More

    ಬುದ್ನಿ ಗ್ರಾಮಕ್ಕೆ ಬಸ್ ಸಂಚಾರ ಆರಂಭ

    ಗೊಳಸಂಗಿ: ಚುನಾವಣೆ ಸಂದರ್ಭವನ್ನು ಹೊರತುಪಡಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮುಖವನ್ನೇ ಕಾಣದ ಬುದ್ನಿ ಗ್ರಾಮಕ್ಕೆ ಕೊನೆಗೂ ಗುರುವಾರ ಬಸ್ ಸಂಚಾರ ಆರಂಭಗೊಂಡಿದ್ದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.

    ಬಸ್ ಸಂಚಾರ ಆರಂಭಗೊಳ್ಳುವ ಮುನ್ಸೂಚನೆ ಬುಧವಾರ ಸಂಜೆ ಗ್ರಾಮದ ಜನತೆಗೆ ಸಿಗುತ್ತಿದ್ದಂತೆಯೇ ಇಡೀ ಗ್ರಾಮವೇ ಮದುವೆ ಮನೆಯಂತೆ ಲವಲವಿಕೆಯಿಂದ ತುಂಬಿರುವುದು ಕಂಡು ಬಂದಿತು. ಗುರುವಾರ ಬೆಳಗ್ಗೆ ಬಸ್ ಆಗಮನವಾಗುತ್ತಿದ್ದಂತೆಯೇ ಗ್ರಾಮಸ್ಥರು ತಳಿರು-ತೋರಣಗಳಿಂದ ಬಸ್ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಿದರು.

    ಬಸ್ ಚಾಲಕ ಬಿ.ಎಸ್.ತೋಟದ ಮಾತನಾಡಿ, ಪ್ರತಿದಿನ ಬೆಳಗ್ಗೆ 7.40 ಗಂಟೆಗೆ ಬಸವನಬಾಗೇವಾಡಿಯಿಂದ ಹೊರಡಲಿರುವ ಈ ಬಸ್ ಮುತ್ತಗಿ ಕ್ರಾಸ್, ಗೊಳಸಂಗಿ, ಬುದ್ನಿ, ಬೀರಲದಿನ್ನಿ, ಹುಣಶಾಳ-ಪಿಸಿ, ಗುಡದಿನ್ನಿ, ವಂದಾಲ ಮಾರ್ಗವಾಗಿ 9.30 ಗಂಟೆಗೆ ಬೇನಾಳ-ಆರ್‌ಎಸ್ ಗ್ರಾಮವನ್ನು ತಲುಪಲಿದೆ. ಪುನಃ 10 ಗಂಟೆಗೆ ಬೇನಾಳ-ಆರ್‌ಎಸ್ ಗ್ರಾಮದಿಂದ ಹೊರಟು ಅದೇ ಮಾರ್ಗವಾಗಿ 11.50 ಗಂಟೆಗೆ ಬಸವನಬಾಗೇವಾಡಿ ತಲುಪಲಿದೆ. ಹೀಗೆ ದಿನಕ್ಕೆ ಮೂರು ಬಾರಿ ನಿರಂತರ ಸಂಚಾರ ಮಾಡಲಿದೆ ಎಂದು ಪತ್ರಕರ್ತರಿಗೆ ಮಾಹಿತಿ ನೀಡಿದರು.

    ನಿರ್ವಾಹಕ ಡಿ.ಬಿ.ತಳವಾರ, ಪ್ರಮುಖರಾದ ರಾಮನಗೌಡ ಪಾಟೀಲ, ಬಸನಗೌಡ ಪಾಟೀಲ, ಚನಗೌಡ ಪಾಟೀಲ, ಹನುಮಂತ ವಾಲಿಕಾರ, ಬಸವರಾಜ ಚಲವಾದಿ, ಯಮನಪ್ಪ ಯಂಟಮನಿ, ಹುಸನಪ್ಪ ಗುತ್ತೇದಾರ, ಗಿರಿಜಮ್ಮ ವಾಲಿಕಾರ, ಲಕ್ಮ್ಷಣ ಮೇಲಿನಮನಿ, ತಾಯಪ್ಪ ಮೇಲಿನಮನಿ, ಬಸು ಗೌಂಡಿ, ಸಿದ್ದು ಮೆಳ್ಳಿ, ರಾಜಕುಮಾರ ವಾಲಿಕಾರ ಇತರರಿದ್ದರು.

    ನಮ್ಮೂರಿಗೆ ಬಸ್ ಸಂಚಾರ ಆರಂಭಗೊಂಡಿರುವುದು ಸಂತಸವುಂಟು ಮಾಡಿದೆ. ಆದರೆ ಪ್ರತಿದಿನ ಬೆಳಗ್ಗೆ 8.30 ರಿಂದ ಬಸ್ ಬುದ್ನಿಯಿಂದ ಬಸವನಬಾಗೇವಾಡಿ ಕಡೆಗೆ ಹೋಗುವಂತಾಗಬೇಕು. ಅಂದಾಗ ಮಾತ್ರ ಹುಣಶಾಳ-ಪಿಸಿ, ಬೀರಲದಿನ್ನಿ ಮತ್ತು ಬುದ್ನಿ ಗ್ರಾಮದ ಶಾಲೆ-ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
    ಬಸನಗೌಡ ಪಾಟೀಲ, ಗ್ರಾಪಂ ಮಾಜಿ ಸದಸ್ಯ, ಬುದ್ನಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts