More

    ಬೆಂಗಳೂರಿನಲ್ಲಿ ಬಿಜಿನೆಸ್ ಸಮಾವೇಶ, ಲಿಂಗಾಯತ ಯುವ ವೇದಿಕೆ ಮನವಿ

    ಹುಬ್ಬಳ್ಳಿ: ಸಾಮಾಜಿಕ ಸೇವಾ ಟ್ರಸ್ಟ್ ಆಗಿರುವ ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯು (ಐಎಲ್​ವೈಎಫ್) 2023ರ ಜ. 20ರಿಂದ ಮೂರು ದಿನಗಳವರೆಗೆ ಬೆಂಗಳೂರಿನಲ್ಲಿ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಸಮಾವೇಶ ಏರ್ಪಡಿಸಲಾಗಿದೆ ಎಂದು ಮುಖ್ಯ ಸಂಚಾಲಕ ಸಂತೋಷ ಕೆಂಚಾಂಬ ತಿಳಿಸಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯದ ಉದ್ಯಮಿಗಳು, ಉದ್ಯಮಶೀಲರು ಹಾಗೂ ವೃತ್ತಿಪರರನ್ನು ಒಂದೇ ವೇದಿಕೆಯಡಿ ತರುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ ಪ್ರಾಯೋಗಿಕ ಮತ್ತು ದಿಟ್ಟ ಉಪಕ್ರಮಗಳನ್ನು ಅಭಿವೃದ್ಧಿಪಡಿಸುವ ಆರ್ಥಿಕ, ಕೈಗಾರಿಕಾ, ವ್ಯಾಪಾರ ಚಟುವಟಿಕೆಗಳನ್ನು ಮುಂದುವರಿಸುವ ಮಾಗೋಪಾಯಗಳ ಬಗ್ಗೆ ಇಲ್ಲಿ ಚರ್ಚೆ ನಡೆಯಲಿದೆ ಎಂದರು.

    ಜಗತ್ತಿನಾದ್ಯಂತ ಇರುವ ವೀರಶೈವ ಲಿಂಗಾಯತ ಸಮುದಾಯದ ಉದ್ಯಮ ದಿಗ್ಗಜರನ್ನು ಒಂದೇ ಸೂರಿನಡಿ ತರುವುದು ಮತ್ತು ಕರ್ನಾಟಕದಲ್ಲಿ ಹೂಡಿಕೆ ಅವಕಾಶಗಳ ಬಗ್ಗೆ ರ್ಚಚಿಸುವುದು. ಕ್ಲಸ್ಟರ್ ಆಧಾರಿತ ವಿಧಾನವನ್ನು ಕೈಗಾರಿಕೋದ್ಯಮಿಗಳು, ವ್ಯಾಪಾರ, ರೈತ ಸಮುದಾಯದಲ್ಲಿ ಉತ್ತೇಜಿಸುವುದು ಸೇರಿ ವಿವಿಧ ಕಾರಣಗಳಿಗೆ ಸಮಾವೇಶ ನಡೆಸಲಾಗುತ್ತಿದೆ ಎಂದು ತಿಳಿಸಿದರು.

    ಈ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕು. ಐಎಲ್​ವೈಎಫ್ ಅನ್ನು ರಾಜಕೀಯ ರಹಿತವಾಗಿ ರಚನೆ ಮಾಡಲಾಗಿದೆ. ಧಾರ್ವಿುಕ ಸಂಘಟನೆಯಲ್ಲ. ಕೇವಲ ವಾಣಿಜ್ಯೋದ್ಯಮ ಬೆಳವಣಿಗೆ ಇದರ ಗುರಿಯಾಗಿದೆ. 50 ಸಾವಿರ ಜನರು ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 300 ಮಳಿಗೆ ನಿರ್ವಿುಸಲಾಗುತ್ತಿದ್ದು, ವಸ್ತು, ಉತ್ಪಾದನೆಗಳನ್ನು ಪ್ರದರ್ಶನ ಮಾಡಬಹುದು ಎಂದರು.

    ಟ್ರಸ್ಟ್ ಅಧ್ಯಕ್ಷ ಅವಿನಾಶ ಪಾಳೇಗಾರ ಮಾತನಾಡಿ, 2013ರಲ್ಲಿ ಆರಂಭವಾದ ಸಂಸ್ಥೆಯು ಉತ್ತಮ ನೆಟ್​ವರ್ಕ್ ಮೂಲಕ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ನೀಡುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

    ಹುಬ್ಬಳ್ಳಿ ವಿಭಾಗದ ಅಧ್ಯಕ್ಷ ರವಿರಾಜ ಕಮ್ಮಾರ ಮಾತನಾಡಿ, ಹುಬ್ಬಳ್ಳಿ ಶಾಖೆಯನ್ನು ಈಗಷ್ಟೇ ಆರಂಭಿಸಲಾಗಿದೆ. ಇದರ ಮೂಲಕ ಕೌಶಲ ಅಭಿವೃದ್ಧಿಗೆ ಮಹತ್ವ ನೀಡಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts