More

    ಬೃಹತ್ ಸಮಾವೇಶ ಶೀಘ್ರ

    ಮೂಡಲಗಿ: ಪ್ರಥಮ ಬಾರಿ ಶಾಸಕನಾದ ಸಂದರ್ಭದಲ್ಲೇ ರಡ್ಡಿ ಸಮಾಜ ಕಟ್ಟಿ ಬೆಳೆಸಬೇಕು ಎಂಬ ಕನಸು ಕಂಡಿದ್ದೆ. ಆ ಕನಸು ನಾನು ಆರನೇ ಬಾರಿ ಶಾಸಕನಾಗಿ ಬೆಂಗಳೂರನಲ್ಲಿ ಬಹತ್ ಸಮಾವೇಶದಿಂದ ನನಸಾಗುತ್ತಿರುವುದಕ್ಕೆ ಹರ್ಷವಾಗುತ್ತಿದೆ ಎಂದು ಶಾಸಕ ರಾಮಲಿಂಗಾರಡ್ಡಿ ಹೇಳಿದರು.

    ತಾಲೂಕಿನ ವೆಂಕಟಾಪುರದಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಉದ್ಘಾಟನೆ, ಕಳಸಾರೋಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಸಮುದಾಯದ ಜನರು ದೇವಸ್ಥಾನದ ಜತೆಗೆ ಪ್ರತಿಯೊಂದು ಗ್ರಾಮದಲ್ಲಿ ಸಮುದಾಯ ಭವನ, ಜಿಲ್ಲೆಗೊಂದು ವಸತಿ ನಿಲಯ ನಿರ್ಮಿಸಿದರೆ ನಮ್ಮ ಸಮಾಜದ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

    ಸಮುದಾಯ ಜನರು ಒಗಟ್ಟಿನಿಂದ ರಡ್ಡಿ ಸಮಾಜಕ್ಕೆ ಬರಬೇಕಾದ ಸೌಲಭ್ಯ ನೀಡುವಂತೆ ಸರ್ಕಾರದ ಗಮನ ಸೆಳೆಯಬೇಕಿದೆ. ನಮ್ಮ ರಡ್ಡಿ ಸಮುದಾಯದ ಜನರಿಗೆ ಮಾತ್ರವಲ್ಲದೆ ಬೇರೆ ಸಮುದಾಯದ ಜನರಿಗೂ ಸಹಾಯ ಸಹಕಾರ ನೀಡಬೇಕು. ಶೀಘ್ರದಲ್ಲಿ ವಿಜಯಪುರ ಅಥವಾ ಬಾಗಲಕೋಟೆಯಲ್ಲಿ ಸಮುದಾಯ ಮತ್ತೊಂದು ಬಹತ್ ಸಮಾವೇಶ ಮಾಡಲಾಗುವುದು ಎಂದು ತಿಳಿಸಿದರು.

    ಬೆಂಗಳೂರು ರಡ್ಡಿ ಜನಸಂಘದ ನಿರ್ದೇಶಕ ಶೇಖರ ರಡ್ಡಿ, ಮಾಜಿ ಶಾಸಕರಾದ ಎನ್.ಎಚ್.ಕೋನರಡ್ಡಿ ಹಾಗೂ ಆರ್.ವಿ.ಪಾಟೀಲ ಮತ್ತು ಸರ್ವೋತ್ತಮ ಜಾರಕಿಹೊಳಿ ಮಾತನಾಡಿದರು. ಎರೆಹೊಸಳ್ಳಿ ಮಹಾಯೋಗಿ ವೇಮನ ರಡ್ಡಿ ಸಂಸ್ಥಾನ ಮಠದ ವೇಮನಾನಂದ ಸ್ವಾಮೀಜಿ, ಕಕಮರಿಯ ಅಭಿನವ ಗುರುಲಿಂಗ ಜಂಗಮ ಮಹಾರಾಜರು, ಕೊಣ್ಣೂರ ಹೊರಗಿನಮಠದ ಡಾ. ವಿಶ್ವಪ್ರಭುದೇವ ಶಿವಾರ್ಚಾಯರು ಆಶೀರ್ವಚನ ನೀಡಿದರು.

    ಈ ಸಂದರ್ಭದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಸಹಾಯ ಸಹಕಾರ ನೀಡಿದವರನ್ನು ಹಾಗೂ ಸಾಧಕರನ್ನು ಸತ್ಕರಿಸಲಾಯಿತು.

    ಅರವಿಂದ ದಳವಾಯಿ, ಭೀಮಪ್ಪ ಗಡಾದ, ಡಾ.ಗಿರೀಶ ಸೋನವಾಲ್ಕರ್, ಲಕ್ಷ್ಮಣ ದೇವರು, ಡಾ. ಕೆ.ವಿ.ಪಾಟೀಲ, ಜ್ಞಾನೇಶ ಮೇಲಪ್ಪಗೋಳ, ಸುರೇಶ ಯರಡ್ಡಿ, ಶಿವನಗೌಡ ಪಾಟೀಲ, ಎ.ಎಸ್.ಪಾಟೀಲ, ವಿಜಯ ಸೋನವಾಲ್ಕರ್, ಅಶೋಕ ನಾಯಿಕ, ಗೋವಿಂದ ಕೊಪ್ಪದ, ಕೇಶವ ದೇವಾಂಗ, ದೇವರಾಜ ಒಂಟಗೋಡಿ, ಯಶೋಧಾ ಒಂಟಗೋಡಿ, ರವೀಂದ್ರ ಹಕಾಟಿ, ಬಿ.ಜಿ.ಗೌಡಪ್ಪಗೋಳ, ಗೋಪಾಲ ಸಂಶಿ, ಗೋವಿಂದಗೌಡ ಪಾಟೀಲ, ಮಲ್ಲಮ್ಮ ಮೂರ್ತಿ ಮತ್ತು ಕಳಸ ದಾನಿ ರುಕ್ಕವ್ವ ರಂಗಪ್ಪ ಕೊಳಿಗುಡ್ಡ ಇತರರಿದ್ದರು. ಶಿಕ್ಷಕ ರಮೇಶ ಮಿರ್ಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ಬೂದಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts