More

    ಬೆಳೆ ಪರಿಹಾರ ನೀಡಲು ಆಗ್ರಹ


    ಯಾದಗಿರಿ: ಪ್ರಸಕ್ತ ಸಾಲಿನ ಮುಂಗಾರು ಮಳೆ ಅಭಾವದಿಂದ ರೈತರ ಬೆಳೆಗಳು ಒಣಗಿ ನಷ್ಟವಾಗಿದ್ದು ಸಕರ್ಾರ ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿ ಅಖಿಲ ಭಾರತ ರೈತ, ಕೃಷಿ ಕಾಮರ್ಿಕ ಸಂಘಟನೆಯಿಂದ ಬುಧವಾರ ನಗರದ ಜಿಲ್ಲಾಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
    ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ಕನರ್ಾಟಕದ ಬಹುತೇಕ ಕಡೆ ಮುಂಗಾರು ಮಳೆ ವಿಫಲವಾಗಿದ್ದು, ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಇದರಿಂದ ಬಿತ್ತನೆ ಮಾಡಲು ಭೂಮಿಯಲ್ಲಿ ಅವಶ್ಯಕ ತೇವಾಂಶ ಇಲ್ಲ. ಇನ್ನು ಕೆಲವು ಪ್ರದೇಶಗಳಲ್ಲಿ ಇರುವ ತೇವಾಂಶದಲ್ಲಿ ಬಿತ್ತನೆ ಮಾಡಿ ರೈತರು ಮಳೆಯ ನಿರೀಕ್ಷೆಯಲ್ಲಿ ಆಕಾಶದತ್ತ ಮುಖ ಮಾಡಿದ್ದಾರೆ. ಈಗಾಗಲೇ ಬಿತ್ತನೆ ಕಾರ್ಯ ಮುಗಿಸಿ ಹೊಲ, ಗದ್ದೆಗಳಲ್ಲಿ ಪೈರು ಬರುವ ಸಮಯವಾದರೂ ಸೂಕ್ತ ಸಮಯದಲ್ಲಿ ಮಳೆಯಾಗದಿರುವುದು ರೈತರಲ್ಲಿ ಆತಂಕ ಹುಟ್ಟಿಸಿದೆ ಎಂದರು.
    ಮಳೆಯಿಲ್ಲದೆ ಕೆಲ ಪ್ರದೇಶದಲ್ಲಿ ಅಲ್ಪ ಸ್ವಲ್ಪ ಚಿಗುರೊಡೆದಿರುವ ಪೈರುಗಳು ಸಹ ಕ್ರಮೇಣವಾಗಿ ಒಣಗುತ್ತಿವೆ. ಒಂದು ವೇಳೆ ಪರಿಸ್ಥಿತಿ ಹೀಗೆ ಮುಂದುವರಿದರೆ ಒಣ ಬರ ಬರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಸಹಜವಾಗಿ ಅಂಥ ಪರಿಸ್ಥಿತಿ ಎದುರಿಸಲು ಅವಶ್ಯಕ ಪೂರ್ವ ಸಿದ್ದತೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
    ಈಗಾಗಲೇ ಬಿತ್ತನೆ ಬೀಜ, ಕ್ರಿಮಿನಾಶಕ ಇನ್ನಿತರ ಖಚರ್ಿಗಾಗಿ ಸಾಲ ಮಾಡಿರುವ ರೈತರು ಹೈರಾಣಾಗಿದ್ದಾರೆ. ಸಹಜವಾಗಿಯೇ ಅವರ ಬದುಕು ತೀವ್ರ ಕಷ್ಟ್ಟದಲ್ಲಿದೆ. ಸಕರ್ಾರ ಈ ಬಗ್ಗೆ ಕೂಡಲೇ ಗಮನ ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
    ಜಿಲ್ಲಾ ಉಪಾದ್ಯಕ್ಷ ಜಮಾಲ್ಸಾಬ್, ರೈತರಿಗೆ ಆಸರೆಯಾಗಿ ಸಕರ್ಾರ ನಿಂತು ಅವರಿಗೆ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು. ನರೇಗಾ ಯೋಜನೆಯಡಿಯಲ್ಲಿ ವರ್ಷಪೂತರ್ಿ ಉದ್ಯೋಗ ನೀಡುವುದು, ರೈತರ ಸಾಲ ಮನ್ನಾ ಮಾಡುವುದು, ಕಾಖರ್ಾನೆಗಳನ್ನು ತೆರೆದು ಉದ್ಯೋಗ ಸೃಷ್ಠಿಸುವುದು. ಪ್ರತಿ ಕುಟುಂಬಕ್ಕೆ ಅವಶ್ಯಕವಿರುವಷ್ಟು ಪಡಿತರ ನೀಡುವುದು ಹೀಗೆ ಹಲವು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಜಿಲ್ಲಾ ಕಾರ್ಯದಶರ್ಿ ಸುಭಾಶ್ಚಂದ್ರ ಬಾವನೋರ್, ಭೀಮರಡ್ಡಿ ಹಿರೆಬಾನರ್, ಅಂಬರೀಶ್, ರಾಮರಡ್ಡಿಗೌಡ, ಶಣರಗೌಡ, ಮಲ್ಲಮ್ಮ ಸುರಪುರ, ಮಲ್ಲಮ್ಮ ಬಳಳ್ಳಿ, ಶಿವಲೀಲಾ, ಮೈಬೂಬಿ, ಮಲ್ಲಮ,್ಮ ದ್ಯಾವಮ,್ಮ ಸಲೀಂ, ಶಿವಪ್ಪ, ಶಾಂತಮ್ಮ, ಶರಣಪ್ಪ, ಸರೋಜಾ, ಅಯ್ಯಪ,್ಪ ನಿಂಗಮ,್ಮ ಚೆನ್ನಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts