More

    ಬೆಂಗಳೂರಿನ ಮುರಳಿಗೆ 18, ಸುಳ್ಯದ ಕೃತಿಗೆ 8 ಚಿನ್ನದ ಪದಕ

    ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವ ಫೆ.24ರ ಮಧ್ಯಾಹ್ನ 11.30ಕ್ಕೆ ವಿವಿಯ ‘ಜ್ಞಾನ ಸಂಗಮ ಆವರಣದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ. ಎಸ್. ವಿದ್ಯಾಶಂಕರ ತಿಳಿಸಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಟಯೋಟಾ ಕಿರ್ಲೋಸ್ಕರ್ ಮೋಟಾರ್ಸ್‌ ಉಪಾಧ್ಯಕ್ಷ ವಿಕ್ರಮ ಕಿರ್ಲೋಸ್ಕರ್ (ಮರಣೋತ್ತರ), ವಾಬ್ಕೋ ಇಂಡಿಯಾ ಮತ್ತು ಟಿವಿಎಸ್ ಆಟೋಮೋಟಿವ್ ಸೊಲ್ಯೂಷನ್ಸ್ ಕಂಪನಿ ಅಧ್ಯಕ್ಷ ಎಂ. ಲಕ್ಷ್ಮೀ ನಾರಾಯಣ, ಬೆಳಗಾವಿ ಫೆರೋಕಾಸ್ಟ್ ಇಂಡಿಯಾ (ಬಿಎಫ್‌ಪಿಎಲ್) ಕಂಪನಿ ವ್ಯವಸ್ಥಾಪ ನಿರ್ದೇಶಕ ಸಚಿನ್ ಸಬ್ನಿಸ್ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿ ಪ್ರದಾನ ಮಾಡಲಾಗುವುದು ಎಂದರು. ಬಿಇ/ಬಿಟೆಕ್ 51,905, ಬಿಪ್ಲಾನ್ 09, ಬಿ.ಆರ್ಕ್ 1032, ಎಂಬಿಎ 4279, ಎಂಸಿಎ 2028, ಎಂ.ಟೆಕ್ 1363, ಎಂ.ಆರ್ಕ್ 82 ಹಾಗೂ 1 ಪಿಜಿ ಡಿಪ್ಲೋಮಾ ಪದವಿಗಳನ್ನು ಪ್ರದಾನ ಮಾಡಲಾಗುವುದು. ಸಂಶೋಧನಾ ಅಧ್ಯಯನ ಮುಗಿಸಿದ 750 ಸಂಶೋಧನಾರ್ಥಿಗಳಿಗೆ ಪಿಎಚ್‌ಡಿ, 2 ಎಂ.ಎಸ್ಸಿ (ಇಂಜಿನಿಯರಿಂಗ್) ಬೈ ರಿಸರ್ಚ್ ಮತ್ತು 04 ಇಂಟಿಗ್ರೇಟೆಡ್ ಡುಯಲ್ ಡಿಗ್ರಿ ಪದವಿಗಳನ್ನು ಪ್ರದಾನ ಮಾಡಲಾಗುವುದು ಎಂದು ಹೇಳಿದರು.

    ಗೋಲ್ಡನ್ ಚಾನ್ಸ್

    ವಿಟಿಯು 25ನೇ ವರ್ಷಾಚರಣೆ ಆಚರಿಸಿಕೊಳ್ಳುವ ನಿಮಿತ್ತ 1998ರಿಂದ ಈವರೆಗೆ 8 ಸೆಮಿಸ್ಟರ್‌ಗಳಲ್ಲಿ ಪರೀಕ್ಷೆ ಬರೆದು ಅನುತೀರ್ಣರಾಗಿರುವ ಇಂಜಿನಿಯರಿಂಗ್ ಪದವಿ ವಿದ್ಯಾರ್ಥಿಗಳಿಗೆ ಹಾಗೂ ತಾಂತ್ರಿಕ ಶಿಕ್ಷಣದ ವಿವಿಧ ಸ್ನಾತಕೋತ್ತರ ವಿಷಯಗಳ ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ ‘ಗೋಲ್ಡನ್ ಚಾನ್ಸ್’ ಅಡಿ ಎರಡು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಹಳೇ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಪ್ರೊ. ಎಸ್. ವಿದ್ಯಾಶಂಕರ ತಿಳಿಸಿದರು.

    ಸ್ವರ್ಣ ವಿಜೇತರು

    ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಮುರಳಿ ಎಸ್.ಗೆ 18 ಚಿನ್ನದ ಪದಕ, ದ.ಕ. ಜಿಲ್ಲೆ ಸುಳ್ಯದ ಕುರುಂಜಿ ವೆಂಕಟರಮನ್ ಗೌಡ ಕಾಲೇಜ ಆಫ್ ಇಂಜಿನಿಯರಿಂಗ್‌ನ ಮೆಕ್ಯಾನಿಕಲ್ ವಿದ್ಯಾರ್ಥಿನಿ ಕೃತಿ ಎಸ್. 8, ಬೆಂಗಳೂರಿನ ಎಸಿಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಇ ಆ್ಯಂಡ್ ಸಿ ವಿದ್ಯಾರ್ಥಿನಿ ಸ್ವಾತಿ ಎಸ್. 7, ಎಸ್‌ಎಂವಿ ಇನ್ಸ್ಟಿಟ್ಯೂಟ್ ಆಫ್ ಟಿಕ್ನಾಲಜಿಯ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿನಿ ಸುಶ್ಮಿತಾ ಎಸ್.ವಿ. 6, ಬಿ.ಎನ್.ಎಂ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ ಪೂಜಾ ಬಾಸೆಲ್ 6, ಆರ್.ಎನ್.ಎಸ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಸ್ಟ್ರೂಮೆಂಟೇಷನ್ ವಿದ್ಯಾರ್ಥಿ ಅಭಿಲಾಷ್ ಎಂ. 4, ಬೆಂಗಳೂರು ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಇನ್ಪರ್ಮೇಷನ್ ಸೈನ್ಸ್ ವಿದ್ಯಾರ್ಥಿನಿ ಯುವಿಕಾ 4, ಎಂಬಿಎ ಆರ್‌ಎನ್‌ಎಸ್ ವಿದ್ಯಾರ್ಥಿನಿ ಹರ್ಷವರ್ಧಿನಿ ಜೆ. 4, ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಸಿಎ, ಬಿಎಂಎಸ್ ವಿದ್ಯಾರ್ಥಿ ಅರ್ಜುನ ಯು.ಕೆ. 3, ದಾವಣಗೆರೆಯ ಯುಬಿಡಿಟಿ ಕಾಲೇಜ್ ಆಫ್ ಇಂಜಿನಯರಿಂಗ್‌ನ ಎಂ.ಟೆಕ್ ವಿದ್ಯಾರ್ಥಿನಿ ಸಂಗೀತಾ ಜಿ.ಆರ್. 2 ಚಿನ್ನದ ಪದಕ ಗಳಿಸಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts