More

    ಬೀದಿಬದಿ ವ್ಯಾಪಾರಸ್ಥರಿಗೆ ಪ್ಯಾಕೇಜ್ ಘೋಷಿಸಿ

    ಸವಣೂರ: ಬೀದಿಬದಿ ವ್ಯಾಪಾರಸ್ಥರನ್ನು ವಿಶೇಷ ಪ್ಯಾಕೇಜ್​ನಡಿ ಸೇರ್ಪಡೆಗೊಳಿಸಬೇಕು ಹಾಗೂ ಸಂತೆ ವ್ಯಾಪಾರಸ್ಥರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಬೀದಿಬದಿ ವ್ಯಾಪಾರಸ್ಥರು ಗುರುವಾರ ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರಿಗೆ ಮನವಿ ಸಲ್ಲಿಸಿದರು.

    ಸವಣೂರ ಪಟ್ಟಣ ಹಾಗೂ ಉಪ ವಿಭಾಗದ ವಿವಿಧ ತಾಲೂಕು ಮತ್ತು ವಿವಿಧ ಗ್ರಾಮಗಳಲ್ಲಿ ಜರಗುವ ಸಂತೆಯನ್ನು ಶಿಸ್ತುಬದ್ಧವಾಗಿ ಪುನಃ ಆರಂಭಿಸಬೇಕು. ಪಟ್ಟಣದ ಬೀದಿಬದಿಯಲ್ಲಿ ಕ್ರಮವಾಗಿ ತರಕಾರಿ ಹಾಗೂ ದಿನಸಿ ಮತ್ತು ಸಣ್ಣಪುಟ್ಟ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು. ಹಲವು ತಿಂಗಳಿಂದ ಅಸ್ತವ್ಯಸ್ಥಗೊಂಡಿರುವ ಸಣ್ಣ ವ್ಯಾಪಾರಸ್ಥರ ಜೀವನ ಸರಿದೂಗಿಸಲು ಸೂಕ್ತ ಕಾನೂನು ರೀತಿಯಲ್ಲಿ ಅವಕಾಶ ನೀಡಬೇಕು. ಬೀದಿಬದಿ ವ್ಯಾಪಾರಸ್ಥರಿಗೆ ಸರ್ಕಾರದ ವತಿಯಿಂದ ವಿಶೇಷ ಪ್ಯಾಕೇಜ್ ವಿತರಿಸಲು ಮುಂದಾಗಬೇಕು. ತಪ್ಪಿದಲ್ಲಿ ತಾಲೂಕು ಆಡಳಿತದಿಂದ ಸಣ್ಣ ವ್ಯಾಪಾರಸ್ಥರಿಗೆ ದಿನಸಿ ಕಿಟ್ ವಿತರಣೆ ಹಾಗೂ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿಕೋರಲಾಗಿದೆ.

    ಬೀದಿಬದಿ ವ್ಯಾಪಾರಸ್ಥರಾದ ಚನ್ನಬಸಯ್ಯ ದುರ್ಗದಮಠ, ಉಳವಪ್ಪ ನೀರಲಗಿ, ನಾಗೇಶ ಪಾಟೀಲ, ಎಂ.ಎಂ. ನದಾಫ್, ಶಬ್ಬೀರ ಬಂಕಾಪುರ, ವಿನಾಯಕ ಕೊಳೂರ, ಹೆಗ್ಗಪ್ಪ ಕಲಾಲ, ಈರಣ್ಣ ತೆಗ್ಗಿಹಳ್ಳಿ, ಕೇದಾರಪ್ಪ ಬಾಬನಿ, ಜಹೀರ ಚಿಲ್ಲೂರ, ನಿಂಗಯ್ಯ ಹಳ್ಳಿಗುಡಿಮಠ, ಅಲ್ತಾಫ್ ಕಿತ್ತೂರ, ಅಲ್ತಾಪ ಕೊಯ್ತೆವಾಲೆ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts