More

    ಬೀದಿಗಳ ಕಸ ಗುಡಿಸುವ ಶಿಕ್ಷೆ

    ಅಳ್ನಾವರ: ಕರೊನಾ ತಡೆಗಾಗಿ ತಾಲೂಕಾಡಳಿತ ಮತ್ತು ಪಟ್ಟಣ ಪಂಚಾಯಿತಿ ಹಲವು ಕ್ರಮಗಳನ್ನು ಕೈಗೊಂಡರೂ ಅನವಶ್ಯಕ ರಸ್ತೆಗಿಳಿದವರಿಗೆ ತಹಸೀಲ್ದಾರ್, ಪಪಂ ಸಿಬ್ಬಂದಿ, ಪೊಲೀಸರ ಸಹಕಾರದೊಂದಿಗೆ ಬೀದಿ ಬೀದಿಗಳ ಕಸ ಗುಡಿಸುವ ಶಿಕ್ಷೆ ನೀಡಿದರು.

    ಪ್ರತಿದಿನ 4 ತಾಸು ತೆರೆಯುತ್ತಿರುವ ಕಿರಾಣಿ ಅಂಗಡಿ, ಹಾಲು, ಔಷಧ ಅಂಗಡಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ. ಆದರೆ, ತರಕಾರಿ ವ್ಯಾಪಾರಕ್ಕೆ ವಾರ್ಡ್​ಗೆ ಇಬ್ಬರಂತೆ ನೇಮಿಸಿದರೂ ಒಂದೇ ಸ್ಥಳದಲ್ಲಿ ಕೂತು ವ್ಯಾಪಾರ ಮಾಡುತ್ತಿದ್ದಾರೆ. ತಿಳಿವಳಿಕೆ ಹೇಳಿ ಹಲವು ಚಿಕ್ಕ ಶಿಕ್ಷೆಗಳನ್ನು ನೀಡಿದರೂ ಜನರು ವಿನಾಕಾರಣ ತಿರುಗಾಟ ನಡೆಸುತ್ತಿದ್ದಾರೆ. ಮಂಗಳವಾರ ಬೀದಿಗಳಲ್ಲಿ ಅನವಶ್ಯಕವಾಗಿ ಸಂಚರಿಸುತ್ತಿದ್ದವರನ್ನು ತಡೆದು, ಅವರಿಂದ ಕಸ ಗುಡಿಸುವ ಕಾರ್ಯ ನಡೆಸಲಾಯಿತು.

    ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿಗೆ ಒಂದರಂತೆ ತಾಲೂಕಿನ 4 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಕಾರ್ಯಪಡೆ ರಚಿಸಲಾಗಿದೆ. ಈ ಕಾರ್ಯಪಡೆಯಿಂದ ಕರೊನಾ ರೋಗದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪೊಲೀಸ್ ಸಿಬ್ಬಂದಿ ಬಂದಾಗ ಮಾತ್ರ ನಿಶ್ಯಬ್ದ ವಾತಾವರಣವಿರುತ್ತದೆ. ತುರ್ತು ಸಂದರ್ಭದಲ್ಲಿ ಹಳ್ಳಿಯಿಂದ ಹಳ್ಳಿಗೆ ಜನ ಸಂಚಾರ ನಡೆಯುತ್ತಲೇ ಇದೆ. ತಾಲೂಕಿನಲ್ಲಿರುವ 5 ಗೌಳಿ ಜನಾಂಗದ ದೊಡ್ಡಿಗಳ ಜನರ ಸ್ಥಿತಿ ಹೇಳತೀರದಾಗಿದೆ. ಇವರೆಲ್ಲ ಜಾನುವಾರುಗಳ ಹಾಲಿನಿಂದ ಖವಾ ತಯಾರಿಸಿ ಧಾರವಾಡ ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಆದರೀಗ ಕರೊನಾ ಬಗ್ಗೆ ಎಲ್ಲೆಡೆ ಮಾರುಕಟ್ಟೆ ಬಂದ್ ಆಗಿರುವ ಕಾರಣ ಮತ್ತು ಕೂಲಿ ಕೆಲಸವಿಲ್ಲದೆ ಉಪಜೀವನ ನಡೆಸುವುದು ಕಷ್ಟವಾಗಿದೆ. ಹಳ್ಳಿಗಳಲ್ಲಿ ಆರೋಗ್ಯ ತಪಾಸಣೆ, ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ವೈದ್ಯರು, ನರ್ಸ್​ಗಳು ಇಲ್ಲದಂತಾಗಿ ಅಳ್ನಾವರ ಇಲ್ಲವೇ ಧಾರವಾಡ ನಗರವನ್ನು ಅವಲಂಬಿಸುವಂತಾಗಿದೆ.

    ಆರೋಗ್ಯ ತಪಾಸಣೆ ಹಾಗೂ ಸಾಮಾನ್ಯ ಕಾಯಿಲೆಗಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ವೈದ್ಯರಿಂದ ದೂರವಾಣಿ ಮೂಲಕ ಸಲಹೆಗಳನ್ನು ಪಡೆಯಲು ಆಶಾ ಕಾರ್ಯಕರ್ತೆಯರ ಮೂಲಕ ಜನರಿಗೆ ತಿಳಿಸಲು ಸೂಚಿಸಲಾಗಿದೆ. | ಅಮರೇಶ ಪಮ್ಮಾರ, ತಹಸೀಲ್ದಾರ್, ಅಳ್ನಾವರ

    ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸá-ವುದು ಅತ್ಯವಶ್ಯವಾಗಿದೆ. | ಆನಂದ ಶಿಂಧೆ, ಕುಂಬಾರಗೊಪ್ಪ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts