ಸಂಭ್ರಮ ಕಣ್ತುಂಬಿಕೊಳ್ಳಲು ಸಾವಿರಾರು ಜನರು ವಿವಿಧ ಕಡೆಗಳಿಂದ ಆಗಮಿಸುತ್ತಿದ್ದರು. ಕಳೆದೊಂದು ದಿನದಿಂದ ಆರಂಭವಾಗಿದ್ದ ಸಾರ್ವಜನಿಕ ಬೇಡರ ವೇಷ ಪ್ರದರ್ಶನಕ್ಕೆ ಶುಕ್ರವಾರ ಸರ್ಕಾರದ ಆದೇಶದಿಂದ ತೆರೆ ಬೀಳುವಂತಾಗಿದೆ. ಮೊದಲ ದಿನ ಕೆಲವೇ ಸಂಖ್ಯೆಯ ಬೇಡರ ವೇಷ ತಂಡ ಪಾಲ್ಗೊಂಡಿತ್ತು. ಕೊನೆಯ 2 ದಿನ 50ಕ್ಕೂ ಹೆಚ್ಚು ತಂಡಗಳ ಪ್ರದರ್ಶನ ಆಗುವುದು ಬಾಕಿಯುಳಿದಿತ್ತು. ಪ್ರತಿ ತಂಡ ಬಂಡಿ, ಸ್ತಬ್ಧಚಿತ್ರ, ವೇಷಭೂಷಣ, ತಿಂಗಳಿಂದ ತಯಾರಿ ಸೇರಿ ಕನಿಷ್ಠ 2 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದವು. ಇನ್ನೂ ಕೆಲ ತಂಡಗಳು 5 ಲಕ್ಷ ರೂ. ವೆಚ್ಚ ಮಾಡಿವೆ. ಪ್ರಸ್ತುತ ಸರ್ಕಾರದ ನಿರ್ದೇಶನದಿಂದ ಮಾಡಿದ ಖರ್ಚು ಪ್ರಯೋಜನಕ್ಕೆ ಬಾರದಂತಾಗಿದೆ ಎಂಬುದು ಬೇಡರ ವೇಷದ ತಂಡದ ಪ್ರಮುಖರ ಮಾತಾಗಿದೆ.

    ತಂಡದ ಸದಸ್ಯರಿಗೆ ಶಾಕ್: ಬೇಡರ ವೇಷದ ಬಂಡಿಗಾಗಿ ನಗರದ ಮರಾಠಿಕೊಪ್ಪದಲ್ಲಿ ಐತಿಹಾಸಿಕ ಶ್ರೀರಾಮ ಮಂದಿರದ ಸ್ತಬ್ಧಚಿತ್ರ ರಚಿಸಲಾಗಿತ್ತು. 4.5 ಲಕ್ಷ ರೂಪಾಯಿ ವೆಚ್ಚದಲ್ಲಿ ಶ್ರೀರಾಮ ಮಂದಿರ ಅನಾವರಣಗೊಂಡಿತ್ತು. ಮರಾಠಿಕೊಪ್ಪದ ಶಿವ ಬಾಯ್್ಸ ತಂಡದವರ ಪರಿಶ್ರಮದಿಂದ ಸುಂದರ ಮಂದಿರ ತಯಾರಿಯಾಗಿದ್ದು, ತಂಡದ 20 ಜನ ಕಲಾವಿದರ 15 ದಿನಗಳ ಪರಿಶ್ರಮದಿಂದ ಮಂದಿರ ಪೂರ್ಣಗೊಂಡಿತ್ತು. ಮುಖ್ಯ ಕಲಾವಿದ ಕೇಶವ ನಾಯ್ಕ ಮಾರ್ಗದರ್ಶನದಲ್ಲಿ ಶುಕ್ರವಾರ ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲು ಸಿದ್ಧತೆಯಲ್ಲಿರುವಾಗ ಇಡೀ ಬೇಡರ ವೇಷ ಪ್ರದರ್ಶನಕ್ಕೆ ತಡೆ ಬಿದ್ದಿರುವುದು ತಂಡದ ಸದಸ್ಯರಿಗೆ ಆಘಾತ ತಂದಿದೆ.</

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts