More

    ನಾಳೆಯೇ ಚುನಾವಣಾ ವೇಳಾಪಟ್ಟಿ ಪ್ರಕಟ..ಇಸಿಐ ಸಜ್ಜು..

    ನವದೆಹಲಿ: ಬಹುನಿರೀಕ್ಷಿತ ಲೋಕಸಭಾ ಚುನಾವಣೆಯ ದಿನಾಂಕ ಶನಿವಾರ ಪ್ರಕಟವಾಗಲಿದೆ. ಈ ಸಂಬಂಧ ಭಾರತೀಯ ಚುನಾವಣಾ ಆಯೋಗವು (ಇಸಿಐ) ವೇಳಾಪಟ್ಟಿಯನ್ನು ನಾಳೆ ಮಧ್ಯಾಹ್ನ 3ಗಂಟೆಗೆ ಪ್ರಕಟಿಸಲಿದೆ.

    ಒಟ್ಟು 543 ಲೋಕಸಭಾ ಸ್ಥಾನಗಳಿಗೆ 8ರಿಂದ 9 ಹಂತಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಚುನಾವಣೆ ದಿನಾಂಕ ಘೋಷಣೆಯ ತತ್​ಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ. ಕರ್ನಾಟಕದ 28 ಲೋಕಸಭಾ ಸ್ಥಾನಗಳಿಗೆ 2 ಹಂತದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಈಗಾಗಲೇ ಆಯೋಗವು ವಿವಿಧ ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ಪೂರ್ಣಗೊಳಿಸಿದೆ.

    ಇದನ್ನೂ ಓದಿ:ಪವನ್ ಕಲ್ಯಾಣ್​ಗೆ ಟಕ್ಕರ್​ ಕೊಡಲು ರಾಮ್​ಗೋಪಾಲ್​ವರ್ಮಾ ದಿಢೀರ್ ರಾಜಕೀಯ ಪ್ರವೇಶ!

    EC Notification

    2019 ರಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ಮಾರ್ಚ್ 10 ರಂದು ಘೋಷಿಸಲಾಗಿತ್ತು. ಏಳು ಹಂತದ ಚುನಾವಣೆ ಏಪ್ರಿಲ್ 11, 2019 ರಂದು ಪ್ರಾರಂಭವಾಗಿದ್ದು, ಮೇ 19, 2019 ರಂದು ಕೊನೆಗೊಂಡಿತು. ಮತಗಳ ಎಣಿಕೆಯನ್ನು ಮೇ 23 ರಂದು ಮಾಡಲಾಗಿತ್ತು. ಇದರಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಅಧಿಕಾರಕ್ಕೆ ಮರಳಿತ್ತು. ಮೋದಿಯವರು 2 ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡಿದ್ದರು. 543 ಲೋಕಸಭಾ ಸ್ಥಾನಗಳಿದ್ದು, ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಲು ಪ್ರಾರಂಭಿಸಿರುವುದು ತಿಳಿದ ಸಂಗತಿಯೇ.

     

    ಸಮಂತಾ ಫಾಲೋವರ್ಸ್ ದಿಕ್ಕು ತಪ್ಪಿಸುತ್ತಿದ್ದಾರೆ.. ವೈದ್ಯರ ಪೋಸ್ಟ್ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts