More

    ಬಿಸಿ ಮುಟ್ಟಿಸತೊಡಗಿದ ಖಾಕಿ

    ಹುಬ್ಬಳ್ಳಿ: ನಗರದ ಪ್ರಮುಖ ಮತ್ತು ಒಳ ರಸ್ತೆಗಳಲ್ಲಿ ಅನಗತ್ಯವಾಗಿ ತಿರುಗುತ್ತಿದ್ದ ಬೈಕ್, ಆಟೊ ಹಾಗೂ ಕಾರು ಸವಾರರಿಗೆ ಪೊಲೀಸರು ಬುಧವಾರ ಬಿಸಿ ಮುಟ್ಟಿಸಿದ್ದಾರೆ.

    ಕಳೆದ ನಾಲ್ಕೈದು ದಿನಗಳಿಂದ ವಾಹನ ಸವಾರರ ಅನಗತ್ಯ ಸಂಚಾರ ನಗರದಲ್ಲಿ ಮುಂದುವರಿದಿತ್ತು. ಕಿಮ್ಸ್​ನಲ್ಲಿ ಕರೊನಾ ಪೀಡಿತ ರೋಗಿ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಂತೆಯೇ ವಾಹನಗಳ ಅನಗತ್ಯ ಸಂಚಾರ ಮತ್ತಷ್ಟು ತೀವ್ರಗೊಂಡಿತ್ತು.

    ಕೆಲವೆಡೆ ಪೊಲೀಸರು ಸವಾರರಿಗೆ ತಿಳಿವಳಿಕೆ ನೀಡಿದ್ದರು. ಇನ್ನೂ ಕೆಲವೆಡೆ ಸವಾರರ ಸಂಚಾರ ಕಂಡೂ ಕಾಣದಂತೆ ಪೊಲೀಸರು ವರ್ತಿಸುತ್ತಿದ್ದರು. ಇದರಿಂದ ಪೊಲೀಸರು ತಮಗೇನೂ ಮಾಡಲಾರರೆಂದು ವಾಹನ ಸವಾರರು ತಿರುಗಾಟ ಮುಂದುವರಿಸಿದ್ದರು.

    ಬುಧವಾರ ಏಕಾಏಕಿ ಲಾಠಿ ಕೈಯಲ್ಲಿ ಹಿಡಿದು ರಸ್ತೆಗೆ ಇಳಿದ ಪೊಲೀಸರು, ವಾಹನ ಸವಾರರಿಗೆ ಬಿಸಿ ಮುಟ್ಟಿಸಿದರು. ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ರಮೇಶ ಭವನ, ಸವೋದಯ ವೃತ್ತ, ಹೊಸೂರು ವೃತ್ತ ಸೇರಿ ವಿವಿಧೆಡೆ ಪೊಲೀಸರು ಬೈಕ್ ಹಾಗೂ ಆಟೊ ಸವಾರರಿಗೆ ಲಾಠಿ ರುಚಿ ತೋರಿಸಿದರು. ಕಾರು ಸವಾರರನ್ನು ನಿಲ್ಲಿಸಿ, ದಾಖಲೆ ಪರಿಶೀಲಿಸಿದರು.

    ಚನ್ನಮ್ಮ ವೃತ್ತದಲ್ಲಿ ವೃದ್ಧರನ್ನು ಕರೆದುಕೊಂಡು ಹೋಗುತ್ತಿದ್ದ ಆಟೊ ಚಾಲಕನನ್ನು ತಡೆದ ಪೊಲೀಸರು, ಆಸ್ಪತ್ರೆಗೆ ಹೋಗುವುದಾದರೆ 108 ಸಂಖ್ಯೆಗೆ ಕರೆ ಮಾಡಿ ಆಂಬುಲೆನ್ಸ್​ನಲ್ಲಿ ತೆರಳುವಂತೆ ಸೂಚಿಸಿದರು. ಬಾಡಿಗೆ ಆಸೆಗಾಗಿ ಆಟೊ ಚಲಾಯಿಸುತ್ತಿದ್ದವರಿಗೆ ಲಾಠಿ ರುಚಿ ತೋರಿಸಿ, ಲಾಕ್​ಡೌನ್ ಪೂರ್ಣಗೊಳ್ಳುವವರಿಗೆ ರಸ್ತೆಗೆ ಇಳಿಯದಂತೆ ಎಚ್ಚರಿಕೆ ನೀಡಿದರು.

    ಚನ್ನಮ್ಮ ವೃತ್ತದಲ್ಲಿ 10ಕ್ಕೂ ಹೆಚ್ಚು ಬೈಕ್ ಸವಾರರಿಗೆ ಬಸ್ಕಿ ಹೊಡೆಸಿದ ಪೊಲೀಸರು, ಕಾರು, ಬೈಕ್​ಗಳನ್ನು ವಶಕ್ಕೆ ಪಡೆದರು.

    ಆದರೂ ಸ್ಟೇಶನ್ ರಸ್ತೆ, ಗೋಕುಲ ರಸ್ತೆ ಸಂರ್ಪಸುವ ಒಳಗಿನ ಬಡಾವಣೆ, ಗದಗ ರಸ್ತೆ, ಭವಾನಿ ನಗರ, ವಿಜಯ ನಗರ, ವಿದ್ಯಾನಗರ ಇತರ ಪ್ರದೇಶಗಳಲ್ಲಿ ಅನಗತ್ಯವಾಗಿ ಸಂಚರಿಸುತ್ತಿರುವ ವಾಹನ ಸವಾರರು ಕಂಡುಬಂದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts