More

    ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಗೆ ಆಗ್ರಹ -ಸಚಿವ ಸಂತೋಷ್ ಲಾಡ್‌ಗೆ ಮನವಿ

    ದಾವಣಗೆರೆ : ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಕಾರ್ಮಿಕ ಸಚಿವರನ್ನು ಒತ್ತಾಯಿಸಿದೆ.

    ಬೆಂಗಳೂರಿಗೆ ಗುರುವಾರ ನಿಯೋಗ ತೆರಳಿದ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಸದಸ್ಯರು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಲ್ಲಿ ಹಲವು ಸಮಸ್ಯೆ ನಿವೇದಿಸಿಕೊಂಡು ಹಕ್ಕೊತ್ತಾಯ ಮಂಡಿಸಿದ್ದಾರೆ.
    ದಾವಣಗೆರೆ ನಗರವೊಂದರಲ್ಲಿಯೇ ಸುಮಾರು 10 ಸಾವಿರ ಬೀಡಿ ಕಾರ್ಮಿಕ ಮಹಿಳೆಯರಿದ್ದು, ರಾಜ್ಯದಲ್ಲಿ ಸಾವಿರಾರು ಜನರಿದ್ದಾರೆ. ಅವರಿಗೆ ಸಾಮಾಜಿಕ ಭದ್ರತೆ ಹಾಗೂ ಕನಿಷ್ಠ ಆರೋಗ್ಯ ವ್ಯವಸ್ಥೆಗಳಿಲ್ಲ. ಸರ್ಕಾರ ಮೂಲ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
    ಬೀಡಿ ಮತ್ತು ಸಿಗಾರ್ ಕಾರ್ಮಿಕರು ಕಾಯ್ದೆ 1966ನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು ಮತ್ತು ಕಾರ್ಮಿಕ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು, ಸೆಸ್ ಕಾಯ್ದೆ ಮರು ಜಾರಿಗೊಳಿಸಬೇಕು, ಬೀಡಿ ಕಾರ್ಮಿಕರ ಸಮೀಕ್ಷೆ ಕೈಗೊಂಡು ಎಲ್ಲರಿಗೂ ಗುರುತಿನ ಚೀಟಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
    ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬೀಡಿ ಕಾರ್ಮಿಕರ ಕುರಿತು ಸಭೆ ನಡೆಸಬೇಕು, ನಗರದಲ್ಲಿ ಆರೋಗ್ಯ ಸೇವೆ ಒದಗಿಸಲು ಡಿಸ್ಪೆನ್ಸರಿ ತೆರೆಯಬೇಕು ಹಾಗೂ ಎಲ್ಲ ಬೀಡಿ ಕಾರ್ಮಿಕರನ್ನು ಇಎಸ್‌ಐ ಆರೋಗ್ಯ ಯೋಜನೆಯಡಿ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.
    ಯೂನಿಯನ್ ಅಧ್ಯಕ್ಷೆ ಜಬೀನಾಖಾನಂ, ಎಂ. ನಾಜೀಮ, ಹಸೀನಾ, ನಗೀನಾ, ಶಾಹೀನಾ, ನೂರ್‌ಫಾತಿಮಾ, ಎಂ. ಕರಿಬಸಪ್ಪ ಇತರರು ನಿಯೋಗದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts