More

    ಬೆಳೆ ರಕ್ಷಿಸಲು ಸೀರೆಗಳಿಗೆ ಮೊರೆ

    ಯಾದಗಿರಿ: ಭೀಕರ ಬರ ಪರಿಸ್ಥಿತಿಯ ಇಂದಿನ ದಿನಗಳಲ್ಲಿ ಅಳಿದುಳಿದ ಬೆಳೆ ರಕ್ಷಿಸಿಕೊಳ್ಳಲು ರೈತರು ಹೊಸ ಸೀರೆಗಳಿಗೆ ಮೊರೆ ಹೋಗುತ್ತಿದ್ದಾರೆ.

    ರೈತರು ಈ ಮೊದಲು ಬೆಳೆ ರಕ್ಷಣೆಗೆ ಮುಳ್ಳು ಕಂಟಿಗಳ ಬೇಲಿ ಹಾಕುತ್ತಿದ್ದರು. ಆದರೆ ಇತ್ತಿಚೆಗೆ ಕಾಡು ಹಂದಿಗಳ ಹಾವಳಿ ಹೆಚ್ಚಾಗಿದ್ದು ಮುಳ್ಳು ಕಂಟಿಗಳನ್ನು ಕಿತ್ತಿಹಾಕಿ ಹೊಲಕ್ಕೆ ನುಗ್ಗಿ ಬೆಳೆ ತಿಂದು ಹಾಕುತ್ತಿವೆ. ಇದರಿಂದ ರಕ್ಷಣೆ ಪಡೆಯಲು ರೈತರು ಹಳೆ ಸೀರೆಗಳನ್ನು ಹೊಲದ ಬದುವಿಗೆ ಕಟ್ಟುವ ತಂತ್ರ ಮಾಡಿ ಹಂದಿಗಳು ರಾತ್ರಿ ಹೊಲದ ಬಳಿ ಸುಳಿಯದಂತೆ ರಕ್ಷಣೆ ಮಾಡುತ್ತಿದ್ದಾರೆ. ರಾತ್ರಿವೇಳೆ ಸೀರೆಗಳು ಗಾಳಿಯ ಶಬ್ದದಿಂದ ಹಂದಿಗಳು ಬೆದರಿಕೊಂಡು ಜಮೀನಿನ ಸಮೀಪ ಬರುವುದಿಲ್ಲ.

    ರೈತರು ತಾವು ಹೆಚ್ಚಾಗಿ ಬೆಳೆಯುವ ಬೆಳೆಯಾದ ಶೇಂಗಾ, ತೊಗರಿ, ಜೋಳ ಇನ್ನಿತರ ಬೆಳೆಗಳನ್ನು ರಕ್ಷಿಸಿಕೊಳ್ಳಲು ಪ್ರತಿವರ್ಷ ಈ ತಂತ್ರ ಹೆಚ್ಚು ಜನಪ್ರಿಯವಾಗುತ್ತಿದ್ದಂತೆ. ರೈತರಿಗೆ ಹಳೆ ಸೀರೆಗಳು ಸಿಗದಂತೆ ಸಮಸ್ಯೆಯಾಗಿ ಈದೀಗ ಹೊಸ ಸೀರೆಗಳನ್ನು ತಂದು ಕಟ್ಟುವ ಅನಿವಾರ್ಯತೆಗೆ ಸಿಲುಕಿದ್ದಾರೆ.

    ಸೀರೆಯನ್ನು ಕಟ್ಟುವುದು ಒಂದು ಕೃಷಿಯ ಭಾಗವೇ ಆಗಿ ಹೋಗಿದೆ. ಒಂದು ಕಡೆ ರೈತರು ವ್ಯವಸಾಯಕ್ಕೆ ಹಣ ವ್ಯಯಿಸುವುದರೊಂದಿಗೆ ಇದೀಗ ಬೆಳೆ ರಕ್ಷಣೆಗೂ ಸೀರೆ ಖರೀದಿಸುವ ಪರಿಸ್ಥಿತಿ ನಿಮರ್ಾಣವಾಗಿದೆ. ಅದು ಸಹ ನೆರೆಯ ತೆಲಂಗಾಣದ ನಾರಾಯಣಪೇಟೆಗೆೆ ಹೋಗಿ ಹೊಸ ಸೀರೆಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಕನಿಷ್ಠ ಬರಗಾಲದ ಕಾರಣವಾದರೂ ಜಮೀನುಗಳಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ರೈತರ ಸಂಕಷ್ಟ ಅರಿತುಕೊಳ್ಳಬೇಕಿದೆ. ಕೃಷಿ ಉಪಕರಣಗಳ ಭಾಗವಾಗಿರುವ ಸೀರೆಗಳು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದಶರ್ಿ ಉಮೇಶ ಮುದ್ನಾಳ್ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts