More

    ಬುಲೆಟ್ ಬಾಬಾನ ನಿಜ ಬಣ್ಣ ಬಯಲು

    ಯಾದಗಿರಿ: ಕಳೆದ ಕೆಲ ವರ್ಷಗಳ ಹಿಂದೆ ತಾಲೂಕಿನ ಕೇಶ್ವರ ಗ್ರಾಮಕ್ಕೆ ಶಿವಾರೆಡ್ಡಿ ಹೆಸರಿನಿಂದ ಬಂದು ನೆಲೆಸಿ ನಂತರ ಬುಲೆಟ್ ಬಾಬಾ ಎಂದು ಹೆಸರು ಪಡೆದುಕೊಂಡ ವ್ಯಕ್ತಿಯ ನಿಜಬಣ್ಣ ಆತನ ಮೊದಲ ಪತ್ನಿಯೇ ಬಯಲು ಮಾಡಿದ ಘಟನೆ ಪಟ್ಟಣದಲ್ಲಿ ನಡೆದಿದೆ.

    ದಟ್ಟವಾದ ಕೆಶರಾಶಿ, ಹಣೆಯಲ್ಲಿ ಅರಿಶಿನ, ಕುಂಕುಮ ಮತ್ತು ಮೈತುಂಬ ರುದ್ರಾಕ್ಷಿ, ಕವಡಿ ಸರ ಹಾಕಿಕೊಂಡು ಗಡಿಭಾಗದ ಗ್ರಾಮೀಣ ಪ್ರದೇಶದಲ್ಲಿ ತಾನೊಬ್ಬ ಮಹಾಸಂತ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಬುಲೆಟ್ ಬಾಬಾನಲ್ಲಿ ಯಾವ ಶಕ್ತಿಯೂ ಇಲ್ಲ. ಜನರನ್ನು ದಾರಿ ತಪ್ಪಿಸುತ್ತಿದ್ದಾನೆ ಎಂದು ಆತನ ಮೊದಲ ಪತ್ನಿ ಕವಿತಾ ಜನ್ನು ಆರೋಪಿಸಿದ್ದಾರೆ. ಬುಧವಾರ ಪಟ್ಟಣಕ್ಕೆ ತಮ್ಮ ಮಕ್ಕಳು ಹಾಗೂ ನೆಂಟರೊಂದಿಗೆ ಬಂದ ಕವಿತಾ ಪೊಲೀಸ್ ಠಾಣೆಯಲ್ಲಿ ಬುಲೆಟ್ ಬಾಬಾನ ವಿರುದ್ಧ ದೂರು ಸಲ್ಲಿಸಲು ಮುಂದಾಗಿದ್ದಾರೆ.

    ಕಳೆದ 5 ವರ್ಷಗಳ ಹಿಂದೆ ಸಮೀಪದ ಯನಾಗುಂದಿಯಲ್ಲಿ ಆರ್ಯುರ್ವೇದ ಔಷಧಿ ಹಾಕಿದ್ದ ಶಿವಾರಡ್ಡಿ ಕೇಶ್ವಾರದ ವ್ಯಕ್ತಿಯೊಬ್ಬರ ಮೂಲಕ ಗ್ರಾಮಕ್ಕೆ ಆಗಮಿಸಿ ಹೊರ ವಲಯದಲ್ಲಿ ಠಿಕಾಣಿ ಹೂಡಿದ್ದಾರೆ. ಜನತೆಗೆ ಮಂತ್ರ,ತಂತ್ರಗಳ ಮೂಲಕ ಮಂಕು ಬೂದಿ ಎರಚಿ ತಾನೊಬ್ಬ ಸಂತ ಎಂದು ಹೇಳಿಕೊಂಡಿದ್ದ ಜನ್ನು ರಾಜು ಚಾರ್ಲ್ಸ್ ಬುಲೆಟ್ನಲ್ಲಿ ಸಂಚರಿಸುತ್ತಿದ್ದ. ಈತನ ಜಾಡು ಹಿಡಿದು ಗುರುಮಠಕಲ್ಗೆ ಮೊದಲ ಪತ್ನಿ ಬರುತ್ತಿದ್ದಂತೆಯೇ ಆಸಾಮಿ ಇದೀಗ ನಾಪತ್ತೆಯಾಗಿದ್ದಾನೆ.

    ಮೂಲತಃ ಆಂಧ್ರಪ್ರದೇಶದ ವರಂಗಲ್ನ ಲೇಬರ್ ಕಾಲೋನಿಯ ನಿವಾಸಿಯಾದ ಜನ್ನು ರಾಜು ಚಾರ್ಲ್ಸ್ 2003ರಲ್ಲಿ ಕವಿತಾಳನ್ನು ಅಂತರ್ಜಾತಿ ವಿವಾಹವಾಗಿದ್ದ. ಇಬ್ಬರು ಗಂಡು ಮಕ್ಕಳು ಇದ್ದಾರೆ. ನಂತರ ಪರಸ್ತ್ರೀ ಸಂಗ ಬೆಳೆಸಿದ್ದನ್ನು ತಿಳಿದು ಕವಿತಾ 2015 ರಲ್ಲಿ ವರಂಗಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಅಲ್ಲದೆ 2016 ಹಾಗೂ 2019ರಲ್ಲಿಯೂ ಈತನ ವಿರುದ್ಧ ಆಂಧ್ರಪ್ರದೇಶದ ವಿವಿಧ ನಗರಗಳಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೊದಲ ಪತ್ನಿ ಕವಿತಾ ದಾಖಲೆ ಸಮೇತ ತಿಳಿಸಿದರು.

    ಈತ ಯಾವುದೇ ಬಾಬಾ ಅಲ್ಲ. ಈತನ ಬಳಿ ಯಾವ ಶಕ್ತಿಯೂ ಇಲ್ಲ. ಆರ್ಯುರ್ವೇದ ಔಷಧಿಗಳ ತಿಳಿದಿರುವ ಈತ ಕುಂಕುಮ, ಅರಶಿಣದಲ್ಲಿ ಔಷಧಿಯನ್ನು ಸೇರಿಸಿ ಜನರಿಗೆ ನೀಡಿ ಮರಳು ಮಾಡುತ್ತಿದ್ದಾನೆ. ನನ್ನ ಮಕ್ಕಳನ್ನು ಸಾಕಲು ನಾನು ನಾನಾ ಕಷ್ಟಗಳನ್ನು ಅನುಭವಿಸಿ ನನ್ನ ಮಾವ (ಜನ್ನು ರಾಜುವಿನ ತಂದೆ)ನ ಮನೆಯಲ್ಲಿಯೇ ವಾಸವಾಗಿದ್ದೇನೆ. ಈತನ ಬಲೆಗೆ ಇನ್ಯಾವ ಮಹಿಳೆ ಬಿಳಕೂಡದು ಎಂಬ ಕಾರಣಕ್ಕೆ ಇಲ್ಲಿಯವರೆಗೂ ಬಂದು ದೂರು ದಾಖಲಿಸಿದ್ದೇನೆ ಎಂದು ಕವಿತಾ ಜನ್ನು ನೊಂದುಕೊಂಡು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾಳೆ. ಸಧ್ಯ ಈತನ ವಿರುದ್ಧ ಗುರುಮಠಕಲ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts